ಗಂಟೆಗಟ್ಟಲೆ ಹಾಕಿ ಪಂಚ್ ಮಾಡ್ತೀರಿ.. ನಿಮ್ಮ ಭಯಕ್ಕಾಗಿ ಕೋರ್ಟ್​​ಗೆ ಹೋಗುವಂತಾಯ್ತು: ಸಚಿವ ಶಿವರಾಂ ಹೆಬ್ಬಾರ್

ಜನ ನಮ್ಮ ಬಗ್ಗೆ ಪ್ರಶ್ನೆ ಮಾಡ್ತಿಲ್ಲ. ಮಾಧ್ಯಮವರರು ಮಾತ್ರ ಮಾಡ್ತಾ ಇದ್ದೀರಿ. ತೇಜೋವದೆ ಮಾಡಿದ್ರೆ ನಮಗೆ ಗತಿಯಾರು, ಹಾಗಾಗಿ ಕೋರ್ಟ್​ಗೆ ಹೋಗಿದ್ದೇವೆ.

ಗಂಟೆಗಟ್ಟಲೆ ಹಾಕಿ ಪಂಚ್ ಮಾಡ್ತೀರಿ.. ನಿಮ್ಮ ಭಯಕ್ಕಾಗಿ ಕೋರ್ಟ್​​ಗೆ ಹೋಗುವಂತಾಯ್ತು: ಸಚಿವ ಶಿವರಾಂ ಹೆಬ್ಬಾರ್
ಸಚಿವ ಶಿವರಾಮ್ ಹೆಬ್ಬಾರ್
Follow us
ಪೃಥ್ವಿಶಂಕರ
|

Updated on:Mar 06, 2021 | 2:07 PM

ಕಾರವಾರ: ಬಾಂಬೆ ಮಿತ್ರ ಮಂಡಳಿ ಸದಸ್ಯರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದರ ಬಗ್ಗೆ ಸಚಿವ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ವಿರುದ್ಧ ಹರಿಹಾಯ್ದ ಹೆಬ್ಬಾರ್, ನಮ್ಮ ಸೇಫ್ಟಿಗೋಸ್ಕರ ಕೋರ್ಟ್​ಗೆ ಹೋಗಿದ್ದೇವೆ. ಜನ ನಮ್ಮ ಬಗ್ಗೆ ಪ್ರಶ್ನೆ ಮಾಡ್ತಿಲ್ಲ. ಮಾಧ್ಯಮವರರು ಮಾತ್ರ ಮಾಡ್ತಾ ಇದ್ದೀರಿ. ತೇಜೋವಧೆ ಮಾಡಿದ್ರೆ ನಮಗೆ ಗತಿಯಾರು? ಹಾಗಾಗಿ ಕೋರ್ಟ್​ಗೆ ಹೋಗಿದ್ದೇವೆ. ನಾಳೆ ತಪ್ಪಿತಸ್ಥ ಅಲ್ಲ ಅಂತಾ ಬಂದ್ರೆ.. ಅದನ್ನ ಒಂದೇ ಲೈನ್​ನಲ್ಲಿ ಬರೆಯುತ್ತೀರಿ. ಈಗ ಗಂಟೆಗಟ್ಟಲೆ ಹಾಕಿ ಹಾಕಿ ಪಂಚ್ ಮಾಡ್ತೀರಿ. ನಿಮ್ಮ ಭಯಕ್ಕಾಗಿಯೇ ಕೋರ್ಟ್​ಗೆ ಹೋಗುವಂತಾಯ್ತು ಎಂದರು.

ಹೆಂಡತಿ ಮಕ್ಕಳ ವಿರುದ್ಧ ತಲೆ ತಗ್ಗಿಸುವ ಕೆಲಸ ಪ್ರಜಾಪ್ರಭುತ್ವದಲ್ಲಿ ನಮಗಿರುವ ಮಾರ್ಗ ಉಪಯೋಗಿಸಿದ್ದೇವೆ. ಬ್ಲಾಕ್ ಮೇಲ್ ಮಾಡುವವರಿಗಾಗಿ ಈ ಮಾರ್ಗ ಉಪಯೋಗಿಸಬೇಕಾಯ್ತು. ಅನಗತ್ಯ ತೇಜೋವಧೆ ಮಾಡುವವರು ಇರುವುದರಿಂದ ಈ ಕ್ರಮ ಕೈಗೊಳ್ಳಬೇಕಾಯ್ತು. 5 ಕೋಟಿ, 10 ಕೋಟಿ ಕೊಡಿ ಎಂದು ಬೆದರಿಸುವವರಿಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ. ನಾಲ್ಕು ದಶಕದಿಂದ ರಾಜಕೀಯ ಜೀವನದಲ್ಲಿದ್ದೇವೆ. ಹೆಂಡತಿ ಮಕ್ಕಳ ವಿರುದ್ಧ ತಲೆ ತಗ್ಗಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ನಮಗೆ ಇರುವ ಸಂದೇಹವನ್ನ ಕೋರ್ಟ್​ಗೆ ಹೇಳಿದ್ದೇವೆ. ನೀವು ನಿರ್ದೋಶಿ ಎಂದು ಪದೇ ಪದೇ ಹಾಕಲ್ಲ. ಆದ್ರೆ ಆರೋಪವನ್ನ ಪದೇ ಪದೇ ಹಾಕಿ ತೋರಿಸ್ತೀರಿ. ನೀವು ನಿರ್ದೋಶಿ ಅನ್ನೋದನ್ನೂ ಪದೇ ಪದೇ ಹಾಕಬೇಕು. ನಾವು ಕೋರ್ಟ್​ಗೆ ಹೋಗಿ ನಮ್ಮ ಸೇಫ್ಟೀ ಮಾಡಿಕೊಂಡಿದ್ದೇವೆ ಎಂದರು

ಕೋರ್ಟ್ ಮೊರೆ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ: ಸಚಿವ ಕೆ.ಗೋಪಾಲಯ್ಯ ಹೇಳಿಕೆ ಈಗಾಗಲೇ ಹಲವು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಾಕುವ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಲ್ಲ. ಇಂದು ನಾನು ಅರ್ಜಿ ಹಾಕುವ ಬಗ್ಗೆ ಅಲೋಚನೆ ಮಾಡಿಲ್ಲ.ಕೆಲವರು ನಮ್ಮ ವಿರುದ್ದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಟಿವಿ9ಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದರು.

ಭಯ ಭೀತಿಯಿಂದ ಕೋರ್ಟ್​ಗೆ ಹೋಗಿದ್ದೀವಿ ಅಂತಲ್ಲ: ಸಚಿವ ಕೆ.ಸಿ.ನಾರಾಯಣಗೌಡ ಈ ಬಗ್ಗೆ ಮಾತಾನಾಡಿದ ಸಚಿವ ಕೆ.ಸಿ.ನಾರಾಯಣಗೌಡ, ಭಯ ಭೀತಿಯಿಂದ ಕೋರ್ಟ್​ಗೆ ಹೋಗಿದ್ದೇವೆ ಎಂದಲ್ಲ. ಗೌರವ ಹಾಗೂ ಕುಟುಂಬದವರಿಗೆ ನೋವಾಗುವ ಪ್ರಶ್ನೆ ಇದು. ಹೀಗಾಗಿ ಮುನ್ನೆಚ್ಚರಿಕೆ ಉದ್ದೇಶದಿಂದ ಕೋರ್ಟ್​ಗೆ ಹೋಗಿದ್ದೀವಿ. ಕೋರ್ಟ್​ಗೆ ಹೋಗಿದ್ದೀವಿ ಎಂದ ಕೂಡಲೇ ಸಿಡಿ ಇದೆ ಎಂದು ಅರ್ಥವಲ್ಲ. ನಿಜಾ ಇದ್ರೆ ನಾವು ಶಿಕ್ಷೆ ಅನುಭವಿಸಲು ಸಿದ್ದರಿದ್ದೇವೆ. ಇದನ್ನೆಲ್ಲ ತಡೆಹಿಡಿಯಲು ಕೋರ್ಟ್ ಹೋಗಿದ್ದೇವೆ. ನಮಗೆ ಜನರ ಕೆಲಸ ಮಾಡಲು ಸಮಯ ಇಲ್ಲ. ಇನ್ನ ಅದಕ್ಕೆಲ್ಲಾ ಸಮಯ ಎಲ್ಲಿಂದ ಬರುತ್ತೆ ಎಂದರು

ಇದನ್ನೂ ಓದಿ:ಕೋರ್ಟ್ ಮೊರೆ ಹೋದ ಮುಂಬೈ ಮಿತ್ರ ಮಂಡಳಿ ಸದಸ್ಯರು ನೀಡಿದ ಸ್ಪಷ್ಟನೆ ಏನು ಗೊತ್ತಾ? ಇಲ್ಲಿದೆ ವಿವರ

Published On - 1:49 pm, Sat, 6 March 21

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು