Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakti Yojana: ಹೊಸದಾಗಿ 1,894 ಬಸ್​​ಗಳನ್ನು ಖರೀದಿಸಲು ರಾಜ್ಯ ಸಾರಿಗೆ ನಿಗಮ ಚಿಂತನೆ

ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲು ಈ ವರ್ಷ 1,894 ಹೊಸ ಬಸ್‌ಗಳನ್ನು ಖರೀದಿಸಲು ಸಾರಿಗೆ ನಿಗಮ ಯೋಚಿಸಿವೆ.

Shakti Yojana: ಹೊಸದಾಗಿ 1,894 ಬಸ್​​ಗಳನ್ನು ಖರೀದಿಸಲು ರಾಜ್ಯ ಸಾರಿಗೆ ನಿಗಮ ಚಿಂತನೆ
ಕೆಎಸ್​ಆರ್​ಟಿಸಿ
Follow us
ವಿವೇಕ ಬಿರಾದಾರ
|

Updated on:Jun 12, 2023 | 9:06 AM

ಬೆಂಗಳೂರು: ಕರ್ನಾಟಕ ಸರ್ಕಾರವು ನಿನ್ನೆ (ಜೂ.11) ಶಕ್ತಿ ಯೋಜನೆಗೆ (Shakti Yojana) ಚಾಲನೆ ನೀಡಿತು. ಈ ಯೋಜನೆಯ ಅಡಿ ಮಹಿಳೆಯರು ರಾಜ್ಯ ಸಾರಿಗೆಯ ನಾಲ್ಕು ನಿಗಮದ (KSRTC, BMTC, NWKSRTC, KKRTC) ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲು ಈ ವರ್ಷ 1,894 ಹೊಸ ಬಸ್‌ಗಳನ್ನು ಖರೀದಿಸಲು ಸಾರಿಗೆ ನಿಗಮ ಯೋಚಿಸಿವೆ. ಶಕ್ತಿ ಯೋಜನೆ ಅನುಷ್ಠಾನದ ನಂತರ, ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಬಸ್‌ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಹಿಂದು ವರದಿ ಮಾಡಿದೆ.

ಅಲ್ಲದೇ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಾರಿಗೆ ನಿಮಗ ಮುಂದಾಗಿದೆ. ಹೆಚ್ಚಿನ ಬಸ್‌ಗಳ ಅಗತ್ಯವಿರುವ ಕೆಲವು ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ, ಬೇಡಿಕೆಯನ್ನು ಪೂರೈಸಲು ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಮತ್ತು ವೇಳಾಪಟ್ಟಿಗಳನ್ನು ತರ್ಕಬದ್ಧಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ನಾಲ್ಕು ನಿಗಮಗಳು 1,04,450 ಸಿಬ್ಬಂದಿ ಹೊಂದಿವೆ. ಮತ್ತು ಪ್ರಸ್ತುತ, ನಾಲ್ಕು ನಿಗಮಗಳು ರಾಜ್ಯದಾದ್ಯಂತ 23,989 ಬಸ್‌ಗಳನ್ನು ಹೊಂದಿದ್ದು, ಒಂದು ದಿನಕ್ಕೆ ಸರಾಸರಿ 65.02 ಲಕ್ಷ ಕಿಲೋಮೀಟರ್ ಸಂಚರಿಸುತ್ತವೆ.

ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ, ಬಸ್ ಹತ್ತುವ ಮುನ್ನಈ ದಾಖಲಾತಿ ನಿಮ್ಮ ಬಳಿ ಇರಬೇಕು

ಶೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಿದ ಡೇಟಾದ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ನೀಡುತ್ತದೆ. ವಿಶೇಷ ಅನುದಾನ ಮತ್ತು ಹಣಕಾಸಿನ ನೆರವಿನ ಹೊರತಾಗಿ ಬಸ್ ಪಾಸ್‌ಗಳಿಗೆ ಒದಗಿಸಲಾದ ಸಬ್ಸಿಡಿಯನ್ನು ಸರ್ಕಾರವು ವಾಡಿಕೆಯಂತೆ ಮರುಪಾವತಿ ಮಾಡುತ್ತದೆ.

ಸರ್ಕಾರವು ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ ನಾಲ್ಕು ನಿಗಮಗಳಿಗೆ 3,606.52 ಕೋಟಿ ರೂ. ಮರುಪಾವತಿ ಮಾಡಿದೆ. ಶಕ್ತಿ ಯೋಜನೆಗೆ ವಾರ್ಷಿಕ ಸುಮಾರು 4,051. 56 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Mon, 12 June 23