ಬಿಎಸ್​ವೈ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಪ್ರವಾಸೋದ್ಯಮ ನಿಗಮಕ್ಕೆ: ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಕಾರಣವಾಗುತ್ತಾ?

ಸಚಿವ ಸಿ.ಪಿ. ಯೋಗೇಶ್ವರ್ ನಿರ್ವಹಣೆಯ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಬರುವ ಕೆಎಸ್​ಟಿಡಿಸಿಯ ಸಿಪಿವೈ ಇಲಾಖೆ ವ್ಯಾಪ್ತಿಯ ನಿಗಮಕ್ಕೆ ವ್ಯಾಪ್ತಿಯ ನಿಗಮಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತರನ್ನು ನೇಮಕ ಮಾಡಿದ್ದಾರೆ.

ಬಿಎಸ್​ವೈ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಪ್ರವಾಸೋದ್ಯಮ ನಿಗಮಕ್ಕೆ: ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಕಾರಣವಾಗುತ್ತಾ?
ಬಿ.ಎಸ್​.ಯಡಿಯೂರಪ್ಪ ಮತ್ತು ಕಾ.ಪು. ಸಿದ್ದಲಿಂಗಸ್ವಾಮಿ
TV9kannada Web Team

| Edited By: sadhu srinath

Jul 19, 2021 | 12:05 PM

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಾರಣವಾಗುತ್ತಾ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಕಾರಣ, ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದ ಶೃತಿ ಅವರ ನೇಮಕಾತಿಯನ್ನು ವಾಪಸ್ ಪಡೆದಿದ್ದು, ಆ ಸ್ಥಾನಕ್ಕೆ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿರುವುದೇ ಆಗಿದೆ. ಅಧ್ಯಕ್ಷ ಸ್ಥಾನಕ್ಕೆ ಸಿದ್ದಲಿಂಗಸ್ವಾಮಿ ಹೆಸರನ್ನು ಪಕ್ಷ ಶಿಫಾರಸು ಮಾಡಿಲ್ಲ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಅಧಿಕಾರ ಬಳಸಿ ತಮ್ಮ ಆಪ್ತನಿಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಪಕ್ಷದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಸಚಿವ ಸಿ.ಪಿ. ಯೋಗೇಶ್ವರ್ ನಿರ್ವಹಣೆಯ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಬರುವ ಕೆಎಸ್​ಟಿಡಿಸಿಯ ಸಿಪಿವೈ ಇಲಾಖೆ ವ್ಯಾಪ್ತಿಯ ನಿಗಮಕ್ಕೆ ವ್ಯಾಪ್ತಿಯ ನಿಗಮಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತರನ್ನು ನೇಮಕ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಅಧ್ಯಕ್ಷ ಸ್ಥಾನವನ್ನು ಸಿದ್ಧಲಿಂಗಸ್ವಾಮಿ ವಹಿಸಿಕೊಳ್ಳಲಿದ್ದಾರೆ. ನೇಮಕಾತಿ ವಾಪಸ್ ಪಡೆದ ವಿಚಾರವಾಗಿ ಇಂದು ಬೆಳಗ್ಗೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಶೃತಿ ಭೇಟಿ ಮಾಡಿದ್ದಾರೆ. ಒಟ್ಟಾರೆ ಪಕ್ಷದಿಂದ ಶಿಫಾರಸಾಗದೇ ಸಿದ್ದಲಿಂಗಸ್ವಾಮಿ ನೇಮಕಾತಿ ವಿಚಾರವಾಗಿ ಪಕ್ಷದ ವೇದಿಕೆಯಲ್ಲಿ ಇಂದು ಚರ್ಚೆಯಾಗುವ ಸಾಧ್ಯತೆ ಇದೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ನಿಗಮ‌ದ ಅಧ್ಯಕ್ಷರಾಗಿ ಕಾ.ಪು ಸಿದ್ದಲಿಂಗಯ್ಯ ಸ್ವಾಮಿ ಅಧಿಕಾರ ಸ್ವೀಕರಿಸಿದ್ದಾರೆ. ಹೂಗುಚ್ಛ ನೀಡುವ ಮೂಲಕ ನೂತನ ಅಧ್ಯಕ್ಷ ಕಾ.ಪು ಸಿದ್ದಲಿಂಗಯ್ಯ ಸ್ವಾಮಿ ಅವರನ್ನು ಎಮ್.ಡಿ.ವಿಜಯ್ ಶರ್ಮಾ ಬರಮಾಡಿಕೊಂಡಿದ್ದಾರೆ. 12 ಗಂಟೆಗೆ ನಿಗಮ ಅಧ್ಯಕ್ಷರ ಚೇರ್​ನಲ್ಲಿ ಕಾ.ಪು ಸಿದ್ಧಲಿಂಗಯ್ಯ ಸ್ವಾಮಿ ಕೂರುವ ಮೂಲಕ ಅಧಿಕಾರ ಸ್ವಿಕರಿಸಲಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರವಾಸ ಯಶಸ್ವಿ; ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ: ಸಿಎಂ ಯಡಿಯೂರಪ್ಪ ವಿಶ್ವಾಸ

ತಾನು ಯಡಿಯೂರಪ್ಪ ಪರ ಎಂದು ಘೋಷಿಸಿದ ಬಳಿಕ ಸಚಿವ ಯೋಗೇಶ್ವರ್ ತಮ್ಮ ಪ್ರವಾಸೋದ್ಯಮ ಇಲಾಖೆ ಕಾರ್ಯಗಳಲ್ಲಿ ಇಂದು ಫುಲ್​ ಬ್ಯುಸಿ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada