ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್: ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯ ತಪ್ಪಿಸಲು ವಯೋಮಿತಿಯನ್ನು 25ಕ್ಕೆ ಇಳಿಸಲು ಮನವಿ

|

Updated on: May 30, 2021 | 2:45 PM

Karnataka Lockdown Package: ಎಷ್ಟೋ ಯುವ ಕಲಾವಿದರು 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುತ್ತಾರೆ. ಅಂತಹ ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್ ಸಿಗದೇ ಅನ್ಯಾಯವಾಗಲಿದೆ. ತಮ್ಮ 15ನೇ ವಯಸ್ಸಿಗೇ ಯಕ್ಷಗಾನ ಮೇಳ ಸೇರಿ 10-20 ವರ್ಷ ಮೇಳಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 200 ಕಲಾವಿದರು ಇದ್ದಾರೆ. ಅಂತಹ ಕಲಾವಿದರಿಗೆ ನೆರವು ಪಡೆಯುವ ಅರ್ಹತೆ ಪಡೆಯದಂತಾಗಿದೆ.

ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್: ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯ ತಪ್ಪಿಸಲು ವಯೋಮಿತಿಯನ್ನು 25ಕ್ಕೆ ಇಳಿಸಲು ಮನವಿ
ಸಾಂದರ್ಭಿಕ ಚಿತ್ರ
Follow us on

ಉಡುಪಿ: ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೊವಿಡ್ ಲಾಕ್​ಡೌನ್​ನಿಂದ ತೊಂದರೆಗೊಳಗಾದ ಕಲಾವಿದರಿಗೆ ಸರ್ಕಾರ ನೆರವು ಘೋಷಿಸಿದೆ. ಆದರೆ ನೆರವು ಪಡೆಯುವ ಕಲಾವಿದರಿಗೆ 35 ವರ್ಷ ಪೂರ್ಣಗೊಂಡಿರಬೇಕು ಎಂನ ನಿಯಮ ರೂಪಿಸಿದ್ದು, ಇದರಿಂದ ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯವಾಗಲಿದೆ ಎಂಬ ದೂರು ಕೇಳಿಬಂದಿದೆ. ಲಾಕ್​ಡೌನ್ ಪ್ಯಾಕೇಜ್ ಪಡೆಯಲು ನಿಗದಿಪಡಿಸಿರುವ ವಯೋಮಿತಿಯನ್ನು 35ರಿಂದ 25ಕ್ಕೆ ಇಳಿಸಲಯ ಸರ್ಕಾರಕ್ಕೆ 40 ವೃತ್ತಿಪರ ಮೇಳಗಳ ಕಲಾವಿದರು ಮನವಿ ಮಾಡಿದ್ದಾರೆ.

ಎಷ್ಟೋ ಯುವ ಕಲಾವಿದರು 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುತ್ತಾರೆ. ಅಂತಹ ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್ ಸಿಗದೇ ಅನ್ಯಾಯವಾಗಲಿದೆ. ತಮ್ಮ 15ನೇ ವಯಸ್ಸಿಗೇ ಯಕ್ಷಗಾನ ಮೇಳ ಸೇರಿ 10-20 ವರ್ಷ ಮೇಳಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 200 ಕಲಾವಿದರು ಇದ್ದಾರೆ. ಅಂತಹ ಕಲಾವಿದರಿಗೆ ನೆರವು ಪಡೆಯುವ ಅರ್ಹತೆ ಪಡೆಯದಂತಾಗಿದೆ. ಅವರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿ ಸುಮಾರು 40 ವೃತ್ತಿಪರ ಮೇಳಗಳ ಕಲಾವಿದರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಈ ಕಲಾವಿದರು ಸಹ ವರ್ಷದ ಏಳು ತಿಂಗಳು ರಾತ್ರಿ ಯಕ್ಷಗಾನ ಸೇವೆ ನೀಡುತ್ತಾರೆ. ಲಾಕ್​ಡೌನ್​ನಿಂದ ಯಕ್ಷಗಾನ ವಿಲ್ಲದೆ ಯುವ ಕಲಾವಿದರು ಅತಂತ್ರರಾಗಿದ್ದಾರೆ. ಹೀಗಾಗಿ ಲಾಕ್​ಡೌನ್ ಪ್ಯಾಕೇಜ್ ಪಡೆಯಲು ಕಲಾವಿದರಿಗೆ ಇರುವ ವಯೋಮಿಯನ್ನು 25 ವರ್ಷಗಳಿಗೆ ಇಳಿಸಲು ಯಕ್ಷಗಾನ ಕಲಾವಿದರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್​ನಿಂದ ಗುಣಮುಖ

Covid Warriors: ಇನ್ಮುಂದೆ ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರೂ ಕೊವಿಡ್ ವಾರಿಯರ್ಸ್​

(Karnataka Lockdown Package Yakshagana Young Artist requests to reduce age to 25 to avoid injustice)

Published On - 2:44 pm, Sun, 30 May 21