ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಆಗಸ್ಟ್ 27) ಹೊಸದಾಗಿ 1,301 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,44,764 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,88,520 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 17 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,248 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 18,970 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 386 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,36,615 ಕ್ಕೆ ಏರಿಕೆಯಾಗಿದೆ. 12,36,615 ಸೋಂಕಿತರ ಪೈಕಿ 12,13,296 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,977 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,341 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 1, ಬಳ್ಳಾರಿ 5, ಬೆಳಗಾವಿ 19, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 386, ಬೀದರ್ 1, ಚಾಮರಾಜನಗರ 5, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 25, ಚಿತ್ರದುರ್ಗ 5, ದಕ್ಷಿಣ ಕನ್ನಡ 248, ದಾವಣಗೆರೆ 14, ಧಾರವಾಡ 6, ಗದಗ 1, ಹಾಸನ 117, ಹಾವೇರಿ 4, ಕಲಬುರಗಿ 7, ಕೊಡಗು 78, ಕೋಲಾರ 14, ಕೊಪ್ಪಳ 1, ಮಂಡ್ಯ 26, ಮೈಸೂರು 72, ರಾಯಚೂರು 0, ರಾಮನಗರ 3, ಶಿವಮೊಗ್ಗ 62, ತುಮಕೂರು 37, ಉಡುಪಿ 106, ಉತ್ತರ ಕನ್ನಡ 38, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 1 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಇಂದಿನ 27/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/lEvYJdWbKj @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/6heqPQ1UB4
— K’taka Health Dept (@DHFWKA) August 27, 2021
ಕೊರೊನಾದಿಂದ ಮೃತಪಟ್ಟವರ ವಿವರ
ಹಾಸನ ಜಿಲ್ಲೆಯಲ್ಲಿ ಕೊರೊನಾದಿಂದ 3 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಂದು 2 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೊಡಗು, ಮೈಸೂರು ಜಿಲ್ಲೆಯಲ್ಲಿ ತಲಾ 2 ಮಂದಿ ಕೊವಿಡ್ನಿಂದ ಮರಣಿಸಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ತುಮಕೂರು, ಉಡುಪಿ ಜಿಲ್ಲೆಯಲ್ಲಿ ಕೊವಿಡ್19ನಿಂದ ತಲಾ 1 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಕೊಡೋದಿಲ್ಲ; ಚರ್ಚೆಗೆ ಗ್ರಾಸವಾಯ್ತು ತಹಶೀಲ್ದಾರ್ ಆದೇಶ
ಕೊರೊನಾ ಲಸಿಕೆಯಲ್ಲಿ ಭಾರತ ಹೊಸ ದಾಖಲೆ; ದೇಶದಲ್ಲಿ 59 ಕೋಟಿ ಡೋಸ್ ಲಸಿಕೆ ವಿತರಣೆ
(Karnataka New Corona Cases Death Toll Total Covid19 Active Coronavirus Cases on August 27)