ರಾಜ್ಯದಲ್ಲಿ ಇಂದು 1,837 ಜನರಲ್ಲಿ ಕೊರೊನಾ ಸೋಂಕು ದೃಢ; ನಾಲ್ಕು ಸಾವು

ರಾಜ್ಯದಲ್ಲಿ ಇಂದು (ಆಗಸ್ಟ್​ 7) 1,837 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 11,898 ಇದ್ದು, ಕೊರೊನಾ ​ಪಾಸಿಟಿವಿಟಿ ರೇಟ್​ ಶೇಕಡಾ 6.24 ಇದೆ.

ರಾಜ್ಯದಲ್ಲಿ ಇಂದು 1,837 ಜನರಲ್ಲಿ ಕೊರೊನಾ ಸೋಂಕು ದೃಢ; ನಾಲ್ಕು ಸಾವು
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Aug 07, 2022 | 8:36 PM

ಬೆಂಗಳೂರು: ರಾಜ್ಯದಲ್ಲಿ ಇಂದು (ಆಗಸ್ಟ್​ 7) 1,837 ಜನರಲ್ಲಿ ಕೊರೊನಾ (Covid) ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 11,898 ಇದ್ದು, ಕೊರೊನಾ ​ಪಾಸಿಟಿವಿಟಿ ರೇಟ್​ ಶೇಕಡಾ 6.24 ಇದೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಇಂದು ನಾಲ್ವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿಂದು 1,137 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾಗೆ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಭಾರತದಲ್ಲಿ 18,738 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ,  ಭಾರತದಲ್ಲಿ ರವಿವಾರ (ಆಗಸ್ಟ 7) ಒಟ್ಟು 18,738 ಹೊಸ ಕೊವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ ಚೇತರಿಸಿಕೊಂಡವರ ಸಂಖ್ಯೆ 18,558. ದೇಶದಲ್ಲಿ ಪ್ರಸ್ತುತ 1,34,933 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,34,84,110 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದ ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 5.02 ಇದ್ದರೆ ವಾರದ ಪಾಸಿಟಿವಿಟಿ ಸರಾಸರಿಯು ಶೇ 4.63 ಇದೆ. ದೇಶದಲ್ಲಿ ಈವರೆಗೆ 206.21 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada