Bagalkot: ಎಸ್ಎಸ್ಎಲ್​ಸಿ ಪರೀಕ್ಷೆಗೆ ಕ್ಷಣಗಣನೆ; ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯ ಅಜ್ಜಿ ಕಣ್ಣೀರು

Karnataka SSLC Exam 2021: ಮಹ್ಮದ್ ಕೈಪ್ ಸೌದಾಗರ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದೆ ಪರದಾಡುತ್ತಿದ್ದಾನೆ. ಮೊಮ್ಮಗನಿಗೆ ಪ್ರವೇಶ ಪತ್ರ ಸಿಗಲಿಲ್ಲ ಅಂತ ಆತನ ಅಜ್ಜಿ ಮಮತಾಜ್ ಕಣ್ಣೀರು ಹಾಕುತ್ತಿದ್ದಾರೆ. ನಾವು ಫಾರಂ ತುಂಬಲು ಬಂದಾಗ ಸರಿಯಾಗಿ ಶಾಲಾ ಸಿಬ್ಬಂದಿ ಸ್ಪಂದಿಸಲಿಲ್ಲ.

Bagalkot: ಎಸ್ಎಸ್ಎಲ್​ಸಿ ಪರೀಕ್ಷೆಗೆ ಕ್ಷಣಗಣನೆ; ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯ ಅಜ್ಜಿ ಕಣ್ಣೀರು
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿ ಹಾಗೂ ಆತನ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ

ಬಾಗಲಕೋಟೆ: ಇಂದು (ಜುಲೈ 19) ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೊರೊನಾ ನಡುವೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ರಾಜ್ಯದ ಹಲವು ಮಕ್ಕಳಿಗೆ ಹಾಲ್ ಟಿಕೇಟ್ ಸಿಕ್ಕಿಲ್ಲ ಅಂತ ಹೇಳಲಾಗುತ್ತಿತ್ತು. ಇದಕ್ಕೆ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ. ಹಾಲ್ ಟಿಕೆಟ್ ಇಲ್ಲದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯ ಅಜ್ಜಿ ಕಣ್ಣೀರು ಹಾಕಿರುವ ಘಟನೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಮಹ್ಮದ್ ಕೈಪ್ ಸೌದಾಗರ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದೆ ಪರದಾಡುತ್ತಿದ್ದಾನೆ. ಮೊಮ್ಮಗನಿಗೆ ಪ್ರವೇಶ ಪತ್ರ ಸಿಗಲಿಲ್ಲ ಅಂತ ಆತನ ಅಜ್ಜಿ ಮಮತಾಜ್ ಕಣ್ಣೀರು ಹಾಕುತ್ತಿದ್ದಾರೆ. ನಾವು ಫಾರಂ ತುಂಬಲು ಬಂದಾಗ ಸರಿಯಾಗಿ ಶಾಲಾ ಸಿಬ್ಬಂದಿ ಸ್ಪಂದಿಸಲಿಲ್ಲ. ಅಟೆಂಡೆನ್ಸ್ ಇಲ್ಲ ಅಂತ ವಾಪಸ್ ಕಳಿಸಿದರು. ಫಾರಂ ತುಂಬಲು ಬಂದಾಗ ಟಿಸಿ ತಗೊಂಡು ಹೋಗಿ ಎಂದು ಕಳಿಸಿದರು. ಎಲ್ಲ ದಾಖಲಾತಿ ಫೋಟೋ ತೆಗೆದುಕೊಂಡು ಬಂದರೂ ಪಡೆಯಲಿಲ್ಲ. ಈಗ ಏನು ಮಾಡೋದು ಅಂತ ಅಜ್ಜಿ ಮತ್ತು ಮೊಮ್ಮಗ ಪರೀಕ್ಷಾ ಕೇಂದ್ರದ ಬಳಿ ಕಣ್ಣೀರು ಹಾಕುತ್ತಿದ್ದಾರೆ.

ಮಹ್ಮದ್ ಕೈಪ್ ಬಾಗಲಕೋಟೆ ನಗರ ನಿವಾಸಿ. ತಾಯಿ ಇಲ್ಲದ ಮಗ. ಇವನನ್ನು ನಾನೇ ಸಾಕುತ್ತಿದ್ದೇನೆ. ಓದಿ ವಿದ್ಯಾವಂತನಾಗಿ ಮಾಡಬೇಕೆಂದು ಕಷ್ಟ ಪಡುತ್ತಿದ್ದೇನೆ. ಈಗ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಅಜ್ಜಿ ಕಣ್ಣೀರು ಹಾಕಿದ್ದಾರೆ. ಫಾರಂ ತುಂಬದಿದ್ದರೆ ಹಾಲ್ ಟಿಕೆಟ್ ಹೇಗೆ ಬರುತ್ತೆ ಅಂತ ವಿದ್ಯಾರ್ಥಿಯನ್ನು ಶಾಲಾ ಸಿಬ್ಬಂದಿ ವಾಪಸ್ ಕಳುಹಿಸಿದೆ.

ಇದನ್ನೂ ಓದಿ

SSLC Exam 2021: ನಾಳೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಕೊರೊನಾ ದೃಢ

SSLC Exam 2021: ಈಗಲೂ ಹಾಲ್​ ಟಿಕೆಟ್ ಸಿಗದ ವಿದ್ಯಾರ್ಥಿಗಳಿದ್ದರೆ ಬಿಇಒಗಳನ್ನು ಸಂಪರ್ಕಿಸಿ: ಸಚಿವ ಸುರೇಶ್ ಕುಮಾರ್