ಬೆಂಗಳೂರು: ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ ಆಗಿದೆ. ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕ ಕರ್ನಾಟಕ ರಾಜ್ಯದ 11 ಮಂದಿ ಪೊಲೀಸರಿಗೆ ಲಭ್ಯವಾಗಿದೆ. ಐಪಿಎಸ್ ಅಧಿಕಾರಿ ಸಂತೋಷ್ ಬಾಬುಗೆ ಪದಕ ಘೋಷಣೆ ಮಾಡಲಾಗಿದೆ. ಇನ್ಸ್ಪೆಕ್ಟರ್ಗಳಾದ ಜಿ.ಬಾಲರಾಜ್, ಪಿ.ಶಶಿಕುಮಾರ್, ಹೆಚ್.ವಿ. ಸುದರ್ಶನ್, ಎಸ್.ಆರ್. ಶ್ರೀಧರ್ಗೆ ಪದಕ ಲಭಿಸಿದೆ. ಎಎಸ್ಐಗಳಾದ ಶೌಖತ್ ಅಲಿ, ಫಕ್ರುದ್ದೀನ್, ಅಕ್ಬರ್ ಸೋಮಶೇಖರ್, ಕೃಷ್ಣ ದೇವೇಗೌಡಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ
ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ವೇಳೆ ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಶಂಸಿದ್ದಾರೆ. ನಟ ಪುನೀತ್ ಅಂತಿಮ ದರ್ಶನ, ಅಂತಿಮ ಯಾತ್ರೆ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಿಬ್ಬಂದಿಯ ಕೈ ಕುಲುಕಿ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.
ಅತ್ಯಂತ ಶಿಸ್ತುಬದ್ಧವಾಗಿ, ಎಷ್ಟೇ ಕಷ್ಟಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಶಿಸ್ತುಬದ್ಧವಾಗಿ ನಿಭಾಯಿಸಿದ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಪುನೀತ್ ಅಂತ್ಯಕ್ರಿಯೆ; ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದ ಕಮಲ್ ಪಂತ್
ಇದನ್ನೂ ಓದಿ: ಚನ್ನಪಟ್ಟಣ ಡಿವೈಎಸ್ಪಿ ರಮೇಶ್ ಪೊಲೀಸ್ ಸಮವಸ್ತ್ರದಲ್ಲಿಯೇ ಭಜನೆಗೆ ಕುಳಿತರು!
Published On - 4:13 pm, Sun, 31 October 21