ಕರ್ನಾಟಕದ ನಾಲ್ವರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ, ಡಾ. ಮಂಜುನಾಥ್‌ಗೆ ಜಸ್ಟ್ ಮಿಸ್
ನರೇಂದ್ರ ಮೋದಿ ಅವರು ಇಂದು ಸಂಜೆ ಸರಿಯಾಗಿ 7.15ಕ್ಕೆ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಕೆಲ ಸಂಸದರು ಮೋದಿ ಸಂಪುಟದ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಹೀಗಾಗಿ ಸಚಿವರಾಗುವ ಸಂಸದರಿಗೆ ಕರೆ ಮಾಡಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಮುಖವಾಗಿ ಕರ್ನಾಟಕದ ನಾಲ್ವರಿಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ ಎಂದು ತಿಳಿದುಬಂದಿದೆ.
ನವದೆಹಲಿ.ಬೆಂಗಳೂರು, (ಜೂನ್ 09): ನರೇಂದ್ರ ಮೋದಿ ಅವರ ಜೊತೆಗೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲೂ ಕರ್ನಾಟಕದ ಮೂವರು ಸಂಸದರೂ ಮೋದಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಹೌದು.. ಈ ಬಾರಿ ರಾಜ್ಯದ ನಾಲ್ವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದ್ದು, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಎಚ್.ಡಿ.ಕುಮಾರಸ್ವಾಮಿ, ವಿ ಸೋಮಣ್ಣ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಇನ್ನು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಗೆದ್ದು ಭಾರೀ ಸದ್ದು ಮಾಡುತ್ತಿರುವ ಡಾ ಮಂಜುನಾಥ್ ಅವರಿಗೂ ಸಚಿವ ಖಚಿತ ಎನ್ನಲಾಗಿತ್ತು. ಆದ್ರೆ, ಇದೀಗ ಬಂದ ಮಾಹಿತಿ ಪ್ರಕಾರ ಡಾಕ್ಟರ್ ಮಂಜುನಾಥ್ ಅವರ ಹೆಸರು ಸಂಭಾವ್ಯರ ಸಚಿವರ ಪಟ್ಟಿಯಲ್ಲಿಲ್ಲ.
ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ
ಈ ಬಾರಿ ಆರಂಭದಲ್ಲೇ ಕರ್ನಾಟಕದ ನಾಲ್ವರಿಗ ಮೋದಿ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ, ಮಂಡ್ಯದಿಂದ ಗೆದ್ದಿರುವ ಎಚ್ಡಿ ಕುಮಾರಸ್ವಾಮಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಕ್ಯಾಬಿನೆಟ್ ಸಚಿವರಾಗುವುದು ಪಕ್ಕ ಎನ್ನಲಾಗಿದೆ. ಜೋಶಿ ಕಳೆದ ಬಾರಿಯೂ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಇದೀಗ ಮತ್ತೊಮ್ಮೆ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಕಳೆದ ಬಾರಿ ಕೃಷಿ ರಾಜ್ಯ ಖಾತೆ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಸಹ ಈ ಬಾರಿಯೂ ಸಹ ಮತ್ತೆ ರಾಜ್ಯ ಖಾತೆ ಸಚಿವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಬಂದ ಮಾಹಿತಿ ಪ್ರಕಾರ ವಿ ಸೋಮಣ್ಣಗೂ ಬಂಪರ್ ಗಿಫ್ಟ್ ಸಿಕ್ಕಿದೆ, ವಿಧಾನಸಭೆಯಲ್ಲಿ ಸೋತು ತುಮಕೂರು ಲೋಕಸಭಾದಿಂದ ಗೆದ್ದಿರುವ ಸೋಮನ್ಣ ಕೇಂದ್ರ ಸಚಿವರಾಗುವುದು ಖಚಿತವಾಗಿದೆ.
ಇದನ್ನೂ ಓದಿ: PM Modi Swearing-in Ceremony Live: ನರೇಂದ್ರ ಮೋದಿಗೆ 3ನೇ ಬಾರಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ
ಸಚಿವರಾಗುವ ಬಯಕೆಯಲ್ಲಿದ್ದ ಡಾಕ್ಟರ್ ಮಂಜುನಾಥ್
ಹೌದು…ಖ್ಯಾತ ಹೃದ್ರೋಗ ವೈದ್ಯ ಡಾಕ್ಟರ್ ಮಂಜುನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಬೆಮಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ. ಹಾಲಿ ಸಂಸದ ಹಾಗೂ ಡಿಸಿಎಂ ಆಗಿರುವ ಡಿಕೆ ಸುರೇಶ್, ಡಿಕೆ ಶಿವಕುಮಾರ್ ಪ್ರಭಾವ ಮಧ್ಯ ಮಂಜುನಾಥ್ ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದು ಬೀಗಿದ್ದಾರೆ., ಹೀಗಾಗಿ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ರಾಜ್ಯ ಬಿಜೆಪಿ ನಾಯಕರೇ ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಸಹಜವಾಗಿ ಮಂಜುನಾಥ್ ಅವರು ಕೇಂದ್ರ ಸಚಿವರಾಗುವ ಖುಷಿಯಲ್ಲಿದ್ದರು. ಆದ್ರೆ, ಇದೀಗ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮಂಜುನಾಥ್ ಹೆಸರು ಇಲ್ಲ.
ಶಾ ಆಪ್ತ ಬಸವರಾಜ ಬೊಮ್ಮಾಯಿಗೂ ಇಲ್ಲ ಸಚಿವ ಸ್ಥಾನ
ಇನ್ನು ಕರ್ನಾಟಕ ಬಿಜೆಪಿಗರ ಪೈಕಿ ಅಮಿತ್ ಶಾ ಅವರ ನೆಚ್ಚಿನ ನಾಯಕರು ಅಂದ್ರೆ ಅದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೀಗಾಗಿ ಬೊಮ್ಮಾಯಿ ಹಾನಗಲ್ ಶಾಸಕರಾಗಿದ್ದರೂ ಸಹ ಅಮಿತ್ ಶಾ, ಈ ಬಾರಿ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ, ಕೃಪಾಕಟಾಕ್ಷದಿಮದ ಮೋದಿ ಸಂಪುಟದಲ್ಲೂ ಬೊಮ್ಮಾಯಿ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಕ್ಯಾಬಿನೆಟ್ ಸಚಿವರಾಗದಿದ್ದರೂ ಸಗ ಕನಿಷ್ಠ ಪಕ್ಷ ರಾಜ್ಯ ಖಾತೆ ಸಚಿವರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಸದ್ಯದ ಮಾಹಿತಿ ಪ್ರಕಾರ ಬೊಮ್ಮಾಯಿ ಹೆಸರು ಸಂಭಾವ್ಯರ ಸಚಿವರ ಪಟ್ಟಿಯಲ್ಲಿಲ್ಲ.
ಕೇಂದ್ರ ಸಂಪುಟ ಸೇರಲಿರುವ ಸಂಭವನೀಯ ಸಚಿವರ ಪಟ್ಟಿ
ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೊಯಲ್, ಜಿತೇಂದ್ರ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಹರ್ದೀಪ್ ಸಿಂಗ್ ಪುರಿ, H.D.ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ. ಕಿರಣ್ ರಿಜುಜು, ಗಿರಿರಾಜ್ ಸಿಂಗ್, ಜಯಂತ್ ಚೌಧರಿ, ಅಣ್ಣಾಮಲೈ, ಮನೋಹರ್ ಲಾಲ್ ಖಟ್ಟರ್, ಸುರೇಶ್ ಗೋಪಿ, ಜಿತನ್ ರಾಮ್ ಮಾಂಜಿ, ರಾಮನಾಥ್ ಠಾಕೂರ್, ಕಿಶನ್ ರೆಡ್ಡಿ, ಬಂಡಿ ಸಂಜಯ್, ಅರ್ಜುಮ್ ರಾಮ್ ಮೇಘವಾಲ್, ಪ್ರಹ್ಲಾದ್ ಜೋಶಿ, ಚಂದ್ರಶೇಖರ್ ಚೌಧರಿ, ಚಂದ್ರಶೇಖರ್ ಪೆಮ್ಮಸಾನಿ, ರಾಮ್ ಮೋಹನ್ ನಾಯ್ಡು, ರವ್ನೀತ್ ಸಿಂಗ್, ಜಿತಿನ್ ಪ್ರಸಾದ್, ಪಂಕಜ್ ಚೌಧರಿ, ಬಿ.ಎಲ್.ವರ್ಮಾ. ಲಲನ್ ಸಿಂಗ್, ಸರ್ಬಾನಂದ್ ಸೋನೋವಾಲ್, ಅನುಪ್ರಿಯಾ ಪಟೇಲ್, ಪ್ರತಾಪ್ ರಾವ್ ಜಾಧವ್. ಅನ್ನಪೂರ್ಣದೇವಿ, ರಕ್ಷಾ ಖಡ್ಸೆ, ಶೋಭಾ ಕರಂದ್ಲಾಜೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:08 pm, Sun, 9 June 24