ಸ್ವಂತ ಮನೆಯ ಕನಸು ಕಟ್ಟಿದ್ದ ಮೈಸೂರಿನ ಕುಲಸಚಿವರ ಸಾವಿಗೆ ಕಾರಣವಾಯ್ತು ನಿವೇಶನ ವಂಚನೆ ಪ್ರಕರಣ?

| Updated By: ಸಾಧು ಶ್ರೀನಾಥ್​

Updated on: Jun 10, 2021 | 5:43 PM

ಈ ಬಗ್ಗೆ ಮಂಜುಪ್ರಸಾದ್ ಪೊಲೀಸರಿಗೂ ದೂರು ನೀಡಿದ್ದಾರೆ.‌ ದೂರು‌ ನೀಡಿದ‌ ನಂತರವೂ ಮಂಜುಪ್ರಸಾದ್ ಅವರಿಗೆ ತಾವು ಮೋಸ ಹೋದ ವಿಚಾರ ಬಹುವಾಗಿ ಕಾಡತೊಡಗಿದೆ. ಜೀವನ ಪೂರ್ತಿ ಕಷ್ಟಪಟ್ಟು ದುಡಿದ ಹಣ ಮೋಸಗಾರರ ಪಾಲಾಯ್ತಲ್ಲ ಅಂತಾ ಮನನೊಂದು ತಮ್ಮ‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ವಂತ ಮನೆಯ ಕನಸು ಕಟ್ಟಿದ್ದ ಮೈಸೂರಿನ ಕುಲಸಚಿವರ ಸಾವಿಗೆ ಕಾರಣವಾಯ್ತು ನಿವೇಶನ ವಂಚನೆ ಪ್ರಕರಣ?
ಸ್ವಂತ ಮನೆಯ ಕನಸು ಕಟ್ಟಿದ್ದ ಮೈಸೂರಿನ ಕುಲಸಚಿವರ ಸಾವಿಗೆ ಕಾರಣವಾಯ್ತು ನಿವೇಶನ ವಂಚನೆ ಪ್ರಕರಣ?
Follow us on

ಮೈಸೂರು: ಸ್ವಂತಕ್ಕೆಂದು ನಿವೇಶನ ತೆಗೆದುಕೊಳ್ಳಬೇಕು. ಸ್ವಂತ ಮನೆ ಕಟ್ಟಬೇಕು ಅನ್ನೋ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಅದೇ ರೀತಿ ಸ್ವಂತ ಮನೆಯ ಕನಸು ಕಟ್ಟಿಕೊಂಡಿದ್ದವರು ಚಾಮುಂಡಿಪುರಂ ನಿವಾಸಿ ಮಂಜು ಪ್ರಸಾದ್. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಮಂಜು ಪ್ರಸಾದ್ ಅದಕ್ಕಾಗಿ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಮೈಸೂರಿನ ರಿಯಾಜ್ ಮತ್ತು ಜಾವಿದ್ ಎಂಬುವರಿಂದ ಜಯಲಕ್ಷ್ಮಿಪುರಂನ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಮನೆ ಕಟ್ಟಲು ಸಾಧ್ಯವಾಗಲಿಲ್ಲ.

ಆದ್ದರಿಂದ ಆ ನಿವೇಶನವನ್ನು ಮಾರಾಟ ಮಾಡಲು ಮಂಜುಪ್ರಸಾದ್ ನಿರ್ಧರಿಸಿದ್ದರು. ಅದಕ್ಕಾಗಿ ನಿವೇಶನ ಕೊಳ್ಳುವವರನ್ನು ಹುಡುಕುತ್ತಿದ್ದರು. ಈ ವೇಳೆ ಒಬ್ಬರು ನಿವೇಶನ ಖರೀದಿ ಮಾಡಲು ಬಂದಿದ್ದರು. ಇವರ ಬಳಿ ಇದ್ದ ನಿವೇಶನದ ದಾಖಲೆ ಪಡೆದಕೊಂಡು ಪರಿಶೀಲಿಸಿದಾಗ ಅವು ನಕಲಿ ದಾಖಲೆ ಅನ್ನೋದು ಗೊತ್ತಾಗಿದೆ. ಆಗ ಮಂಜು ಪ್ರಸಾದ್‌ಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

ಈ ಬಗ್ಗೆ ಮಂಜುಪ್ರಸಾದ್ ಪೊಲೀಸರಿಗೂ ದೂರು ನೀಡಿದ್ದಾರೆ.‌ ದೂರು‌ ನೀಡಿದ‌ ನಂತರವೂ ಮಂಜುಪ್ರಸಾದ್ ಅವರಿಗೆ ತಾವು ಮೋಸ ಹೋದ ವಿಚಾರ ಬಹುವಾಗಿ ಕಾಡತೊಡಗಿದೆ. ಜೀವನ ಪೂರ್ತಿ ಕಷ್ಟಪಟ್ಟು ದುಡಿದ ಹಣ ಮೋಸಗಾರರ ಪಾಲಾಯ್ತಲ್ಲ ಅಂತಾ ಮನನೊಂದು ತಮ್ಮ‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶರಣಾಗುವ ಮುನ್ನ ಡೆತ್ ನೋಟ್ ಬರೆದು ತನ್ನ ಸಾವಿಗೆ ಮೈಸೂರಿನ ರಿಯಾಜ್ ಮತ್ತು ಜಾವಿದ್ ಕಾರಣ ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಬರೆದಿದ್ದಾರೆ. ಸದ್ಯ ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(karnataka open university chancellor manju prasad allegedly commits suicide over site cheating case in Mysore)

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ವಿವಾಹಿತೆ ಆತ್ಮಹತ್ಯೆ.. ಗಂಡನನ್ನು ಅರೆಸ್ಟ್ ಮಾಡಿದ ಪೊಲೀಸರು