ಬೆಂಗಳೂರು, ಜೂನ್.05: ಮಗು ಒಳ್ಳೆಯ ಡ್ಯಾನ್ಸ್ ಮಾಡುತ್ತಾ, ಡ್ರಾಮಾ, ನಟನೆ ಮಾಡುತ್ತೆ ಎಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆ ಕಳಿಸದೆ ನಟನೆ ಕ್ಲಾಸ್ಗೆ ಸೇರಿಸಿಬಿಡುತ್ತಾರೆ. ತಮ್ಮ ಮಕ್ಕಳು (Children) ಕೂಡ ಫೇಮಸ್ ಆಗಬೇಕೆಂದು ಓದನ್ನೇ (Education) ನಿಲ್ಲಿಸಿರುವ ಮಕ್ಕಳ ಪೋಷಕರು ನೂರಾರು. ಆದರೆ ಮಕ್ಕಳನ್ನು ಶಾಲೆಗೆ ಕಳಸದೆ ನಟನೆ ಡ್ಯಾನ್ಸ್ ನಲ್ಲಿಯೇ ಟೈಮ್ ಕಳೆಯಲು ಬಿಟ್ರೆ ಪೋಷಕರ ಮೇಲೆ ಕೇಸ್ ಬೀಳುತ್ತೆ.
ಅಪ್ರಾಪ್ತ ಮಕ್ಕಳು 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಶಾಲೆಯಿಂದ 7 ದಿನಕ್ಕಿಂತ ಹೆಚ್ಚು ಗೈರು ಹಾಜರಾಗಿದ್ರೆ ಪೋಷಕರ ಮೇಲೆ ಕೇಸ್ ಬೀಳುತ್ತೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳು ಹೆಚ್ಚಾಗಿದ್ದು ಮಕ್ಕಳನ್ನ ಪೋಷಕರು ಹೆಚ್ಚಾಗಿ ರಿಯಾಲಿಟಿ ಶೋಗಳ ದಾಸರನ್ನಾಗಿ ಮಾಡ್ತಾ ಇದ್ದಾರೆ. ಶಾಲೆ ಬಿಡಿಸಿ ಈ ಶೋಗಳಲ್ಲಿ ಭಾಗವಹಿಸಲು ಬಿಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆ ನಷ್ಟವಾಗುತ್ತಿದೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಮಕ್ಕಳ ಹಕ್ಕುಗಳ ಆಯೋಗ ಪೋಷಕರು ಹಾಗೂ ಇತರದ ಚಾನಲ್ ಗಳಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕಸದಿಂದ ರಸ: ಎಲೆಕ್ಟ್ರಿಕ್ ಇ ವಸ್ತುಗಳಿಂದ ತಯಾರಾದ ಸುಂದರ ಚಿತ್ರ, ಸಿಲಿಕಾನ್ ಸಿಟಿ ಮಂದಿ ಫಿದಾ
ಮಕ್ಕಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರಶಸ್ತಿ ಗಳಿಸಬೇಕು ಅಂತಾ ಶಾಲೆ ಬಿಡಿಸಿ ದೂರದ ಊರು ಬಿಟ್ಟು ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಮನೆ ಹಿಡಿದು ಮಕ್ಕಳಿಗೆ ರಿಯಾಲಿಟಿ ಶೋನಲ್ಲಿ ಹಾಡಿಸುತ್ತಾರೆ. ಆದರೆ ಇದರಿಂದ ಮಕ್ಕಳು ಕಡ್ಡಾಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಲಿಕೆ ಹಳ್ಳ ಹಿಡಿಯುತ್ತಿದೆ. ಹೀಗಾಗಿ ಮಕ್ಕಳನ್ನ ಗರಿಷ್ಠ ಶಾಲೆಯಿಂದ 7 ದಿನಕ್ಕಿಂತ ಹೆಚ್ಚು ಗೈರು ಹಾಜರಾದ್ರೆ ಮಕ್ಕಳು ರಿಯಾಲಿಟಿ ಶೋಗಳಲ್ಲಿಯೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದರೆ ಪೋಷಕರ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಮುಂದಾಗಿದೆ.
ರಿಯಾಲಿಟಿ ಶೋಗಳು ಮಕ್ಕಳಿಗೆ ಒಳ್ಳೆಯ ವೇದಿಕೆ ಒದಗಿಸಿಕೊಡುತ್ತವೆ ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಪ್ರತಿಭೆಯ ಅನಾವರಣಕ್ಕೆ ಇದಕ್ಕಿಂತ ಒಳ್ಳೆ ಸ್ಥಳ ಸಿಗೋಲ್ಲ. ಹಾಗಂತ ಮಕ್ಕಳನ್ನ ಶಾಲೆಯಿಂದ ವಂಚಿತರಾಗಿ ಮಾಡಿ ಮಕ್ಕಳಿಗೆ ಕಲಿಕೆಯಿಂದ ಹೊರ ಬೀಳುವಂತೆ ಮಾಡುವುದು ಸರಿಯಾದ ಕ್ರಮವಲ್ಲ ಅಂತಿದೆ ಆಯೋಗ.
ಒಟ್ನಲ್ಲಿ ರಿಯಾಲಿಟಿ ಶೋಗಳಲ್ಲಿ ಮಕ್ಕಳು ಭಾಗವಹಿಸುವುದು ಪ್ರತಿಭಾ ಪ್ರದರ್ಶನದ ಜೊತೆಗೆ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ನಿಗಾವಹಿಸಬೇಕಿದೆ. ಈಗಿನ ಕ್ರೇಜ್ಗೆ ಮಕ್ಕಳನ್ನ ಶಾಲೆಯಿಂದ ದೂರ ಉಳಿಯದ್ದಂತೆ ನೋಡಿಕೊಂಡು ಎಚ್ಚರವಹಿಸಬೇಕಿದೆ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ