ಟ್ರಾನ್ಸ್​ಫಾರ್ಮರ್​ಗಳಿಂದ ಪಾದಚಾರಿಗಳಿಗೆ ತೊಂದರೆ ತಪ್ಪಿಸಲು ಸಮನ್ವಯ ಸಮಿತಿ ರಚನೆ: ಹೈಕೋರ್ಟ್​ಗೆ ಬೆಸ್ಕಾಂ ಮಾಹಿತಿ

ಟ್ರಾನ್ಸ್​ಫಾರ್ಮರ್​ಗಳಿಂದ ಪಾದಚಾರಿಗಳಿಗೆ ತೊಂದರೆ ತಪ್ಪಿಸಲು ಸಮನ್ವಯ ಸಮಿತಿ ರಚನೆ: ಹೈಕೋರ್ಟ್​ಗೆ ಬೆಸ್ಕಾಂ ಮಾಹಿತಿ
ಕರ್ನಾಟಕ ಹೈಕೋರ್ಟ್​

ಈ ಸಮಿತಿಯು ಫುಟ್‌ಪಾತ್‌ಗಳಲ್ಲಿನ ಟ್ರಾನ್ಸ್‌ಫಾರ್ಮರ್​ಗಳು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದೆಯೆ? ಇಲ್ಲವೇ ಎಂದು ಪರಿಶೀಲಿಸಲಿದೆ. ಈಗಾಗಲೇ ಈ ಸಮಿತಿ ಒಂದು ಸಭೆ ನಡೆಸಿದೆ. 2ನೇ ಸಭೆ ಜೂನ್ 24ಕ್ಕೆ ನಿಗದಿಯಾಗಿದೆ ಎಂದು ಹೈಕೋರ್ಟ್‌ಗೆ ಬೆಸ್ಕಾಂ ಪರ ವಕೀಲರು ಮಾಹಿತಿ ನೀಡಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 07, 2021 | 3:58 PM

ಬೆಂಗಳೂರು: ನಗರದ ಫುಟ್​ಪಾತ್​ಗಳ ಮೇಲಿರುವ ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್​ಫಾರ್ಮರ್) ತೆರವುಗೊಳಿಸಬೇಕು ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಜನರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಪರಾಮರ್ಶಿಸಲು ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದೆ.

ಈ ಸಮಿತಿಯು ಫುಟ್‌ಪಾತ್‌ಗಳಲ್ಲಿನ ಟ್ರಾನ್ಸ್‌ಫಾರ್ಮರ್​ಗಳು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದೆಯೆ? ಇಲ್ಲವೇ ಎಂದು ಪರಿಶೀಲಿಸಲಿದೆ. ಈಗಾಗಲೇ ಈ ಸಮಿತಿ ಒಂದು ಸಭೆ ನಡೆಸಿದೆ. 2ನೇ ಸಭೆ ಜೂನ್ 24ಕ್ಕೆ ನಿಗದಿಯಾಗಿದೆ ಎಂದು ಹೈಕೋರ್ಟ್‌ಗೆ ಬೆಸ್ಕಾಂ ಪರ ವಕೀಲರು ಮಾಹಿತಿ ನೀಡಿದರು.

ಈ ಹಿಂದೆ, ಅಂದರೆ ಮಾರ್ಚ್ ತಿಂಗಳಲ್ಲಿ ಟ್ರಾನ್ಸ್​ಫಾರ್ಮರ್​ಗಳಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್​, ಟ್ರಾನ್ಸ್​ಫಾರ್ಮರ್​ ಅಳವಡಿಸುವ ಮೊದಲು ನೆಲ ಅಗೆಯಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಲೈಸೆನ್ಸ್ ಪಡೆದುಕೊಳ್ಳಬೇಕು ಎಂದು ಹೇಳಿತ್ತು. ಎಲೆಕ್ಟ್ರಿಸಿಟ್ ಆ್ಯಕ್ಟ್​ (2003) ಅನ್ವಯ ಬೆಸ್ಕಾಂ ಇಂಥ ಅನುಮತಿ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರತಿ ಬಾರಿ ನೆಲ ಅಗೆಯುವ ಮೊದಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಲೇಬೇಕು ಎಂದು ಹೇಳಿತ್ತು. ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ರಸ್ತೆಗಳಲ್ಲಿ ಹೇಗಂದರೆ ಹಾಗೆ ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಜನರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂದು ಅತ್ರಿ ದೂರಿದ್ದರು. ಇದನ್ನು ನಿರಾಕರಿಸಿದ್ದ ಬೆಸ್ಕಾಂ ಟ್ರಾನ್ಸ್​ಫಾರ್ಮರ್ ಅಳವಡಿಕೆ ವೇಳೆ ಎಲ್ಲ ನಿಯಮಗಳನ್ನೂ ಪಾಲಿಸಲಾಗುತ್ತಿದೆ. ಎಲೆಕ್ಟ್ರಿಕಲ್ ಇನ್​ಸ್ಪೆಕ್ಟರ್​ಗಳೂ ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸುರಕ್ಷೆಯನ್ನು ಖಾತ್ರಿಪಡಿಸುತ್ತಿದ್ದಾರೆ ಎಂದು ಹೇಳಿತ್ತು.

(Coordination Committee formed to Solve Public facing Problem from Transformers inform BESCOM to Karnataka High Court)

ಇದನ್ನೂ ಓದಿ: ಲಸಿಕೆ ಪೂರೈಕೆ, ಸಂಪರ್ಕ ಮತ್ತು ಮೂಲಸೌಕರ್ಯ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ: ಹೈಕೋರ್ಟ್​ಗಳಿಗೆ ಸಿಜೆ ರಮಣ ಭರವಸೆ

ಇದನ್ನೂ ಓದಿ: ಪ್ರಚಾರಕ್ಕಾಗಿ ಮಾಡಿದ ಪ್ರಯತ್ನವಿದು: 5ಜಿ ಬಗ್ಗೆ ಪ್ರಶ್ನಿಸಿ ಕೇಸ್ ಹಾಕಿದ್ದಕ್ಕೆ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್​ ತರಾಟೆ, 20 ಲಕ್ಷ ದಂಡ

Follow us on

Related Stories

Most Read Stories

Click on your DTH Provider to Add TV9 Kannada