ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್‌ಎಸ್, ತುಂಗಭದ್ರಾ ಸೇರಿ ಪ್ರಮುಖ ಡ್ಯಾಂ ವಾಟರ್ ಲೆವೆಲ್ ಇಲ್ಲಿದೆ!
ಕರ್ನಾಟಕದ ಜಲಾಶಯಗಳ (ಅಕ್ಟೋಬರ್ 09) ನೀರಿನ ಮಟ್ಟ: ಇಂದಿನ ವರದಿಯಂತೆ ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ತುಂಗಭದ್ರಾ, ಆಲಮಟ್ಟಿ ಹಾಗೂ ಬಸವಸಾಗರ ಡ್ಯಾಂಗಳಲ್ಲಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಮಳೆ ಕಡಿಮೆಯಾಗಿರುವುದರಿಂದ ಒಳಹರಿವು ಇಳಿಮುಖವಾಗಿದ್ದು, ನಾಲೆ ಹಾಗೂ ಕುಡಿಯುವ ನೀರಿಗಾಗಿ ಜಲಾಶಯಗಳಿಂದ ನೀರು ಹರಿಸಲಾಗುತ್ತಿದೆ.

ಮುಖ್ಯಾಂಶಗಳು
- ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಇಳಿಮುಖಗೊಂಡಿದೆ.
- ಕೆಆರ್‌ಎಸ್ ಮತ್ತು ಕಬಿನಿಯಿಂದ ನಾಲೆಗಳಿಗೆ ನೀರು ಬಿಡುಗಡೆ ಕಾಯ್ದುಕೊಳ್ಳಲಾಗಿದೆ.
- ತುಂಗಭದ್ರಾ ಹಾಗೂ ಆಲಮಟ್ಟಿಯಿಂದ ಕೃಷಿಗಾಗಿ ನೀರು ಹರಿಸಲಾಗುತ್ತಿದೆ.
ಬೆಂಗಳೂರು, ಅಕ್ಟೋಬರ್ 09: ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ತುಂಗಭದ್ರಾ, ಆಲಮಟ್ಟಿ ಹಾಗೂ ಬಸವಸಾಗರ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಹಾಗೂ ಹರಿವಿನ ಸ್ಥಿತಿಗತಿಯ ವಿವರ ಇಲ್ಲಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಇಳಿಮುಖಗೊಂಡಿದ್ದು, ನಾಲೆ ಹಾಗೂ ಕುಡಿಯುವ ನೀರಿನ ಪೂರೈಕೆಗಾಗಿ ನದಿಗಳಿಗೆ ಹೊರಹರಿವನ್ನು ಕಾಯ್ದುಕೊಳ್ಳಲಾಗಿದೆ. ಪ್ರಸ್ತುತ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಸಾಧಾರಣ ಸಂಗ್ರಹವಿದ್ದರೆ, ಕೃಷ್ಣಾ ಮತ್ತು ತುಂಗಭದ್ರಾ ಜಲಾಶಯಗಳಿಂದ ಕೃಷಿ ಹಾಗೂ ಕುಡಿಯುವ ನೀರಿಗಾಗಿ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ.
1. ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಇಂದಿನ ನೀರಿನ ಸ್ಥಿತಿಗತಿ:
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 102.06 ಅಡಿ
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಒಟ್ಟು ಸಂಗ್ರಹ: 24.467 ಟಿಎಂಸಿ (ಜೀವಂತ ಸಂಗ್ರಹ: 16.088 ಟಿಎಂಸಿ)
- ಒಳಹರಿವು: 354 ಕ್ಯೂಸೆಕ್
- ಹೊರಹರಿವು: 2,519 ಕ್ಯೂಸೆಕ್ (ನಾಲೆ ಮತ್ತು ಕುಡಿಯುವ ನೀರು ಸೇರಿ)
2. ಕಬಿನಿ ಜಲಾಶಯ
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಇಂದಿನ ವಿವರ:
- ಗರಿಷ್ಠ ಮಟ್ಟ: 84 ಅಡಿ
- ಇಂದಿನ ನೀರಿನ ಮಟ್ಟ: 68.16 ಅಡಿ
- ಇಂದಿನ ಒಟ್ಟು ಸಂಗ್ರಹ: 10.80 ಟಿಎಂಸಿ (ಜೀವಂತ ಸಂಗ್ರಹ: 0.99 ಟಿಎಂಸಿ)
- ಒಳಹರಿವು: 1,209 ಕ್ಯೂಸೆಕ್
- ಹೊರಹರಿವು: ಒಟ್ಟು 1,300 ಕ್ಯೂಸೆಕ್ (ನದಿಗೆ 500 ಕ್ಯೂಸೆಕ್, ಬಲದಂಡೆ ನಾಲೆಗೆ 800 ಕ್ಯೂಸೆಕ್)
- ಮಳೆ ಪ್ರಮಾಣ: ಜಲಾಶಯದ ವ್ಯಾಪ್ತಿಯಲ್ಲಿ 5 ಮಿ.ಮೀ. ಮಳೆಯಾಗಿದೆ.
3. ತುಂಗಭದ್ರಾ ಜಲಾಶಯ
ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಇಂದಿನ ಸ್ಥಿತಿ:
- ಗರಿಷ್ಠ ಮಟ್ಟ: 1633.00 ಅಡಿ
- ಇಂದಿನ ನೀರಿನ ಮಟ್ಟ: 1620.888 ಅಡಿ
- ಗರಿಷ್ಠ ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
- ಇಂದಿನ ಒಟ್ಟು ಸಂಗ್ರಹ: 63.850 ಟಿಎಂಸಿ
- ಒಳಹರಿವು: ಪ್ರಸ್ತುತ ಒಳಹರಿವು ಶೂನ್ಯ (Nil)
- ಹೊರಹರಿವು: ಒಟ್ಟು ನಾಲೆಗಳಿಗೆ 10,012 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
4. ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಇಂದಿನ ಮಟ್ಟ:
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 518.14 ಮೀಟರ್
- ಒಳಹರಿವು: ಪ್ರಸ್ತುತ ಒಳಹರಿವು ಇರುವುದಿಲ್ಲ (Nil)
- ಹೊರಹರಿವು: 13,600 ಕ್ಯೂಸೆಕ್
5. ಬಸವಸಾಗರ ಜಲಾಶಯ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಡ್ಯಾಂ ವಿವರ:
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ನೀರಿನ ಮಟ್ಟ: 491.40 ಮೀಟರ್
- ಒಳಹರಿವು: 5,962 ಕ್ಯೂಸೆಕ್
- ಹೊರಹರಿವು: 14,442 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 9 October 26




