ರಾಜಧಾನಿಯಲ್ಲಿ ಮತ್ತೆ ಬ್ಲ್ಯಾಕ್ ಪಲ್ಸರ್ ಸದ್ದು.. ವಿಜಯನಗರದಲ್ಲಿ ವೃದ್ಧೆಯ ಸರ ಕಿತ್ತೊಯ್ದರು
Chain snatching in vijayanagar: ವಿಜಯನಗರ 2 ನೇ ಕ್ರಾಸ್ ನಲ್ಲಿ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು 72 ವರ್ಷದ ಇಂದಿರಮ್ಮ ಎನ್ನುವ ವೃದ್ದೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬ್ಲ್ಯಾಕ್ ಪಲ್ಸರ್ 220 ಸದ್ದು ಮಾಡಿದ್ದು, ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಸರಗಳ್ಳರು ವೃದ್ಧೆಯೊಬ್ಬರ ಸರ ಕದ್ದೊಯ್ದಿದ್ದಾರೆ.
ವಿಜಯನಗರ 2 ನೇ ಕ್ರಾಸ್ ನಲ್ಲಿ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು 72 ವರ್ಷದ ಇಂದಿರಮ್ಮ ಎನ್ನುವ ವೃದ್ದೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ. ಸುಮಾರು 35 ಗ್ರಾಂ ಚಿನ್ನದ ಸರವನ್ನ ಆರೋಪಿಗಳು ಕಿತ್ತೊಯ್ದಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಗಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್ ಆಪರೆಂಡಿ ಹೀಗಿತ್ತು! (Pulsar bike borne chain snatchers on prowl again in bengaluru chain snatching in vijayanagar)
Published On - 11:08 am, Mon, 19 July 21