ಬೆಂಗಳೂರು: ಕಾಂಗ್ರೆಸ್‌ನ ಲಸಿಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರಾಜ್ಯ ಸರ್ಕಾರದಿಂದ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಲಸಿಕೆಗಾಗಿ 100 ಕೋಟಿ ರೂಪಾಯಿ ನೀಡಲು ಕಾಂಗ್ರೆಸ್ ಮುಂದಾಗಿತ್ತು. ಶಾಸಕರ ಪ್ರದೇಶಾಭಿವೃದ್ಧಿ ಹಣ ನೀಡಲು ಕಾಂಗ್ರೆಸ್ ಮುಂದಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ, ಈಗ ಕಾಂಗ್ರೆಸ್‌ನ ಲಸಿಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಕೆ ಮಾಡಲಿದೆ. ಹೀಗಾಗಿ ಸರ್ಕಾರದಲ್ಲಿ ಸಂಪನ್ಮೂಲ ಕೊರತೆಯಾಗಿಲ್ಲ. ನೀವು ಸಹಾಯಧನ ಕೊಡಲು ಇಚ್ಛಿಸಿದರೆ ನೀಡಬಹುದು. ಸರ್ಕಾರ ನಿಗದಿಪಡಿಸಿದ ನಿಧಿಗೆ ಸಹಾಯಧನ ನೀಡಬಹುದು ಎಂದು ಸಿದ್ದರಾಮಯ್ಯಗೆ ಸರ್ಕಾರ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳ ಮೂಲಕವೂ ಸಹಾಯ ಮಾಡಬಹುದು. ಸರ್ಕಾರದ ನಿರ್ದಿಷ್ಟ ಯೋಜನೆಯ ಹಣವನ್ನು ಒಂದು ಪಕ್ಷದ ಹಣದೊಂದಿಗೆ ಹೊಂದಾಣಿಕೆ ಮಾಡುವುದು ಸೂಕ್ತವಲ್ಲ ಎಂದು ಯೋಜನೆ ಖಾತೆ ಸಚಿವ ನಾರಾಯಣ ಗೌಡ ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ, ಮಾಧ್ಯಮಗಳ ಸಲಹೆ ಕೇಂದ್ರ ಸ್ವೀಕರಿಸಲಿಲ್ಲ. ವರ್ಷದ ಹಿಂದೆಯೇ ನೀಡಿದ್ದ ಸಲಹೆಗಳನ್ನು ಕೇಂದ್ರ ಸ್ವೀಕರಿಸಲಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದಾರೆ. ಸ್ವೀಕರಿಸಿದ್ದರೆ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ಹಾಕಬಹುದಿತ್ತು. ಒಂದು ತಿಂಗಳಲ್ಲೇ 7 ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ. ಉಪಮುಖ್ಯಮಂತ್ರಿ ಸವದಿಯವರಿಗೂ ಮೋದಿ ಟ್ಯಾಕ್ಸ್ ಕಟ್ಟಲು ಆಗ್ತಿಲ್ಲ. ಅವರ ಕಾರಿಗೆ ಡಿಪೋದಲ್ಲಿ ಪೆಟ್ರೋಲ್ ತುಂಬಿಸುತ್ತಿದ್ದಾರೆ. ಅಂದರೆ ಡಿಸಿಎಂ ಸವದಿ ಅವರಿಗೂ ಪೆಟ್ರೋಲ್ ಬಿಸಿ ತಟ್ಟಿದೆ ಎಂದು ಸವದಿ ಉದಾಹರಣೆ ಕೊಟ್ಟ ರಿಜ್ವಾನ್ ಅರ್ಷದ್ ಕುಟುಕಿದ್ದಾರೆ.
ಇದನ್ನೂ ಓದಿ: ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ
ಸಂಕಷ್ಟ ಕಾಲದಲ್ಲಿ ಅಧಿಕಾರ ಲಾಲಸೆ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ