AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನಕ್ಕಾಗಿ 162 ಕೋಟಿ 50 ಲಕ್ಷ ರೂ. ಅನುದಾನ ಬಿಡುಗಡೆ

ಕೆಎಸ್ಆರ್​ಟಿಸಿ 10,176 ಲಕ್ಷ, ಬಿಎಂಟಿಸಿಗೆ 9,862 ಲಕ್ಷ, ವಾಯುವ್ಯ ಸಾರಿಗೆ ಸಂಸ್ಥೆಗೆ 6,642 ಲಕ್ಷ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 5,820 ಲಕ್ಷ ಬಿಡುಗಡೆಗೊಳಿಸಲಾಗಿದೆ. ಒಟ್ಟಾರೆ ನಾಲ್ಕೂ ನಿಗಮಕ್ಕೆ ಏಪ್ರಿಲ್ ಮೇ ತಿಂಗಳ ವೇತನಕ್ಕಾಗಿ 325 ಕೋಟಿ ಬಿಡುಗಡೆಗೊಳಿಸಲಾಗಿದೆ. ಹಾಗೇ ಜೂನ್ ತಿಂಗಳ ಅರ್ಧದಷ್ಟು ಸಂಬಳಕ್ಕಾಗಿ 16250.00 ಲಕ್ಷ ಬಿಡುಗಡೆ ಮಾಡಲಾಗಿದೆ.

ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನಕ್ಕಾಗಿ 162 ಕೋಟಿ 50 ಲಕ್ಷ ರೂ. ಅನುದಾನ ಬಿಡುಗಡೆ
ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ
TV9 Web
| Updated By: guruganesh bhat|

Updated on: Jul 08, 2021 | 11:19 PM

Share

ಬೆಂಗಳೂರು: ಸಾರಿಗೆ ಸಿಬ್ಬಂದಿ ವೇತನಕ್ಕಾಗಿ 162 ಕೋಟಿ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ನಾಲ್ಕೂ ನಿಗಮಗಳಿಗೆ ಹಣ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಈ ಮೂಲಕ ಸಾರಿಗೆ ನಿಗಮಗಳ ಕಷ್ಟಕ್ಕೆ ರಾಜ್ಯ ಸರ್ಕಾರ ಧಾವಿಸಿದಂತಾಗಿದೆ. ಏಪ್ರಿಲ್, ಮೇ ತಿಂಗಳು ಹಾಗೂ ಜೂನ್ ಅರ್ಧ ತಿಂಗಳ ವೇತನಕ್ಕಾಗಿ ಹಣ ಬಿಡುಗಡೆಗೊಳಿಸಲಾಗಿದೆ.

ಕೆಎಸ್ಆರ್​ಟಿಸಿ 10,176 ಲಕ್ಷ, ಬಿಎಂಟಿಸಿಗೆ 9,862 ಲಕ್ಷ, ವಾಯುವ್ಯ ಸಾರಿಗೆ ಸಂಸ್ಥೆಗೆ 6,642 ಲಕ್ಷ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 5,820 ಲಕ್ಷ ಬಿಡುಗಡೆಗೊಳಿಸಲಾಗಿದೆ. ಒಟ್ಟಾರೆ ನಾಲ್ಕೂ ನಿಗಮಕ್ಕೆ ಏಪ್ರಿಲ್ ಮೇ ತಿಂಗಳ ವೇತನಕ್ಕಾಗಿ 325 ಕೋಟಿ ಬಿಡುಗಡೆಗೊಳಿಸಲಾಗಿದೆ. ಹಾಗೇ ಜೂನ್ ತಿಂಗಳ ಅರ್ಧದಷ್ಟು ಸಂಬಳಕ್ಕಾಗಿ 16250.00 ಲಕ್ಷ ಬಿಡುಗಡೆ ಮಾಡಲಾಗಿದೆ.

ಜೂನ್ ತಿಂಗಳ ವೇತನಕ್ಕಾಗಿ ನಿಗಮಗಳು 325 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದವು. ಸದ್ಯ ಕೊವಿಡ್ ಹಿನ್ನಲೆ ಆರ್ಥಿಕ ಸಂಕಷ್ಟ ನೆಪವೊಡ್ಡಿ 162 ಕೋಟಿ 50 ಲಕ್ಷ ಮಾತ್ರ ಬಿಡುಗಡೆಗೊಳಿಸಲಾಗಿದೆ. ಈ ಹಣದಲ್ಲಿ ಸಿಬ್ಬಂದಿಯ ವೇತನವನ್ನು ಮಾತ್ರ ನೀಡಬೇಕು. ಇತರೆ ಆರ್ಥಿಕ ಸೌಲಭ್ಯ, ಹಾಗೂ ಭತ್ಯೆಗಳನ್ನು ನೀಡಕೂಡದು ಎಂದು ಎಲ್ಲಾ ನಿಗಮಕ್ಕೂ ಸರ್ಕಾರದಿಂದ ಆದೇಶ ರವಾನಿಸಲಾಗಿದೆ.

NEKRTC ಇನ್ನು ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಗೆ ಮರುನಾಮಕರಣ ಮಾಡಿದ ಲಕ್ಷ್ಮಣ ಸವದಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಅನ್ವಯವಾಗಲಿದ್ದು, ಇನ್ನುಮುಂದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (North Eastern Karnataka Road Transport Corporation) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಕರೆಯುವುದಾಗಿ ಮಾಹಿತಿ ನೀಡಿದ್ದಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾದ ನಂತರ ಈಶಾನ್ಯ ಸಾರಿಗೆಗೂ ಈ ರೀತಿ ಮರು ನಾಮಕರಣ ಮಾಡಬೇಕೆಂದು ಬಹುದಿನಗಳ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಎಂದು ಈಶಾನ್ಯ ಸಾರಿಗೆ ನಿಗಮಕ್ಕೆ ಮರುನಾಮಕರಣ ಮಾಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಮಹಿಳೆಯರಿಗಾಗಿ ವಿನೂತನ ಬಸ್ ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ, ಮಹಿಳೆಯರಿಗೆ ಬಸ್​ನಲ್ಲಿಯೇ ಶೌಚಾಲಯ, ಸ್ನಾನಗೃಹ, ಹಾಲುಣಿಸಲು ಸೌಲಭ್ಯ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ ಮಾಡಿ ಮಾದರಿಯಾಗಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಯಾದಗಿರಿ ವರ್ಕ್​ಶಾಪ್​ನಲ್ಲಿ ಮಹಿಳೆಯರಿಗಾಗಿಯೇ ವಿನೂತನ ಬಸ್ ಅನ್ನು ಸಿದ್ಧಗೊಳಿಸಲಾಗಿದೆ. ಸಂಸ್ಥೆಯಲ್ಲಿ ನಿರುಪಯುಕ್ತವಾಗಿದ್ದ ಬಸ್ ಅನ್ನು ಮಹಿಳಾ ಶೌಚಾಲಯದ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ. ಸಾವಿರಾರು ಕಿಲೋ ಮೀಟರ್ ಓಡಿದ ನಂತರ, ಕೆಲ ಬಸ್​ಗಳನ್ನು ಓಡಿಸಲು ಆಗುವುದಿಲ್ಲ. ಅಂತಹ ಬಸ್​ವೊಂದನ್ನು ಪಡೆದು, ಅದನ್ನು ಬದಲಾಯಿಸಿ ಮಹಿಳಾ ಬಸ್ ಅನ್ನು ಸಿದ್ಧಗೊಳಿಸಿದ್ದಾರೆ. ಬಸ್​ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸರಿಸುಮಾರು ಎರಡು ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಸಂಸ್ಥೆಯ ವರ್ಕ್​ಶಾಪ್ ಸಿಬ್ಬಂದಿ ನಿರಂತರ ಶ್ರಮ ವಹಿಸಿ, ನಿರುಪಯುಕ್ತ ಬಸ್​ ಅನ್ನು ಉಪಯುಕ್ತ ಬಸ್ ಆಗಿ ಮಾಡಿದ್ದಾರೆ.

ಇದನ್ನೂ ಓದಿ: 

Big News: ರೈತರಿಗೆ ಎಪಿಎಂಸಿ ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, 23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

CoWin: ಕೊವಿಡ್ ಲಸಿಕೆ ಬುಕಿಂಗ್ ಪೋರ್ಟಲ್​ ಕೊವಿನ್​ನಲ್ಲಿ ಏನಿದೆ?

(Karnataka Transport crew salary 162 crore 50 lakh for Release of grants)