Karnataka Unlock 3.0: ದರ್ಶನಕ್ಕೆ ಸಿದ್ಧವಾದ ದೇವಾಲಯಗಳು.. ದೇವರ ಕಾಣಲು ಇಂದಿನಿಂದ ಭಕ್ತರಿಗೆ ಅವಕಾಶ

ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಸಿದ್ಧತೆ ನಡೆದಿದ್ದು ನಿನ್ನೆಯೇ ಸ್ಯಾನಿಟೈಸ್ ಮಾಡಿ ದೇವಾಲಯ ಶುಚಿಗೊಳಿಸಲಾಗಿದೆ.

Karnataka Unlock 3.0: ದರ್ಶನಕ್ಕೆ ಸಿದ್ಧವಾದ ದೇವಾಲಯಗಳು.. ದೇವರ ಕಾಣಲು ಇಂದಿನಿಂದ ಭಕ್ತರಿಗೆ ಅವಕಾಶ
ದರ್ಶನಕ್ಕೆ ಸಿದ್ಧವಾದ ದೇವಾಲಯಗಳು
Follow us
TV9 Web
| Updated By: ಆಯೇಷಾ ಬಾನು

Updated on: Jul 05, 2021 | 8:26 AM

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಸದ್ಯ ಕೊರೊನಾ ನಿಯಂತ್ರಣದ ಬಳಿಕ ಮತ್ತೆ ಕರುನಾಡು ಅನ್ಲಾಕ್ ಆಗಿದೆ. ಅನ್ಲಾಕ್ 3.0ನಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯದ ಎರಡು ಜಿಲ್ಲೆಗಳನ್ನು ಹೊರೆತು ಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಅನ್ಲಾಕ್ ಘೋಷಿಸಿದ್ದಾರೆ. ಸದ್ಯ ಇಂದಿನಿಂದ ಅನ್ಲಾಕ್ 3.0 ಜಾರಿಯಾಗಲಿದ್ದು ಲಾಕ್ಡೌನ್ ವೇಳೆ ಮುಚ್ಚಿದ್ದ ದೇವಾಲಯಗಳು ತೆರೆಯಲಿವೆ. ದೇವರ ದರ್ಶನವಿಲ್ಲದೆ ನೊಂದಿದ್ದ ಭಕ್ತರಿಗೆ ದರುಶನ ಭಾಗ್ಯ ಸಿಗಲಿದೆ.

ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಸಿದ್ಧತೆ ನಡೆದಿದ್ದು ನಿನ್ನೆಯೇ ಸ್ಯಾನಿಟೈಸ್ ಮಾಡಿ ದೇವಾಲಯ ಶುಚಿಗೊಳಿಸಲಾಗಿದೆ. ವಾರದ ಎಲ್ಲಾ ದಿನವೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ 8ಗಂಟೆವರೆಗೆ ಕೊರೊನಾ ಮಾರ್ಗಸೂಚಿ ಪಾಲಿಸುವ ಮೂಲಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಆದ್ರೆ, ದೇವಸ್ಥಾನದಲ್ಲಿ ಜನರಿಗೆ ಪ್ರಸಾದ ಹಂಚಿಕೆ, ಪೂಜೆಗೆ ಅವಕಾಶ ವಿಲ್ಲ.

ದರ್ಶನಕ್ಕೆ ಸಿದ್ಧವಾದ ದೇಗುಲಗಳು ಬೆಂಗಳೂರಿನ ಬನಶಂಕರಿ ದೇವಸ್ಥಾನ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ, ಮೆಜೆಸ್ಟಿಕ್ ನ ಅಣ್ಣಮ್ಮ ದೇವಿ ದೇವಸ್ಥಾನ, ಚಿಕ್ಕಬಳ್ಳಾಪುರದ ಐತಿಹಾಸ ಪ್ರಸಿದ್ದ ಶ್ರೀಭೋಗನಂದೀಶ್ವರ ದೇವಸ್ಥಾನ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಚ್ಚಂಗಿದುರ್ಗದ ಗುಡ್ಡದ ಮೇಲಿನ ಉಚ್ಚಂಗೆಮ್ಮ, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ಮಂಡ್ಯದ ನಿಮಿಷಾಂಭ ದೇವಾಲಯ, ಕಲಬುರಗಿಯ ಶರಣ ಬಸವೇಶ್ವರ ದೇಗುಲ, ಬೀದರ್ನ ಪಾಪನಾಶ ದೇವಸ್ಥಾನ, ಕೋಟೆನಾಡು ಚಿತ್ರದುರ್ಗದ ನೀಲಕಂಠೇಶ್ವರ ದೇಗುಲ, ಶಿವಮೊಗ್ಗದ ಪುರಾಣ ಪ್ರಸಿದ್ಧ ಕೋಟೆ ಭೀಮೇಶ್ವರ್ ಮತ್ತು ರಾಮೇಶ್ವರ ದೇವಸ್ಥಾನ, ದಾವಣಗೆರೆ ನಗರ ದೇವತೆ ದುರ್ಗಾಂಭಿಕಾ ದೇವಿ ದೇವಸ್ಥಾನ, ಬಾಗಲಕೋಟೆ ಬನಶಂಕರಿ ದೇಗುಲ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಇಂದಿನಿಂದ ಓಪನ್ ಆಗಲಿವೆ.

ಉಡುಪಿ, ಸವದತ್ತಿ ದೇವಸ್ಥಾನಗಳಿಗಿಲ್ಲ ದರ್ಶನ ಭಾಗ್ಯ ಸರ್ಕಾರ ಎಲ್ಲಾ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಿದೆ. ಆದ್ರೆ ಉಡುಪಿಯ ಶ್ರೀ ಕೃಷ್ಣಮಠ ಮತ್ತು ಸವದತ್ತಿ ಯಲ್ಲಮ್ಮ ದೇವಸ್ಥಾನ, ಇಂಚಲ ಮಾಯಕ್ಕ ದೇವಸ್ಥಾನಗಳನ್ನು ತೆಗೆಯಲು ಅನುಮತಿ ನೀಡಿಲ್ಲ. ಹೊರ ರಾಜ್ಯಗಳಿಂದ ಭಕ್ತರು ದೇವಸ್ಥಾನಕ್ಕೆ ಬರುವುದನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಒಂದು ವಾರ ಈ ದೇವಸ್ಥಾನಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಿದೆ. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದೆಲ್ಲ ಭಕ್ತರು ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಒಂದು ವಾರ ದೇವಸ್ಥಾನ ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Unlock 3.0: ಅನ್ಲಾಕ್ 3.O ಜಾರಿ, ಇಂದಿನಿಂದ ಕರುನಾಡು ಕಂಪ್ಲೀಟ್ ಓಪನ್