PSI ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ; ನೇಮಕಾತಿ ವಿಭಾಗದ 12 ಪೊಲೀಸ್​​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ವರ್ಗಾವಣೆ ಕೆಲಸವನ್ನು ಹಿರಿಯ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. 12 ಜನರ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

PSI ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ; ನೇಮಕಾತಿ ವಿಭಾಗದ 12 ಪೊಲೀಸ್​​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: May 07, 2022 | 3:39 PM

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ನೇಮಕಾತಿ ವಿಭಾಗದ ವರ್ಗಾವಣೆ ಕೆಲಸವನ್ನು ಹಿರಿಯ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. 12 ಜನರ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹಿತೇಂದ್ರ ಎಡಿಜಿಪಿ ಆಗಿ ವರ್ಗಾವಣೆಗೊಂಡ ಬಳಿಕ ಬದಲಾವಣೆ ಮಾಡಲಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣಕ್ಕೆ ಬದಲಾವಣೆ ಮಾಡಲಾಗುತ್ತಿದ್ದು, ನೇಮಕಾತಿ ವಿಭಾಗದಲ್ಲಿ 17 ಮಂದಿ ಕೇಂದ್ರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಲ್ಲಿ ಈಗಾಗಲೇ 12 ಜನರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ಉಳಿಸಿಕೊಳ್ಳಲಾಗಿದೆ. ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಉಳಿದ ಐವರ ಬದಲಾವಣೆ ಮಾಡಲಾಗುತ್ತದೆ.

ಒಟ್ಟಾರೆ ನೇಮಕಾತಿ ವಿಭಾಗಕ್ಕೆ ಹೊಸ ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಓರ್ವ ಆಡಳಿತಾಧಿಕಾರಿ, ತಾಂತ್ರಿಕ ವಿಭಾಗಕ್ಕೆ ಡಿವೈಎಸ್‌ಪಿ ಮತ್ತು ಇನ್ಸ್‌ಪೆಕ್ಟರ್ ಉಳಿದಂತೆ ಎಫ್‌ಡಿಎ, ಎಸ್‌ಡಿಎ ಸಿಬ್ಬಂದಿ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡಲಾಗುತ್ತಿದೆ.

ನೇಮಕಾತಿ ಸಮಯದಲ್ಲಿ ಒಟ್ಟು ನಲವತ್ತೆರಡು ಜನರು ಕೆಲಸ ಮಾಡುತ್ತಿದ್ದರು. ನೇರವಾಗಿ ಹದಿನೇಳು ಜನರು ಮಾತ್ರ ಕೆಲಸ ಮಾಡುತ್ತಿದ್ದರು. ಉಳಿದವರನ್ನು ಅವಶ್ಯಕತೆಗೆ ತಕ್ಕಂತೆ ಒಒಡಿ ಮೂಲಕ ಹಾಗು ಸ್ಪೆಷಲ್ ಡ್ಯೂಟಿ ಅನ್ವಯ ಕೆಲಸಕ್ಕೆ ಕರೆಸಿ ಬಳಸಿಕೊಳ್ಳಲಾಗುತಿತ್ತು.

ಇದನ್ನೂ ಓದಿ
Image
ಕಾಣೆಯಾದ ಮಗಳಿಗಾಗಿ ಡಿಸಿ ಕಛೇರಿ ಎದುರು ಹೆತ್ತಮ್ಮನ ಕಣ್ಣೀರು: ವಿಷದ ಬಾಟಲ್ ಹಿಡಿದು ಮಹಿಳೆಯ ಏಕಾಂಗಿ ಹೋರಾಟ
Image
275 ಸಂಚಾರಿ ಪಶು ಚಿಕಿತ್ಸಾ ವಾಹನ ಲೋಕಾರ್ಪಣೆ; ಏನಿದರ ವಿಶೇಷ? ಇಲ್ಲಿದೆ ನೋಡಿ
Image
ಪಿಎಸ್ಐ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಲಬುರಗಿ 11 ಪೊಲೀಸ್ ಸಿಬ್ಬಂದಿ ಅಮಾನತು!

ಅಸಿಸ್ಟೆಂಟ್​ ಕಮಾಂಡೆಂಟ್ ವೈಜನಾಥ್ 7 ದಿನ ಸಿಐಡಿ ವಶಕ್ಕೆ

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಿಸ್ಟೆಂಟ್​ ಕಮಾಂಡೆಂಟ್ ವೈಜನಾಥ್ 7 ದಿನ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಲಬುರಗಿ 3ನೇ ಜೆಎಂಎಫ್​ಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. KSRP ಅಸಿಸ್ಟೆಂಟ್​ ಕಮಾಂಡೆಂಟ್​​​ ವೈಜನಾಥ್​​​​​​ ರೇವೂರ್​ನನ್ನು ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಸಿಐಡಿ ಬಂಧಿಸಿತ್ತು.

ಸಿಐಡಿ ನೋಟಿಸ್​ಗೆ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತ379748ರ:

ಅಕ್ರಮದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ನೋಟೀಸ್ ನೀಡಿತ್ತು. ಆದರೆ ಸಿಐಡಿ ನೋಟಿಸ್​ಗೆ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತರ ನೀಡಿದ್ದಾರೆ. 3ನೇ ನೋಟಿಸ್‌ಗೂ ಲಿಖಿತ ಉತ್ತರ ನೀಡಿದ್ದಾರೆ. 6 ಪುಟಗಳ ಸುದೀರ್ಘ ಉತ್ತರ ಕೊಟ್ಟಿದ್ದಾರೆ. ನಿನ್ನೆ ಸಂಜೆ ಆಪ್ತ ಸಹಾಯಕನ ಮೂಲಕ ನೋಟಿಸ್‌ಗೆ ಉತ್ತರಿಸಿದ್ದಾರೆ.

ಆಡಿಯೋ ಬಿಡುಗಡೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ನೀಡುವಂತೆ ಸಿಐಡಿ ನೋಟಿಸ್ ನೀಡಿತ್ತು. ಮೊದಲ ನೋಟಿಸ್​ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು. 2ನೇ ನೋಟಿಸ್ ಸ್ವೀಕರಿಸದೆ ವಾಪಸ್ ಕಳುಹಿಸಿದ್ದರು. ಖುದ್ದು ಹಾಜರಾಗುವಂತೆ ಸಿಐಡಿ 3ನೇ ನೋಟಿಸ್ ನೀಡಿತ್ತು. ಆದರೆ ಶಾಸಕರು ಹಾಜರಾಗದೆ ಲಿಖಿತ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಸರ್ಕಾರದಲ್ಲಿ‌ ದುಡ್ಡು ಎಲ್ಲಿ ಹೋಗ್ತಿದೆ ಎಂದು ಬಾಯಿ ಬಿಡುತ್ತಿಲ್ಲ. ಇವರೆಗೂ ಅರೆಸ್ಟ್ ಮಾಡಿರೋದು 20 ಜನರನ್ನ ಮಾತ್ರ. ಉಳಿದವರು ಎಲ್ಲಿ ಹೋಗಿದ್ದಾರೆ. ಸಿಐಡಿ ನೋಟಿಸ್​ಗೆ ಲಿಖಿತ ರೂಪದಲ್ಲಿ ದಾಖಲೆ ಕೊಟ್ಟಿದ್ದೀನಿ. ಇದು ಅರ್ಥ ಆಗಲಿಲ್ಲ ಅಂದರೆ ಗೃಹ ಸಚಿವರಾಗಲು ನಾಲಾಯಕ್. ಕರ್ನಾಟಕ ಪೊಲೀಸ್ ಮುಂಚೆ ಮಾದರಿಯಾಗಿತ್ತು ಎಂದು ಹೇಳಿದ್ದರು. ಈ ಅಸಮರ್ಥರಾಗಿ ಈ ಹೇಳಿಕೆ ಕೊಟ್ರಾ? ಎಂದು ಪ್ರಶ್ನಿಸಿದ್ದಾರೆ.