ಬೆಂಗಳೂರು: ಕೊರೊನಾ ಆತಂಕದ ನಡುವೆ ಎಸ್‌ಎಸ್‌ಎಲ್‌ಸಿ ಎಕ್ಸಾಂ ಬಂದೇ ಬಿಟ್ಟಿದೆ. 10ನೇ ತರಗತಿ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ. ಶಿಕ್ಷಣ ಇಲಾಖೆ SSLC ಎಕ್ಸಾಂ ಮಾಡದೇ ಪಾಸ್ ಮಾಡಿದ್ರೆ, ಮುಂದಿನ ತರಗತಿಗೆ ಹೋಗೋಕೆ ಸಮಸ್ಯೆ ಆಗುತ್ತೆ ಅಂತಾ ಪರೀಕ್ಷೆ ನಡೆಸ್ತಿದೆ. ಇಂದು ಮತ್ತು 22 ರಂದು ಅಂದ್ರೆ ಗುರುವಾರ ಎಸ್ಎಸ್ಎಲ್ಸಿ ಎಕ್ಸಾಂಗೆ ಮೂಹೂರ್ತ ಫಿಕ್ಸ್ ಆಗಿದೆ. ಇಂದು ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರುತ್ತೆ. ಮತ್ತೊಂದು ಪ್ರಶ್ನೆ ಪತ್ರಿಕೆ ಮೂರು ಭಾಷಾ ವಿಷಯಗಳನ್ನ ಸೇರಿಸಿ ಸಿದ್ಧಪಡಿಸಲಾಗಿರುತ್ತದೆ. ಪ್ರತಿ ಪಶ್ನೆ ಪತ್ರಿಕೆ ಒಟ್ಟು 120 ಅಂಕಗಳನ್ನ ಒಳಗೊಂಡಿದ್ದು, ಮೂರು ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳಿರುತ್ತೆ. ಸದ್ಯ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಕೂಲ್ ಆಗಿ ಆಟೋ, ಟ್ಯಾಕ್ಸಿ, ಬೈಕ್ಗಳ ಮೂಲಕ ತಮ್ಮ ಪೋಷಕರ ಜೊತೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಸ್ನೇಹಿತರೊಡನೆ ಕುಳಿತು ಪರೀಕ್ಷೆ ಬಗ್ಗೆ ಡಿಸ್ಕಸ್ ಮಾಡಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದಲೇ ನೀರಿನ ಬಾಟಲ್, ಟಿಫಿನ್ ಬಾಕ್ಸ್ ತಂದಿದ್ದಾರೆ. ಗಾಬರಿ ಇಲ್ಲದೆ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳಿಗೆ ಮಳೆಯ ಕಾಟವಿಲ್ಲ. ಆದ್ರೆ ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಲ್ ಟಿಕೆಟ್ ಸಮಸ್ಯೆಯಾದ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬಿಇಒ ನಿಯೋಜನೆ ಮಾಡಲಾಗಿದ್ದು ಹಾಲ್ ಟಿಕೆಟ್ ಸಿಗದ ಮಕ್ಕಳಿಗೆ ಕೇಂದ್ರದ ಸುತ್ತಮುತ್ತ ಇರುವ BEO ಮೂಲಕ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ
ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಹಾಗೂ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಜರ್ ಬಳಸಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹಾಗೂ ಕೆಲ ಕಡೆ ಮಾಸ್ಕ್ ಇಲ್ಲದ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಹೆಚ್ಡಿಕೆ
ಪ್ರೀತಿಯ SSLC ವಿದ್ಯಾರ್ಥಿಗಳೇ,
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ SSLC ಪರೀಕ್ಷೆಗಳನ್ನು ಇಂದಿನಿಂದ ಎದುರಿಸಲಿದ್ದೀರಿ. ಪರೀಕ್ಷೆಯ ಬಗ್ಗೆ ಯಾವುದೇ ರೀತಿಯ ಆತಂಕ ಪಡದೇ, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕ ಪಡೆದು ನಿಮ್ಮ ಪೋಷಕರಿಗೆ, ಶಾಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸುತ್ತೇನೆ.
ಕೋವಿಡ್-19 ನಿಯಮಗಳನ್ನು ತಪ್ಪದೇ ಪಾಲಿಸಿ ಧೈರ್ಯದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ. ನಿಮ್ಮ ಭವಿಷ್ಯ ಉತ್ತಮವಾಗಿರಲೆಂದು ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರೀತಿಯ SSLC ವಿದ್ಯಾರ್ಥಿಗಳೇ,
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ SSLC ಪರೀಕ್ಷೆಗಳನ್ನು ಇಂದಿನಿಂದ ಎದುರಿಸಲಿದ್ದೀರಿ. ಪರೀಕ್ಷೆಯ ಬಗ್ಗೆ ಯಾವುದೇ ರೀತಿಯ ಆತಂಕ ಪಡದೇ, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕ ಪಡೆದು ನಿಮ್ಮ ಪೋಷಕರಿಗೆ, ಶಾಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸುತ್ತೇನೆ. (1/2)— H D Kumaraswamy (@hd_kumaraswamy) July 19, 2021
ರಾಜ್ಯದಲ್ಲಿ ಒಟ್ಟು 33 SSLC ವಿದ್ಯಾರ್ಥಿಗಳಿಗೆ ಕೊರೊನಾ
ಇನ್ನು ರಾಜ್ಯದಲ್ಲಿ ಒಟ್ಟು 33 SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.
ಎರಡು ದಿನದಲ್ಲಿ SSLCಯ ಒಟ್ಟು 6 ವಿಷಯಗಳನ್ನ ಕವರ್ ಮಾಡಲಾಗ್ತಿದೆ. ಇಂದು ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪರೀಕ್ಷೆ ನಡೆದ್ರೆ, ಜುಲೈ 22 ರಂದು ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಅಂದ್ರೆ ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರುತ್ತೆ. ಮತ್ತೊಂದು ಪ್ರಶ್ನೆ ಪತ್ರಿಕೆ ಮೂರು ಭಾಷಾ ವಿಷಯಗಳನ್ನ ಸೇರಿಸಿ ಸಿದ್ಧಪಡಿಸಲಾಗಿರುತ್ತದೆ. ಪ್ರತಿ ಪಶ್ನೆ ಪತ್ರಿಕೆ ಒಟ್ಟು 120 ಅಂಕಗಳನ್ನ ಒಳಗೊಂಡಿದ್ದು, ಮೂರು ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳಿರುತ್ತೆ. ಅಷ್ಟೇ ಅಲ್ಲ ಒಂದು ಪ್ರಶ್ನೆಗೆ ಬಹು ಆಯ್ಕೆಯ ಉತ್ತರಗಳನ್ನ ನೀಡಲಾಗ್ತಿದ್ದು, ವಿದ್ಯಾರ್ಥಿಗಳು OMR ಶೀಟ್ನಲ್ಲಿ ಉತ್ತರ ಗುರುತು ಮಾಡಿದ್ರೆ ಸಾಕು. ಪ್ರತಿ ವಿಷಯಕ್ಕೆ ಒಎಂಆರ್ ಶೀಟ್ನಲ್ಲಿ ಬಣ್ಣ ಬದಲು ಮಾಡಿದ್ದಾರೆ. ಗಣಿತಕ್ಕೆ ಪಿಂಕ್ ಕಲರ್, ವಿಜ್ಞಾನಕ್ಕೆ ಆರೆಂಜ್ ಕಲರ್, ಸಮಾಜ ವಿಜ್ಞಾನಕ್ಕೆ ಗ್ರೀನ್ ಕಲರ್ OMR ಶೀಟ್ ಇರಲಿದೆ. ಪರೀಕ್ಷೆಗೆ 3 ಗಂಟೆಗಳ ಅವಧಿ ನೀಡಲಾಗಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಇನ್ನು ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ಎಕ್ಸಾಂಗೆ ನೊಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bagalkot: ಎಸ್ಎಸ್ಎಲ್ಸಿ ಪರೀಕ್ಷೆಗೆ ಕ್ಷಣಗಣನೆ; ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯ ಅಜ್ಜಿ ಕಣ್ಣೀರು
Published On - 9:56 am, Mon, 19 July 21