AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ

Karnataka Weather Forecast: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು ಮತ್ತು ನಾಳೆ ಗಾಳಿ, ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕೇರಳದ ಕೆಲವು ಭಾಗ ಮತ್ತು ಕರ್ನಾಟಕದ ಒಳಭಾಗದಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ

Karnataka Rain: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ
ಕರ್ನಾಟಕದಲ್ಲಿ ಮಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 30, 2022 | 5:58 AM

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ ಮುಂದುವರೆದಿದ್ದು, ಮಲೆನಾಡು, ಕರಾವಳಿಯಲ್ಲಿ ವರುಣನ ಆರ್ಭಟವಾಗುತ್ತಿದೆ. ರಾಜ್ಯದ ಕರಾವಳಿ ಮತ್ತು ಪಶ್ಚಿಮ ಭಾಗಗಳಲ್ಲಿ ಮಾರ್ಚ್ 31ರವರೆಗೆ ಮಳೆ (Rainfall) ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯ ಹಲವೆಡೆ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿತ್ತು. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಇಂದು (ಮಾರ್ಚ್ 30) ಮತ್ತು ನಾಳೆ ಗಾಳಿ, ಗುಡುಗು ಸಹಿತ ಮಳೆಯಾಗಲಿದೆ.

ಶಿವಮೊಗ್ಗದ ಆಯನೂರು ಸುತ್ತಮುತ್ತ ನಿನ್ನೆ ಆಲಿಕಲ್ಲು ಸಹಿತ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭಾರೀ ಗಾಳಿ, ಮಳೆಯಿಂದ ಲಕ್ಷಾಂತರ ರೂ. ಹಾನಿಯಾಗಿದೆ. ಶಿರಸಿಯಲ್ಲೂ ವ್ಯಾಪಕ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲೂ ಮಳೆಯಾಗಿದೆ. ಇಂದು ಕೂಡ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.

ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನಾದ್ಯಂತ ಮಳೆಯಾಗುತ್ತಿದೆ. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೂಡ ಮಳೆಯಾಗುತ್ತಿದೆ. ಮಂಡ್ಯ, ಬೆಳಗಾವಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಕ್ರಮವಾಗಿ 5.8 ಸೆಂ.ಮೀ, 4.5 ಸೆಂ.ಮೀ ಮತ್ತು 3.6 ಸೆಂ.ಮೀ ಮಳೆಯಾಗಿದೆ. ಕಳೆದ ವಾರದ ಆರಂಭದಲ್ಲಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಕೆಲವು ಭಾಗಗಳು ಭಾರೀ ಮಳೆಗೆ ಸಾಕ್ಷಿಯಾಗಿದ್ದವು. ಅದರ ನಂತರ ಮಾರ್ಚ್ ಅಂತ್ಯದವರೆಗೆ ಮಳೆ ಮತ್ತು ಭಾರೀ ಗಾಳಿಯ ಮುನ್ಸೂಚನೆ ನೀಡಲಾಗಿತ್ತು.

ಇಂದು ಅರುಣಾಚಲ ಪ್ರದೇಶ ಮತ್ತು ಅದರ ಪಕ್ಕದ ಪ್ರದೇಶದಲ್ಲಿ ಗುಡುಗು, ಬಿರುಗಾಳಿ ಸಹಿತ ವ್ಯಾಪಕವಾದ ತುಂತುರು ಮಳೆ ಮತ್ತು ಕೆಲವೆಡೆ ಆಲಿಕಲ್ಲು ಸಹಿತ ಮಳೆಯನ್ನು ನಿರೀಕ್ಷಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಮತ್ತು ಕರ್ನಾಟಕದ ಒಳಭಾಗದಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು ಮತ್ತು ಕೇರಳದಲ್ಲಿ ಹಳದಿ ಅಲರ್ಟ್​ ಘೋಷಿಸಿದೆ.

ಇಂದು ಕರ್ನಾಟಕ ಮತ್ತು ಕೇರಳದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಲಡಾಖ್​ನಲ್ಲಿ ಹಿಮದ ವಾತಾವರಣವಿರಲಿದೆ. ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಸಿಗಾಳಿಯ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.

ಇದನ್ನೂ ಓದಿ: Weather Alert: ಇನ್ನು ಐದು ದಿನ ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ, ಮಳೆಯೂ ಇರಲಿದೆ: ಹವಾಮಾನ ಇಲಾಖೆ

Karnataka Rain: ಮಾ. 28ರವರೆಗೆ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿ ಹಲವೆಡೆ ಮಳೆ; ಹವಮಾನ ಇಲಾಖೆ ಮುನ್ಸೂಚನೆ

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್