ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ; ಮನೋವೈದ್ಯರ ಭೇಟಿಯಾಗುವುದಕ್ಕೆ ಜನರ ಸರತಿಸಾಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 08, 2021 | 5:39 PM

ಆರ್ಥಿಕ ಸಂಕಷ್ಟದಿಂದ ಖಿನ್ನತೆಗೊಳಗಾದ ವ್ಯಕ್ತಿಯನ್ನು ಸರಿಯಾಗಿ ಪರೀಕ್ಷಿಸಿ ಸೂಕ್ತ ಪರಿಹಾರ ನೀಡಲು ಹೆಚ್ಚು ಸಮಯ ಬೇಕಾದ್ದರಿಂದ ಇತರರಿಗೆ ಚಿಕಿತ್ಸೆ ಸಿಗೋದು ವಿಳಂಬ ಆಗುತ್ತಿದೆ.

ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ; ಮನೋವೈದ್ಯರ ಭೇಟಿಯಾಗುವುದಕ್ಕೆ ಜನರ ಸರತಿಸಾಲು
ಮನೋವೈದ್ಯರಿಗಾಗಿ ಸರತಿಸಾಲಿನಲ್ಲಿ ಕುಳಿತಿರುವ ಜನರು
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಆರ್ಥಿಕ ಸಂಕಷ್ಟಕ್ಕೊಳಗಾದ ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಗೆ ಒಳಗಾದ ರಾಜ್ಯದ ಜನರು ಮನೋವೈದ್ಯರನ್ನು ಭೇಟಿಯಾಗುವುದಕ್ಕೆ ಸರತಿಸಾಲಿನಲ್ಲಿ ನಿಂತಿದ್ದಾರೆ. ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರಿನ ನಿಮ್ಹಾನ್ಸ್ ಮನೋವೈದ್ಯರನ್ನು ಭೇಟಿ ಮಾಡುತ್ತಿದ್ದಾರೆ.

ಮಾನಸಿಕವಾಗಿ ಕುಗ್ಗಲು ಸೂಕ್ತ ಕಾರಣವೇನು? ಇದಕ್ಕೆ ಪರಿಹಾರವನ್ನು ಹೇಗೆ ಕಂಡುಕೊಳ್ಳುವುದು? ಎಂದು ಒಬ್ಬ ರೋಗಿ ಜೊತೆ ಆಪ್ತಸಮಾಲೋಚನೆ ನಡೆಸಲು ಕನಿಷ್ಠ ಎರಡು ಗಂಟೆ ಸಮಯ ಬೇಕು. ಆದರೆ ಖಿನ್ನತೆಗೊಳಗಾದ ಜನರ ಸಂಖ್ಯೆ ಹೆಚ್ಚಾದ್ದರಿಂದ ರಾಜ್ಯದ ಹಲವರಿಗೆ ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ.

ಪ್ರತಿ ದಿನ ಎರಡೂ ಸಾವಿರಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮೇಲೂ ಒತ್ತಡ ಹೆಚ್ಚಾಗಿದೆ. ಖಿನ್ನತೆಗೊಳಗಾದ ವ್ಯಕ್ತಿಯನ್ನು ಸರಿಯಾಗಿ ಪರೀಕ್ಷಿಸಿ ಸೂಕ್ತ ಪರಿಹಾರ ನೀಡಲು ಹೆಚ್ಚು ಸಮಯ ಬೇಕಾದ್ದರಿಂದ ಇತರರಿಗೆ ಚಿಕಿತ್ಸೆ ಸಿಗೋದು ವಿಳಂಬ ಆಗುತ್ತಿದೆ.

ನಿರುದ್ಯೋಗಿಯಲ್ಲಿ ಖಿನ್ನತೆ ಹೆಚ್ಚು
ರಕ್ಕಸ ಸೋಂಕಿನ ಅಟ್ಟಹಾಸದಿಂದ ದೇಶದಲ್ಲಿ ಆಗಿರುವ ಸಮಸ್ಯೆಗಳು ಒಂದೆರಡಲ್ಲ. ಅದೆಷ್ಟೋ ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡು ಬರಿ ಕೈಯಲ್ಲಿ ಕುಳಿತಿದ್ದಾರೆ. ಜೀವನದ ಬಗ್ಗೆ ಯೋಚಿಸುವ ನಿರುದ್ಯೋಗಿಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಖಿನ್ನತೆಗೊಳಗಾದ ಜನರಲ್ಲಿ ನಿರುದ್ಯೋಗಿಗಳ ಸಂಖ್ಯೆಯೇ ಹೆಚ್ಚಿದೆ ಎಂದು ತಿಳಿದುಬಂದಿದೆ.

World Cancer Day 2021 ‘ಸಾವಿನ ಭಯ ಬಿಟ್ಟು ನಗುತ್ತಾ ಜೀವಿಸಿ..’: ಕ್ಯಾನ್ಸರ್​ ಗೆದ್ದ ಭಾರತಿಯವರ ಜೀವನ ಪ್ರೀತಿ