ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ತುಂಗಭದ್ರ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಸಂಪೂರ್ಣ ಮಾಹಿತಿ ಇಲ್ಲಿದೆ!
ಕರ್ನಾಟಕದ ಜಲಾಶಯಗಳ (ಅಕ್ಟೋಬರ್ 24) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ತುಂಗಭದ್ರಾ, ಕಬಿನಿ ಹಾಗೂ ಆಲಮಟ್ಟಿ ಡ್ಯಾಮ್‌ಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಮುಂಗಾರು ಮಳೆಯ ನಂತರ ರಾಜ್ಯದ ಜಲಸಂಗ್ರಹದ ಪ್ರಸ್ತುತ ಸ್ಥಿತಿಗತಿಗಳ ದೈನಂದಿನ ಅಪ್ಡೇಟ್ ಮಾಹಿತಿ ತಿಳಿಯಿರಿ.

ಆಲಮಟ್ಟಿ ಜಲಾಶಯ
ಮುಖ್ಯಾಂಶಗಳು
- ಜಲಶಯಗಳಲ್ಲಿ ನೀರಿನ ಸಂಗ್ರಹ ಹಾಗೂ ಒಳಹರಿವಿನ ದೈನಂದಿನ ವಿವರ ಲಭ್ಯ.
- ಕೆಆರ್‌ಎಸ್, ತುಂಗಭದ್ರ ಹಾಗೂ ಕಬಿನಿ ಜಲಾಶಯಗಳ ನೀರಿನ ಮಟ್ಟ ಪ್ರಕಟ.
- ಆಲಮಟ್ಟಿ ಜಲಾಶಯದ ಇಂದಿನ ಮಟ್ಟ ಮತ್ತು ಹೊರಹರಿವಿನ ಮಾಹಿತಿ ವಿವರ.
ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ತಗ್ಗಿದ್ದರೂ, ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್), ತುಂಗಭದ್ರ, ಕಬಿನಿ ಹಾಗೂ ವಿಜಯಪುರದ ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಮತ್ತು ಒಳ-ಹೊರಹರಿವಿನ ದೈನಂದಿನ ಅಂಕಿಅಂಶಗಳು ಲಭ್ಯವಾಗಿವೆ. ಈ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಲೈವ್ ಸ್ಟೋರೇಜ್ ವಿವರಗಳು ಈ ಕೆಳಗಿನಂತಿವೆ.
ಕೆ.ಆರ್.ಎಸ್. ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 102.18 ಅಡಿ
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ನೀರು ಸಂಗ್ರಹ: 24.567 ಟಿಎಂಸಿ
- ಲೈವ್ ಸ್ಟೋರೇಜ್: 16.188 ಟಿಎಂಸಿ
- ಒಳಹರಿವು: 3,696 ಕ್ಯೂಸೆಕ್
- ಹೊರಹರಿವು: 1,426 ಕ್ಯೂಸೆಕ್ (ನಾಲೆಗಳು ಮತ್ತು ಕುಡಿಯುವ ನೀರು ಸೇರಿದಂತೆ)
ತುಂಗಭದ್ರಾ ಜಲಾಶಯ
- ಗರಿಷ್ಠ ಮಟ್ಟ (F.R.L): 1633.00 ಅಡಿ
- ಇಂದಿನ ನೀರಿನ ಮಟ್ಟ: 1614.971 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
- ಪ್ರಸ್ತುತ ನೀರು ಸಂಗ್ರಹ: 48.342 ಟಿಎಂಸಿ
- ಒಳಹರಿವು: ಒಳಹರಿವು ಇಲ್ಲ (Nil)
- ಹೊರಹರಿವು: 11,300 ಕ್ಯೂಸೆಕ್ (ನಾಲಾ ಭಾಗಕ್ಕೆ 10,141 ಕ್ಯೂಸೆಕ್ ಹಾಗೂ ನದಿಗೆ 1,159 ಕ್ಯೂಸೆಕ್)
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 84 ಅಡಿ
- ಇಂದಿನ ನೀರಿನ ಮಟ್ಟ: 69.89 ಅಡಿ
- ಒಟ್ಟು ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
- ಇಂದಿನ ನೀರು ಸಂಗ್ರಹ: 11.62 ಟಿಎಂಸಿ
- ಪ್ರಸ್ತುತ ಲೈವ್ ಸ್ಟೋರೇಜ್: 1.81 ಟಿಎಂಸಿ
- ಒಳಹರಿವು: 3,868 ಕ್ಯೂಸೆಕ್
- ಒಟ್ಟು ಹೊರಹರಿವು: 500 ಕ್ಯೂಸೆಕ್ (ಕಬಿನಿ ನದಿಗೆ ಮಾತ್ರ, ನಾಲೆಗಳಿಗೆ ನೀರು ಬಿಡುಗಡೆ ಇಲ್ಲ)
- ಮಳೆ: ಜಲಾಶಯದ ವ್ಯಾಪ್ತಿಯಲ್ಲಿ 50 ಮಿ.ಮೀ ಮಳೆ ದಾಖಲಾಗಿದೆ.
ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 516.27 ಮೀಟರ್
- ಒಳಹರಿವು: ಒಳಹರಿವು ಇಲ್ಲ (Nil)
- ಹೊರಹರಿವು: 9,039 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




