AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಯಡಿಯೂರಪ್ಪ ಸರ್ಕಾರದ ಬೆನ್ನುಹತ್ತಿದ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರ

ಆರೋಪಕ್ಕೆ ಸರ್ಕಾರಿ ವಕೀಲ ವಿಜಯ್‌ಕುಮಾರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಮಿ ಪರಭಾರೆ ಬಗ್ಗೆ ಸರ್ಕಾರದ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಲಾಗಿದೆ. ಪಿಐಎಲ್‌ ವಿಚಾರಣೆಯನ್ನು ಹೈಕೋರ್ಟ್ ಜೂನ್​ 15ಕ್ಕೆ ಮುಂದೂಡಿದೆ.

ಮತ್ತೆ ಯಡಿಯೂರಪ್ಪ ಸರ್ಕಾರದ ಬೆನ್ನುಹತ್ತಿದ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರ
ಕರ್ನಾಟಕ ಹೈಕೋರ್ಟ್​
TV9 Web
| Updated By: ಸಾಧು ಶ್ರೀನಾಥ್​|

Updated on:Jun 07, 2021 | 5:39 PM

Share

ಬೆಂಗಳೂರು: ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ಮಾಡುವ ವಿಚಾರವನ್ನು ರಾಜ್ಯ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆಯಾದರೂ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ. ತತ್ಸಂಬಂಧ ರಾಜ್ಯ ಸರ್ಕಾರ, ಜಿಂದಾಲ್ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಕೆ.ಎ.ಪಾಲ್ ಎಂಬುವವರು ಪಿಐಎಲ್ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ವಿರುದ್ಧ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಜಮೀನು ಪರಭಾರೆ ತೀರ್ಮಾನ ಸರ್ವಾಧಿಕಾರಿ ರೀತಿಯದ್ದಾಗಿದ್ದು, ಕಾನೂನುಬಾಹಿರವಾಗಿ ಭೂಮಿ ಪರಭಾರೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಆರೋಪಕ್ಕೆ ಸರ್ಕಾರಿ ವಕೀಲ ವಿಜಯ್‌ಕುಮಾರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಮಿ ಪರಭಾರೆ ಬಗ್ಗೆ ಸರ್ಕಾರದ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಲಾಗಿದೆ. ಪಿಐಎಲ್‌ ವಿಚಾರಣೆಯನ್ನು ಹೈಕೋರ್ಟ್ ಜೂನ್​ 15ಕ್ಕೆ ಮುಂದೂಡಿದೆ.

(land lease to Jindal company by karnataka government p i l lodged in high court)

ಇದನ್ನೂ ಓದಿ:

ಬಿಜೆಪಿ ಸಂಸ್ಕೃತಿ ಅವರಿಗೇ ತಿರುಗುಬಾಣ ಆಗಿದೆ.. ಕರ್ಮ ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸಿದೆ: ಎಚ್​​ಡಿ ​ಕುಮಾರಸ್ವಾಮಿ

ಜಿಂದಾಲ್​ಗೆ 3667 ಎಕರೆ ಭೂಮಿ ಕದ್ದುಮುಚ್ಚಿ ಮಾರುವುದು ಬಿಜೆಪಿ ಸಂಸ್ಕೃತಿನಾ? ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

Published On - 5:37 pm, Mon, 7 June 21