AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 523 ಜನರಿಗೆ ಕೊರೊನಾ ದೃಢ; 14 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 201 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,47,459 ಕ್ಕೆ ಏರಿಕೆಯಾಗಿದೆ. 12,47,459 ಸೋಂಕಿತರ ಪೈಕಿ 12,23,686 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 523 ಜನರಿಗೆ ಕೊರೊನಾ ದೃಢ; 14 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Oct 05, 2021 | 8:20 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಅಕ್ಟೋಬರ್ 4) ಹೊಸದಾಗಿ 523 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,78,808 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,29,008 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 14 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,845 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 11,926 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 201 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,47,459 ಕ್ಕೆ ಏರಿಕೆಯಾಗಿದೆ. 12,47,459 ಸೋಂಕಿತರ ಪೈಕಿ 12,23,686 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,173 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,599 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 0, ಬಳ್ಳಾರಿ 7, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 201, ಬೀದರ್ 0, ಚಾಮರಾಜನಗರ 3, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 48, ಚಿತ್ರದುರ್ಗ 9, ದಕ್ಷಿಣ ಕನ್ನಡ 55, ದಾವಣಗೆರೆ 2, ಧಾರವಾಡ 5, ಗದಗ 0, ಹಾಸನ 23, ಹಾವೇರಿ 0, ಕಲಬುರಗಿ 1, ಕೊಡಗು 7, ಕೋಲಾರ 5, ಕೊಪ್ಪಳ 0, ಮಂಡ್ಯ 11, ಮೈಸೂರು 33, ರಾಯಚೂರು 1, ರಾಮನಗರ 5, ಶಿವಮೊಗ್ಗ 5, ತುಮಕೂರು 37, ಉಡುಪಿ 19, ಉತ್ತರ ಕನ್ನಡ 26, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 3 ಮಂದಿ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 2 ಜನ ಸಾವನ್ನಪ್ಪಿದ್ದಾರೆ. ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಗದಗ, ತುಮಕೂರು ಜಿಲ್ಲೆಯಲ್ಲಿ ಕೊರೊನಾದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೊರೊನಾಗೆ ಬಲಿಯಾದ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಅನುಮೋದನೆ

ಇದನ್ನೂ ಓದಿ: Covid 3rd Wave: ಹಬ್ಬಗಳಿಂದ 2 ವಾರ ಮೊದಲೇ ಭಾರತಕ್ಕೆ ಅಪ್ಪಳಿಸುತ್ತಾ ಕೊವಿಡ್ 3ನೇ ಅಲೆ?

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ