ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ವಿಧಾನಸೌಧದ ಸಮೀಪವಿರುವ ಮೌರ್ಯ ಸರ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ನಡೆದ ಮುಷ್ಕರದ ವೇಳೆ ಸಿಬ್ಬಂದಿಗಳ ವಜಾ ಮತ್ತು ಅಮಾನತು ಆದವರ ಮರು ನೇಮಕಕ್ಕೆ ಆಗ್ರಹಿಸಿ, ಸಾರಿಗೆ ನೌಕರರು ಈ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ವೇತನ ನೀಡಬೇಕು ಎಂಬುದೂ ನೌಕರರ ಪ್ರಮುಖ ಒತ್ತಾಯವಾಗಿದೆ.
KSRTC ನಿಗಮಗಳ ನೌಕರರ ಫೆಡರೇಷನ್, ಸಿಐಟಿಯು ಸೇರಿದಂತೆ ನಾಲ್ಕು ನಿಗಮದ ಸಾರಿಗೆ ಮುಖಂಡರು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ ತಿಂಗಳು ಮರು ನೇಮಕ ಮಾಡೋದಾಗಿ ಸಚಿವರು ಹೇಳಿದ ಬಳಿಕವೂ ಬಿಎಂಟಿಸಿ 57 ನೌಕರರನ್ನ ವಜಾ ಮಾಡಿದೆ. ಮುಷ್ಕರದ ವೇಳೆ ಕೆಲಸ ಕಳೆದುಕೊಂಡಿರುವ 2200 ನೌಕರರ ಮರು ನೇಮಕ ಕೂಡಲೇ ಆಗಬೇಕು. ಆರ್ಥಿಕ ಸಮಸ್ಯೆಯಿಂದ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾರಿಗೆ ನೌಕರರ ಸಮಸ್ಯೆಯನ್ನ ಕೂಡಲೆ ಬಗೆಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!
ನಾಳೆ ನಮ್ಮ ಆಟ ತೋರಿಸ್ತೀನಿ ಅಂದವ್ರೆ, ಏನು ದುಡ್ಡು ಹಂಚೋ ಆಟನಾ? | HDK | Tv9kannada
(karnataka transport employees on indefinite strike in bangalore )
Published On - 12:41 pm, Wed, 27 October 21