Gamblers jump into Malaprabha river ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರು
Gamblers jump into Malaprabha river ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರವಲಯದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರ ದಾಳಿಗೆ ಹೆಸರಿ, ಅವರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ 6 ಯುವಕರು ಮಲಪ್ರಭಾ ನದಿಗೆ ಹಾರಿದ್ದಾರೆ. 6 ಜನರ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಮಂಜು ಬಂಡಿವಡ್ಡರ್ (30) ಮತ್ತು ಸಮೀರ್ ಬಟಕುರ್ಕಿ (22) ನೀರುಪಾಲು ಆಗಿದ್ದಾರೆ.
ಬೆಳಗಾವಿ:ಜಿಲ್ಲೆಯ ರಾಮದುರ್ಗ ಹೊರವಲಯದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರ ದಾಳಿಗೆ ಹೆಸರಿ, ಅವರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ 6 ಯುವಕರು ಮಲಪ್ರಭಾ ನದಿಗೆ ಹಾರಿದ್ದಾರೆ. 6 ಜನರ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಮಂಜು ಬಂಡಿವಡ್ಡರ್ (30) ಮತ್ತು ಸಮೀರ್ ಬಟಕುರ್ಕಿ (22) ನೀರುಪಾಲು ಆಗಿದ್ದಾರೆ.
ರಾಮದುರ್ಗ ಹೊರವಲಯದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ಬಂಧಿಸುತ್ತಾರೆಂಬ ಭಯದಿಂದ ನದಿಗೆ ಹಾರಿದ್ದ 6 ಜನರ ಪೈಕಿ ನಾಲ್ವರು ಈಜಿ ದಡ ಸೇರಿದ್ದಾರೆ. ನೀರುಪಾಲಾಗಿರುವ ಇಬ್ಬರು ಯುವಕರಿಗಾಗಿ ಅಗ್ನಿಶಾಮಕ, ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.