AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ

146 ತಾಲ್ಲೂಕು ಹಾಗೂ 19 ಜಿಲ್ಲಾಸ್ಪತ್ತೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನೂರು ಬೆಡ್​ ಆಸ್ಪತ್ರೆ, ಪ್ರತಿ 4 ಕ್ಷೇತ್ರಗಳಿಗೆ ಒಂದು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಘೋಷಿಸಿದರು.

3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ
ಡಿಸಿಎಂ ಅಶ್ವತ್ಥನಾರಾಯಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 07, 2021 | 7:04 PM

Share

ಬೆಂಗಳೂರು: ರಾಜ್ಯದ ಕೊವಿಡ್ ಕಾರ್ಯಪಡೆಯ ಮಹತ್ವದ ಸಭೆ ಇಂದು (ಜೂನ್ 7) ನಡೆಯಿತು. ಸಭೆಯಲ್ಲಿ ರಾಜ್ಯದ ಅನ್​ಲಾಕ್ ಬಗ್ಗೆ ಚರ್ಚೆಯಾಗಿ, ಮಹತ್ವದ ಘೋಷಣೆ ಹೊರಬೀಳಲಿದೆ ಎಂಬ ನಿರೀಕ್ಷೆಗಳೂ ವ್ಯಕ್ತವಾಗಿದ್ದವು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಭೆಯ ವಿವರಗಳನ್ನು ನೀಡಿದರು. ಅನ್​ಲಾಕ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಎಲ್ಲರ ಜೊತೆಗೆ ಚರ್ಚೆ ಮಾಡಿ, ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಮೂರನೇ ಅಲೆಯ ಆತಂಕದ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಆರೋಗ್ಯ ವ್ಯವಸ್ಥೆಯಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ. ಪ್ರತಿ ತಾಲ್ಲೂಕಿನಲ್ಲಿ 25 ಐಸಿಯು ಬೆಡ್, 50 ಆಕ್ಸಿಜನ್ ಬೆಡ್ ಉಳಿದ 25 ನಾರ್ಮಲ್ ಬೆಡ್ ಕೊವಿಡ್​ ರೋಗಿಗಳಿಗೆ ಮೀಸಲಿಡಲಾಗುತ್ತದೆ. ತಾಲ್ಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ನಾಲ್ಕು ಸಾವಿರ ವೈದ್ಯರು ಬೇಕಾಗುತ್ತಾರೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲು. ಆಸ್ಪತ್ರೆ ಸ್ಥಾಪನೆಗೆ ಸ್ಥಳ ಗುರುತಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ. ಜ್ವರ, ಕೆಮ್ಮು, ಹೆರಿಗೆ ಹೀಗೆ ಪ್ರತಿ ಆರೋಗ್ಯ ಸಮಸ್ಯೆಗೂ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆ ನಿರ್ಮಿಸುತ್ತೇವೆ. 146 ತಾಲ್ಲೂಕು ಹಾಗೂ 19 ಜಿಲ್ಲಾಸ್ಪತ್ತೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನೂರು ಬೆಡ್​ ಆಸ್ಪತ್ರೆ, ಪ್ರತಿ 4 ಕ್ಷೇತ್ರಗಳಿಗೆ ಒಂದು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಘೋಷಿಸಿದರು. ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 2300 ಆಕ್ಸಿಜನ್ ಬೆಡ್​ ಸ್ಥಾಪಿಸಲು ಕಾಲೇಜುಗಳಿಗೆ ₹ 2.5 ಕೋಟಿ ಅನುದಾನ ನೀಡುತ್ತಿದ್ದೇವೆ ಎಂದರು.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರನೇ ಉಚಿತ ಲಸಿಕೆ ನೀಡಲಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ನಾವು ಲಸಿಕೆ ಖರೀದಿ ಮಾಡುವುದಿಲ್ಲ. ಈಗಾಗಲೇ 3 ಕೋಟಿ ಲಸಿಕೆಗೆ ಆರ್ಡರ್ ಕೊಟ್ಟಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಈ ತಿಂಗಳು 58 ಲಕ್ಷ ಡೋಸ್ ಲಸಿಕೆಗಳು ಕೇಂದ್ರ ಸರ್ಕಾರದಿಂದ ಬರುತ್ತಿದೆ. ಖಾಸಗಿ ಕಂಪನಿಗಳು 20 ಲಕ್ಷ ಡೋಸ್ ಖರೀದಿಸಿವೆ. ಸುಮಾರು 80 ಲಕ್ಷ ಡೋಸ್ ಲಸಿಕೆಗಳನ್ನು ಈ ತಿಂಗಳು ವಿತರಿಸಲಾಗುವುದು. ಫ್ರಂಟ್​ಲೈನ್ ವರ್ಕರ್ಕ್​ಗೆ ಆದ್ಯತೆ ಮೇಲೆ ಲಸಿಕೆ ಕೊಡುತ್ತೇವೆ ಎಂದು ಹೇಳಿದರು.

3ನೇ ಅಲೆಗೆ ಬೇಕಿರುವ 5 ಲಕ್ಷ ವಯಲ್ಸ್​ ರೆಮ್​ಡಿಸಿವಿರ್​ ದಾಸ್ತಾನು ಮಾಡಿಕೊಂಡಿದ್ದೇವೆ. ಬ್ಲಾಕ್ ಫಂಗಸ್​ ಚಿಕಿತ್ಸೆಗೆ ಲೈಪೋಸೋಮಲ್ ಆ್ಯಂಪೋಟೆರಿಸಿನ್ ಬಿ ಬೇಕಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಈ ಔಷಧಿ ರಾಜ್ಯಕ್ಕೆ ಸರಬರಾಜಾಗುತ್ತಿದೆ.

ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಮತ್ತು ಸಂಗ್ರಹ ಪ್ರಮಾಣ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿದೆ. ರಾಜ್ಯದಲ್ಲಿ ಪ್ರತಿದಿನ 500 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುವ ಗುರಿಯಿದೆ. ಒಂದು ಲಕ್ಷ ಆಯುಷ್ 64 ಔಷಧಿ ಖರೀದಿಸುತ್ತೇವೆ. ಇದಕ್ಕೆ ಸುಮಾರು ₹ 2.5 ಕೋಟಿ ಖರ್ಚಾಗಲಿದೆ. ಜೀನೋಮ್ ಸ್ಕೀಕ್ವೆನ್ಸಿಂಗ್ ಲ್ಯಾಬ್​ಗಳನ್ನು ರಾಜ್ಯದ ಏಳು ಕಡೆ ಹೊಸದಾಗಿ ತೆರೆಯುತ್ತೇವೆ. ಪ್ರತಿ ಪರೀಕ್ಷೆಗೆ ₹ 6000 ನಿಗದಿಪಡಿಸಲಾಗುವುದು ಎಂದರು.

ಕೊವಿಡ್ ಮ್ಯುಟೇಶನ್ ಬಗ್ಗೆ ಗಮನಹರಿಸುವುದು ಈ ಲ್ಯಾಬ್​ಗಳ ಮುಖ್ಯ ಉದ್ದೇಶ. ಇದಕ್ಕಾಗಿ 8 ಜನರ ಸಮಿತಿಯನ್ನು ರಚಿಸಲಾಗುವುದು. ನಿಮ್ಹಾನ್ಸ್​ನ ವೈದ್ಯ ಡಾ.ರವಿ ಇದರ ಅಧ್ಯಕ್ಷರು. ಉಳಿದಂತೆ ಡಾ.ವಿಶಾಲ್ ರಾವ್, ಡಾ.ಅಂಬಿಕಾ ಸೇರಿದಂತೆ ಹಲವು ವೈದ್ಯರು ಈ ಸಮಿತಿಯಲ್ಲಿರುತ್ತಾರೆ.

(Karnataka preparing for coronavirus 3rd wave says DCM Ashwath Narayan)

ಇದನ್ನೂ ಓದಿ: ಲೋಕ ಕಲ್ಯಾಣಕ್ಕೆ ಶಾಸಕರು ಮನೆಯಲ್ಲಿ ಹೋಮ ಮಾಡಲಿ, ಆದರೆ ಜನರ ಬಳಿಯೂ ಮಾಡಿಸೋದು ಸರಿಯಲ್ಲ: ಕೊವಿಡ್ ಟಾಸ್ಕ್​ಫೋರ್ಸ್ ಅಧ್ಯಕ್ಷ ಡಾ ಅಶ್ವತ್ಥ ನಾರಾಯಣ

ಇದನ್ನೂ ಓದಿ: ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಇವೆ..ಸಾವಿನ ವರದಿಯಾಗಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್​

Published On - 6:59 pm, Mon, 7 June 21