ಕರ್ನಾಟಕದ ಹಲವೆಡೆ ಭಾರಿ ಮಳೆ, ಇಲ್ಲಿದೆ ಕೆಲವು ಅವಾಂತರಗಳ ಫೋಟೋಗಳು

ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ, ಅಲ್ಲದೆ ಕೆಲವು ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ರಸ್ತೆಗಳ ಮೇಲೆ ಮರಗಳು ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಇದರ ಕೆಲವು ಫೋಟೋಗಳು ಇಲ್ಲಿವೆ ನೋಡಿ.

Jul 05, 2022 | 11:39 AM
TV9kannada Web Team

| Edited By: Rakesh Nayak

Jul 05, 2022 | 11:39 AM

ಕೊಡಗಿನ ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿದೆ. ಭಾಗಮಂಡಲದಿಂದ ನಾಲ್ಕು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ.

ಕೊಡಗಿನ ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿದೆ. ಭಾಗಮಂಡಲದಿಂದ ನಾಲ್ಕು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ.

1 / 5
ಧಾರಾಕರ ಮಳೆಗೆ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು, ಪಣಸಗುಳಿ-ಕೆಳಸೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

ಧಾರಾಕರ ಮಳೆಗೆ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು, ಪಣಸಗುಳಿ-ಕೆಳಸೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

2 / 5
Heavy rains in many parts of Karnataka, here are some photos of the disturbances

ಶಿರಸಿಯಲ್ಲಿ ನಿರಂತರ ಮಳೆಯಿಂದಾಗಿ ಕುಸಿದ ಮನೆಗಳು, ಗಣಪತಿ ಭಟ್, ಹನಿಫಾಬಿ ಅಬ್ದುಲ್ ಎಂಬುವರ ಮನೆಗೆ ಹಾನಿ.

3 / 5
Heavy rains in many parts of Karnataka, here are some photos of the disturbances

ಗಾಳಿ ಮಳೆಯಿಂದ ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಬಿದ್ದ ಮರ, ಶಿರಸಿ-ಕುಮಟಾ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್.

4 / 5
Heavy rains in many parts of Karnataka, here are some photos of the disturbances

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ, ಮಳೆಯಿಂದ ಬಂಟ್ವಾಳದ ವಿಟ್ಲ-ಮುಡಿಪು ರಸ್ತೆ ಜಲಾವೃತವಾಗಿದ್ದು, ರಸ್ತೆ ಮೇಲೆಯೇ ಹೊಳೆಯ ನೀರು ಹರಿಯುತ್ತಿದೆ.

5 / 5

Follow us on

Most Read Stories

Click on your DTH Provider to Add TV9 Kannada