Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಡಬಲ್ ಮರ್ಡರ್​ಗೆ ಬಿಗ್ ಟಿಸ್ಟ್, ಮಗಳ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ತಾಯಿ!

ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್​ನಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜೋಡಿ ಕೊಲೆ ಹೇಗಾಯ್ತು? ಯಾಕಾಯ್ತು? ಎನ್ನುವುದು ಪೊಲೀಸ್ ತನಿಖೆ ವೇಳೆ ಬಟಾಬಯಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಯಾದ ಯುವತಿಯ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಡಬಲ್ ಮರ್ಡರ್​ಗೆ ಬಿಗ್ ಟಿಸ್ಟ್, ಮಗಳ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ತಾಯಿ!
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on:Apr 23, 2024 | 9:59 PM

ಬೆಂಗಳೂರು, (ಏಪ್ರಿಲ್ 18): ನಗರದ ಸಾರಕ್ಕಿ ಬಳಿಯಿರುವ ಪಾರ್ಕ್​ನಲ್ಲಿ ಸುರೇಶ್ ಮತ್ತು ಅನುಷಾ ಎನ್ನುವ ಜೋಡಿ ಕೊಲೆ (Murder) ಹಿಂದಿನ ಕಾರಣ ಬಟಾಬಯಲಾಗಿದೆ. ಮಗಳ ಕೊಲೆಗೆ ತಾಯಿ ಪ್ರತಿಕಾರ ತೀರಿಸಿಕೊಂಡಿದ್ದಾಳೆ.  ಹೌದು. ಸುರೇಶ್ ಎನ್ನುವಾತ ಅನುಷಾಳನ್ನು ಕೊಲೆ ಮಾಡಿದ್ದರೆ, ಸುರೇಶ್​ನನ್ನು ಅನುಷಾಳ ತಾಯಿ (ಗೀತಾ) ಕೊಲೆ ಮಾಡಿದ್ದಾಳೆ. ಸುರೇಶ್ ಮತ್ತು ಅನುಷಾ ಇಬ್ಬರ ನಡುವೆ ಹಲವು ವರ್ಷಗಳಿಂದ ಪರಿಚವಿತ್ತು. ಅದು ಬೇರೆ ಸಂಬಂಧಕ್ಕೆ ತಿರುಗಿತ್ತು. ಸುರೇಶನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರು. ಆದರೂ ಸಹ ಸುರೇಶ್ ಅನುಷಾಳೊಂದಿಗೆ ಸಂಬಂಧ ಹೊಂದಿದ್ದ. ಆದ್ರೆ, ತಮ್ಮಿಬ್ಬರ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನುಷಾ ಹೇಳಿದ್ದಕ್ಕೆ ಸುರೇಶ್ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅನುಷಾಳ ತಾಯಿ ಸುರೇಶನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಪರಿಣಾಮ ಸುರೇಶ್​​ ಸಹ ಸಾವನ್ನಪ್ಪಿದ್ದಾನೆ.

ಗೊರಗುಂಟೆ ಪಾಳ್ಯ ನಿವಾಸಿ ಸುರೇಶ್ ಮತ್ತು ಶಾಂಕಾಂಬರಿ ನಗರ ನಿವಾಸಿ ಅನುಷಾ ಇಬ್ಬರು ಪರಿಚಿತರು. ಸುರೇಶ್ ಗೆ ಮದುವೆಯಾಗಿತ್ತು. ಆದ್ರು ಸುರೇಶ್ ಹಾಗು ಅನುಷಾ ಇಬ್ಬರು ಸಂಬಂಧ ಹೊಂದಿದ್ದರು. ಆದ್ರೆ, ಇತ್ತೀಚೆಗೆ ಅನುಷಾಗೆ ಸುರೇಶ್​ನ ಜೊತೆ ಸಂಬಂಧ ಮುಂದುವರೆಸುವುದು ಇಷ್ಟ ಇರಲಿಲ್ಲ. ಹೀಗಾಗಿ ಸಂಬಂಧವನ್ನು ಇಲ್ಲಿಗೆ ಕಡತಗೊಳಿಸುವ ಸಲುವಾಗಿ ಇಬ್ಬರು ಭೇಟಿಯಾಗಿದ್ದಾರೆ. ಅನುಷಾ ತನ್ನ ಕೈತಪ್ಪಿ ಹೋಗುತ್ತಾಳೆಂದು ಕೋಪದಲ್ಲಿದ್ದ. ಈ ವೇಳೆ ಅನುಷಾ ತಮ್ಮಿಬ್ಬರ ಸಂಬಂಧ ಇಲ್ಲಿಗೆ ನಿಲ್ಲಿಸೋಣ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಸುರೇಶ್​ ಮತ್ತಷ್ಟು ಕೋಪಗೊಂಡು ಅನುಷಾಳಿಗೆ ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಪೊರೇಟರ್​ ಪುತ್ರಿ ಕೊಲೆ, ಪ್ರೀತಿ ನಿರಾಕರಿಸಿದ್ದಕ್ಕೆ ಬರ್ಬರ ಹತ್ಯೆ

ಸುರೇಶ್ ಚಾಕು ಹಾಕುತಿದ್ದಾಗ ಬೇಡ ಎಂದು ಅನುಷಾ ತಾಯಿ ಅಡ್ಡ ಬಂದಿದ್ದರೂ ಸಹ ಚಾಕುವಿನಿಂದ ಇರಿದಿದ್ದಾನೆ. ಆ ವೇಳೆ ಅನುಷಾ ತಾಯಿ, ಸಿಮೆಂಟ್ ಇಟ್ಟಿಗೆಯನ್ನು ತೆಗೆದುಕೊಂಡು ಸುರೇಶ್ ತಲೆಗೆ ಹೊಡೆದಿದ್ದಾಳೆ. ಇದರಿಂದ ಸುರೇಶ್​ ಸಹ ಮೃತಪಟ್ಟಿದ್ದಾನೆ ಎಂದು ತಿಳಿದಬಂದಿದೆ. ಸದ್ಯ ಜೆಪಿ ನಗರ ಪೊಲೀಸರು ಅನುಷಾಳ ತಾಯಿ ಗೀತಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣ ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ

ಇನ್ನು ಈ ಡಬಲ್ ಮರ್ಡರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸ್ಗರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಜೆಪಿ ನಗರದ ಸಾರಕ್ಕಿ ಪಾರ್ಕ್ ನಲ್ಲಿ ಇಬ್ಬರ ಕೊಲೆಯಾಗಿದೆ. ಸುರೇಶ್ ಮತ್ತು ಅನುಷಾ ಅವರ ಕೊಲೆಯಾಗಿದೆ. ಅನುಷಾ ಅವರನ್ನ ಸುರೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ತಪ್ಪಿಸುವುದಕ್ಕೆ ಬಂದ ಅನುಷಾ ತಾಯಿ ಸುರೇಶ್ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಸುರೇಶ್ ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಸುರೇಶ್ ಗೊರಗುಂಟೆಪಾಳ್ಯ ನಿವಾಸಿ. ಸಂಜೆ ಇಲ್ಲಿ ಬಂದು ಭೇಟಿಯಾಗಿದ್ದಾನೆ. ಸುರೇಶ್ ಗೆ ಮದುವೆಯಾಗಿ ಮಕ್ಕಳಿತ್ತು. ಇಬ್ಬರಿಗೂ ಐದು ವರ್ಷಗಳ ಹಿಂದೆ ಪರಿಚಯವಾಗಿತ್ತು. ಈ ಬಗ್ಗೆ ಜೆ ಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Thu, 18 April 24