ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ: ಹಿರಿಯ ಪುತ್ರಿಗೆ ಸರ್ಕಾರಿ ಉದ್ಯೋಗ, ಮನೆ ದುರಸ್ಥಿಯ ಭರವಸೆ ನೀಡಿದ ಸಚಿವ ಸುರೇಶ್​ ಕುಮಾರ್

| Updated By: guruganesh bhat

Updated on: Jun 07, 2021 | 9:18 PM

ಸರ್ಕಾರದ ವತಿಯಿಂದಲೇ ಮನೆ ದುರಸ್ತಿ ಮಾಡಿಸಿಕೊಡುತ್ತೇವೆ. ಜಮೀನಿನಲ್ಲಿ ಬೋರ್​ವೆಲ್​ ಕೊರೆಸಿ ಕೊಡುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು. ಜತೆಗೆ, ಕೊವಿಡ್​ನ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ತಲೆದೋರುವುದು ಸಹಜ. ಇದನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಧೈರ್ಯ ಹೇಳಿದರು.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ: ಹಿರಿಯ ಪುತ್ರಿಗೆ ಸರ್ಕಾರಿ ಉದ್ಯೋಗ, ಮನೆ ದುರಸ್ಥಿಯ ಭರವಸೆ ನೀಡಿದ ಸಚಿವ ಸುರೇಶ್​ ಕುಮಾರ್
ಸಚಿವ ಎಸ್. ಸುರೇಶ್ ಕುಮಾರ್
Follow us on

ಚಾಮರಾಜನಗರ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಎಚ್​.ಮೂಕಹಳ್ಳಿಯ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಕುಟುಂಬದ ಇತರ ಸದಸ್ಯರಿಗೆ ಸಾಂತ್ವನ ಹೇಳಿದರು. ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪುತ್ರಿಗೆ ಸರ್ಕಾರಿ ನೌಕರಿ ಕೊಡಿಸಲಾಗುವುದು. ಸರ್ಕಾರದ ವತಿಯಿಂದಲೇ ಮನೆ ದುರಸ್ತಿ ಮಾಡಿಸಿಕೊಡುತ್ತೇವೆ. ಜಮೀನಿನಲ್ಲಿ ಬೋರ್​ವೆಲ್​ ಕೊರೆಸಿ ಕೊಡುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು. ಜತೆಗೆ, ಕೊವಿಡ್​ನ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ತಲೆದೋರುವುದು ಸಹಜ. ಇದನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಧೈರ್ಯ ಹೇಳಿದರು.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಎಚ್​.ಮೂಕಹಳ್ಳಿಯಲ್ಲಿ ನಡೆದಿತ್ತು. ಗ್ರಾಮದ ಮಹದೇವಪ್ಪ (46), ಅವರ ಪತ್ನಿ ಮಂಗಳಮ್ಮ (40), ಮಕ್ಕಳಾದ ಜ್ಯೋತಿ (14) ಮತ್ತು ಶ್ರುತಿ (12) ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ ಈ ಕುಟುಂಬದ ಎಲ್ಲರೂ ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿತ್ತು.

ಮಳೆ ಆಶ್ರಿತ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ಮಹದೇವಪ್ಪ ಅವರಿವರ ಹೊಲಗಳಲ್ಲಿ ಕೂಲಿಗಳಿಗೂ ಹೋಗುತ್ತಿದ್ದರು. ಕೂಲಿಗೆಂದು ಕರೆಯಲು ಬುಧವಾರ ಮುಂಜಾನೆ ಗ್ರಾಮದವರೊಬ್ಬರು ಮಹದೇವಪ್ಪ ಅವರ ಮನೆಯ ಬಾಗಿಲು ಬಡಿದಾಗ ಯಾರೂ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದ ಗ್ರಾಮಸ್ಥರು ಹೆಂಚು ಸರಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.

ಕುಟುಂಬದ ಸದಸ್ಯರೆಲ್ಲರೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಜವಾದ ವಿಚಾರ ಬೆಳಕಿಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಸ್ಥಳಕ್ಕೆ ಡಿವೈಎಸ್​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಮಹದೇವಪ್ಪ ಅವರು ಮಂಗಳವಾರ ಗ್ರಾಮಸ್ಥರೊಬ್ಬರ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ದರು. ನಂಜನಗೂಡು ತಾಲ್ಲೂಕಿನ ಹಳ್ಳಿಯೊಂದರಲ್ಲಿರುವ ಹಿರಿಯ ಮಗಳ ಜೊತೆಗೂ ಚೆನ್ನಾಗಿ ಮಾತನಾಡಿದ್ದರು ಎಂದು ತಿಳಿದುಬಂದಿತ್ತು.

ಕೊರೊನಾ ಸೋಂಕಿನ ಭೀತಿಯಿಂದ ಗ್ರಾಮಸ್ಥರು ಈ ಕುಟುಂಬದ ಜೊತೆಗೆ ಸರಿಯಾಗಿ ಬೆರೆಯುತ್ತಿರಲಿಲ್ಲ. ಲಾಕ್​ಡೌನ್ ಕಾರಣದಿಂದ ಕೂಲಿ ಕೆಲಸಗಳೂ ಸಿಗುತ್ತಿರಲಿಲ್ಲ. ಒಂಟಿತನ ಮತ್ತು ಆರ್ಥಿಕ ಸಂಕಷ್ಟದಿಂದ ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹಲವಾರು ಜನರು ವಾಟ್ಸಾಪ್​ ಗುಂಪುಗಳಲ್ಲಿ ಮೃತರ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಪೊಲೀಸರು ಅಥವಾ ಜಿಲ್ಲಾಡಳಿತ ಈ ಸಾವನ್ನು ಹಸಿವಿನಿಂದ ಮಾಡಿಕೊಂಡ ಆತ್ಮಹತ್ಯೆ ಎಂದು ಈವರೆಗೆ ಘೋಷಿಸಿಲ್ಲ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಇದನ್ನೂ ಓದಿ: PM Narendra Modi: ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ

3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ
(Karnataka Minister Suresh Kumar assures govt job for elderly daughter home repair and borewell for 4 people suicide incident in Chamarajanagar)

Published On - 8:09 pm, Mon, 7 June 21