ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರಿನ ಶಾಲೆವೊಂದರ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ನಲ್ಲಿ ಕಾಂಡೋಮ್ (condom)ಇರುವುದು ಎಲ್ಲರನ್ನೂ ದಂಗು ಬಡಿಸಿತ್ತು. ಯಾವ ಕಾಲ ಬಂತು? ಈಗಿನ ಮಕ್ಕಳು ಕೆಟ್ಟೊದ್ರು ಎನ್ನುವ ಟೀಕೆಗಳು ವ್ಯಕ್ತವಾದ್ದವು. ಇದರ ಮಧ್ಯೆ ಮಕ್ಕಳಿಗೆ ಸೆಕ್ಸ್ ಎಜುಕೇಶನ್ ನೀಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲದರ ಮಧ್ಯೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಮಕ್ಕಳು ಕೆಟ್ಟ ಚಟಕ್ಕೆ ಬೀಳುತ್ತಿರುವ ಆತಂಕದ ಮಧ್ಯೆ ಹೊಸ ಕಾನೂನು ರೂಪಿಸಿದೆ. ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾದ ಕಾರಣ ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಕೊಡಬಾರದೆಂದು ಮೆಡಿಕಲ್ ಶಾಪ್ ಗಳಿಗೆ ಖಡಕ್ ಸೂಚನೆ ರವಾನಿಸಿದೆ.
ಇನ್ನು ಈ ಬಗ್ಗೆ ರಾಜ್ಯ ಔಷಧ ನಿಯಂತ್ರಕರಾದ ಬಿ ಟಿ ಖಾನಾಪುರೆ ಪ್ರತಿಕ್ರಿಯಿಸಿದ್ದು, ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆಗಳನ್ನು ಆನ್ ದಿ ಕೌಂಟರ್ ಕೊಡಬಾರದೆಂದು ರಿಸ್ಟ್ರಿಕ್ಟ್ ಮಾಡಲಾಗಿದೆ. ೧೮ ವರ್ಷದೊಳಗಿನ ಮಕ್ಕಳು ಇವುಗಳನ್ನು ಕೇಳಿದ್ದಲ್ಲಿ ನಿರಾಕರಿಸುವಂತೆ ತಿಳಿಸಲಾಗಿದೆ. ಈಗಾಗಲೇ ಎಲ್ಲಾ ಮೆಡಿಕಲ್ ಶಾಪ್ ಗಳಿಗೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ.. ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್ ಪ್ರಕಟಣ ಬೆನ್ನಲೆ ಇತಹ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶಾಲಾ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಜತೆ ಮಾತಾಡಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಮೂಲಕ ಅನೈತಿಕ ಚಟುವಟಿಕೆಗಳಿಂದ ಹಾಗೂ ಪಿಡುಗೆಯಿಂದ ಮಕ್ಕಳನ್ನ ದೂರವಿಡಲು ಈ ಮಹತ್ವದ ಕ್ರಮ ಜರುಗಿಸಲಾಗಿದೆ. ಹಾಗೂ ಈಗಾಗಲೆ ಎಲ್ಲ ಮೆಡಿಕಲ್ ಶಾಪ್ ಮಾಲೀಕರಿಗೆ ಸುತ್ತೋಲೆ ನೀಡಿ ಗಮನಕ್ಕೆ ತರಲು ಇಲಾಖೆ ಮುಂದಾಗಿದೆ.
ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
Published On - 7:58 pm, Thu, 19 January 23