Karnataka Police: ದೀರ್ಘಕಾಲದ ಪ್ರಕರಣಗಳಡಿ ಕಳೆದ 6 ತಿಂಗಳಲ್ಲಿ 200 ಮಂದಿ ಬಂಧನ

ಕ್ರಿಮಿನಲ್​ ನ್ಯಾಯಾಲಯಗಳಲ್ಲಿ ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ರಾಜ್ಯ ಪೊಲೀಸರು ಕಳೆದ ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ 52, ಧಾರವಾಡದಲ್ಲಿ 36 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಂಧನ ಸೇರಿ ಒಟ್ಟು 200 ಮಂದಿಯನ್ನು ಬಂಧಿಸಿದ್ದಾರೆ.

Karnataka Police: ದೀರ್ಘಕಾಲದ ಪ್ರಕರಣಗಳಡಿ ಕಳೆದ 6 ತಿಂಗಳಲ್ಲಿ 200 ಮಂದಿ ಬಂಧನ
ಪೊಲೀಸ್​
Follow us
ವಿವೇಕ ಬಿರಾದಾರ
|

Updated on:Jan 23, 2024 | 10:53 AM

ಬೆಂಗಳೂರು, ಜನವರಿ 23: ರಾಜ್ಯದ ಕ್ರಿಮಿನಲ್ ನ್ಯಾಯಾಲಯಗಳಲ್ಲಿ (Criminal Court) ದೀರ್ಘಕಾಲ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸರು (Karnataka Police) ಕಳೆದ ಆರು ತಿಂಗಳಲ್ಲಿ 200 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಹಲವು ವರ್ಷಗಳ ಹಿಂದೆಯೇ ಬಂಧನದ ವಾರಂಟ್‌ ಹೊರಡಿಸಲಾಗಿತ್ತು.

ರಾಜ್ಯದ ಕ್ರಿಮಿನಲ್​ ನ್ಯಾಯಾಲಯಗಳಲ್ಲಿ ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಪೊಲೀಸರು ಬೆಂಗಳೂರಿನಲ್ಲಿ 52, ಧಾರವಾಡದಲ್ಲಿ 36 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಂಧನ ಸೇರಿ ಒಟ್ಟು 200 ಮಂದಿಯನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು, ಹುಬ್ಬಳ್ಳಿಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರದ ಹಿಂಸಾಚಾರ, ಹೋರಾಟ ಮತ್ತು ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಸೇವಕ ಶ್ರೀಕಾಂತ್ ಪೂಜಾರಿ (60) ಅನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ ಪೂಜಾರಿ ಮಾತ್ರವಲ್ಲದೇ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಗಲಭೆ, ಕಳ್ಳತನ, ಜೂಜು ಮತ್ತು ಅಪಘಾತಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 36 ಜನರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: 2005 ಪಾವಗಡ ಬಾಂಬ್​ ಬ್ಲಾಸ್ಟ್​ ಪ್ರಕರಣ: ನಾಲ್ವರು ಮಾಜಿ ನಕ್ಸಲ​ರು ಪೊಲೀಸರ ವಶಕ್ಕೆ

1992ರ ಡಿಸೆಂಬರ್​ನಲ್ಲಿ ನಡೆದ ಗಲಭೆ ಪ್ರಕರಣದ 13 ಜನ ಆರೋಪಿಗಳಲ್ಲಿ ಶ್ರೀಕಾಂತ್​ ಪೂಜಾರಿ ಕೂಡ ಒಬ್ಬರು. ಈ ಸಮಯದಲ್ಲಿ ಶ್ರೀಕಾಂತ್​ ಪೂಜಾರಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಡಿಸೆಂಬರ್ 28, 2023 ರಂದು ಶ್ರೀಕಾಂತ್​ ಪೂಜಾರಿಯನ್ನು ಬಂಧಿಸಲಾಯ್ತು. ಆದರೆ ಕಾಂಗ್ರೆಸ್ ಸರ್ಕಾರವು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.

ಶ್ರೀಕಾಂತ ಪೂಜಾರಿ ಬಂಧನಕ್ಕೂ ಮುನ್ನ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಇವರು ಶೀಘ್ರದಲ್ಲೇ ಜಾಮೀನು ಪಡೆದರು. ಆದರೆ ಎರಡನೇ ಆರೋಪಿ ಶ್ರೀಕಾಂತ್​ ಪೂಜಾರಿ ಅವರಿಗೆ ಜಾಮೀನು ಸಿಗುವುದು ವಿಳಂಬವಾಯಿತು. ಹೀಗಾಗಿ ಇದು ರಾಜಕೀಯ ಬಣ್ಣ ಪಡೆದುಕೊಂಡಿತು, ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅಂತೆಯೇ, 2005ರ ಫೆಬ್ರವರಿ 10 ರಂದು ತುಮಕೂರು ಜಿಲ್ಲೆಯ ವೆಂಕಟಮನಹಳ್ಳಿ ಗ್ರಾಮದ ಪೊಲೀಸ್​​​​ ಚೆಕ್​​​​​ಪೋಸ್ಟ್​​ ಮಲೆ ನಕ್ಸಲರು ದಾಳಿ ನಡೆಸಿದ್ದರು. 19 ವರ್ಷಗಳ ಹಿಂದಿನ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು. ಇನ್ನು ವಿಚಾರಣೆಗೆ ಹಾಜರಾಗದೆ 42 ಜನ ತಲೆಮರೆಸಿಕೊಂಡಿದ್ದಾರೆ. ಸ್ಥಳೀಯ ನ್ಯಾಯಾಲಯಗಳು ಆರಂಭಿಕ ವಿಚಾರಣೆ ಪ್ರಕರಣದಲ್ಲಿ 29 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

10-30 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಒಟ್ಟು 10.14 ಲಕ್ಷ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. 20 ರಿಂದ 30 ವರ್ಷ ಹಳೆಯದಾದ 887 ಪ್ರಕರಣಗಳು, 10 ರಿಂದ 20 ವರ್ಷ ಹಳೆಯದಾದ 26,703 ಪ್ರಕರಣಗಳು ಮತ್ತು 5ರಿಂದ 10 ವರ್ಷಗಳಷ್ಟು ಹಳೆಯದಾದ 1.64 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. 2015 ರಲ್ಲಿ ಸುಮಾರು 8 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ. 2021ರಲ್ಲಿ ಸುಮಾರು 14 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:40 am, Tue, 23 January 24