ನಿವೃತ್ತಿ ಅಂಚಿನಲ್ಲಿದ್ದರೂ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರು! ಮುಷ್ಕರದ ಮಧ್ಯೆ ಕರ್ತವ್ಯ ನಿಷ್ಠೆ ಮೆರೆದ ಇಬ್ಬರಿಗೆ ಸನ್ಮಾನ

ನಿವೃತ್ತಿ ಅಂಚಿನಲ್ಲಿದ್ದರೂ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರು! ಮುಷ್ಕರದ ಮಧ್ಯೆ ಕರ್ತವ್ಯ ನಿಷ್ಠೆ ಮೆರೆದ ಇಬ್ಬರಿಗೆ ಸನ್ಮಾನ
ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಸನ್ಮಾನ

ನಿವೃತ್ತಿ ಅಂಚಿನಲ್ಲಿರುವ ಹಾಗೂ ಅಪಘಾತಕ್ಕೀಡಾಗಿ ಹುದ್ದೆ ಬದಲಾವಣೆ ಮಾಡಿಕೊಂಡಿದ್ದ ಇಬ್ಬರು ಸಿಬ್ಬಂದಿ ಹೊಸಪೇಟೆ ಸಾರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಡಿ ಮೂರಮಟ್ಟಿ, ಉಮಾದೇವಿ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Ayesha Banu

|

Apr 08, 2021 | 12:40 PM

ಬಳ್ಳಾರಿ: ವೇತನ ಹೆಚ್ಚಳ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಕರ್ತವ್ಯ ನಿಷ್ಠೆ ತೋರಿದ ಇಬ್ಬರು ಸಾರಿಗೆ ಸಿಬ್ಬಂದಿಗೆ ಸನ್ಮಾನ ಮಾಡಲಾಗಿದೆ. ನಿವೃತ್ತಿ ಅಂಚಿನಲ್ಲಿರುವ ಹಾಗೂ ಅಪಘಾತಕ್ಕೀಡಾಗಿ ಹುದ್ದೆ ಬದಲಾವಣೆ ಮಾಡಿಕೊಂಡಿದ್ದ ಇಬ್ಬರು ಸಿಬ್ಬಂದಿ ಹೊಸಪೇಟೆ ಸಾರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಡಿ ಮೂರಮಟ್ಟಿ, ಉಮಾದೇವಿ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಕರ್ತವ್ಯ ನಿಷ್ಠೆ ತೋರಿದ ಇಬ್ಬರು ಸಾರಿಗೆ ನೌಕರರಿಗೆ ಹೊಸಪೇಟೆ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ಸನ್ಮಾನ ಮಾಡಿದ್ದಾರೆ. ಇನ್ನು ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಕೆಎಸ್​ಆರ್​ಟಿಸಿ ಹೊಸ ಪ್ಲ್ಯಾನ್ ಮಾಡಿದ್ದು ಸಸ್ಪೆಂಡ್ ಆಗಿದ್ದ ಸಿಬ್ಬಂದಿಗೆ ಕರ್ತವ್ಯಕ್ಕೆ ಬರಲು ಸೂಚನೆ ನೀಡಿದೆ.

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇನ್ನು ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಹೊಸ ಪ್ಲ್ಯಾನ್ ಮಾಡಲಾಗಿದ್ದು ಸಸ್ಪೆಂಡ್ ಆಗಿದ್ದ ಸಿಬ್ಬಂದಿಗೆ ಕರ್ತವ್ಯಕ್ಕೆ ಬರಲು ಸೂಚನೆ ನೀಡಲಾಗಿದೆ. ಸಾರಿಗೆ ಇಲಾಖೆ ಸಸ್ಪೆಂಡ್ ಆಗಿದ್ದ ಸಿಬ್ಬಂದಿಗೆ ಕೆಲಸ ನೀಡುವ ಆಮಿಷವೊಡ್ಡಿ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸಿದೆ. ಇನ್ನು ಏಪ್ರಿಲ್ 7ರಂದು ಸಂಚಾರವಾದ ಎರಡು ಕೆಎಸ್​ಆರ್​ಟಿಸಿ ಬಸ್​ಗಳನ್ನು ಸಸ್ಪೆಂಡ್ ಆಗಿದ್ದ ಚಾಲಕರಿಂದಲೇ ಓಡಿಸಲಾಗಿತ್ತು.

ಇನ್ನು ಸಾರಿಗೆ ಮುಷ್ಕರದ ನಡುವೆ ಕೆಲವು ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲ ಬಿಎಂಟಿಸಿ ಬಸ್ ಸಂಚಾರ ಕೈಗೊಂಡಿದ್ದು ಇದಕ್ಕೆ ಪೊಲೀಸ್ ಕಾವಲಿಗೆ ನಿಂತಿದೆ. ಸಾರಿಗೆ ನೌಕರರ ಮುಷ್ಕರ ಬಂಬಲಿಸದೆ ಕೆಲಸಕ್ಕೆ ಕೆಲ ನೌಕರರು ಹಾಜರಾಗಿದ್ದಾರೆ. ಬಸ್‌ಗಳಿಗೆ ಎಸ್ಕಾರ್ಟ್ ಭದ್ರತೆ ನೀಡಿದ ಸಾರಿಗೆ ಇಲಾಖೆ.

ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಹೂ ನೀಡಿ ಸ್ವಾಗತ ಮುಷ್ಕರದ ನಡುವೆಯೂ ಕೆಲಸಕ್ಕೆ ಬಂದ ಚಾಲಕ ಮತ್ತು ನಿರ್ವಾಹಕರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಗುಲಾಬಿ ಹೂ ನೀಡಿ ಕೆಲಸಕ್ಕೆ ಕಳಸಿದ ಪ್ರಸಂಗ ಕೊಪ್ಪಳದಲ್ಲಿ ನಡೆದಿದೆ. ವಿಭಾಗೀಯ ನಿಯಂತ್ರಣ ಅಧಿಕಾರಿ.ಎ.ಎಚ್.ಮುಲ್ಲಾ ಚಾಲಕ ನಿರ್ವಾಹಕರಿಗೆ ಗುಲಾಬಿ ಹೂ ನೀಡಿದ್ದು ಕೊಪ್ಪಳದಿಂದ ರಾಯಚೂರಿಗೆ ಬಸ್ ಸಂಚಾರ ಆರಂಭವಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 3 ಬಸ್​ಗಳು ಸಂಚಾರ ನಡೆಸಿವೆ.

Karnataka transport strike employees return

ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಹೂ ನೀಡಿ ಸ್ವಾಗತ

ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್​ ಸಂಚಾರ

Follow us on

Related Stories

Most Read Stories

Click on your DTH Provider to Add TV9 Kannada