ಕರುನಾಡು ಕಂಪ್ಲೀಟ್ ಓಪನ್ ಆದ್ರೂ ಈ 2 ಜಿಲ್ಲೆಗಳಿಗಿಲ್ಲ ರಿಲೀಫ್.. ಈ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರಿಕೆ
ಕರುನಾಡು ಇಂದಿನಿಂದ ಕಂಪ್ಲೀಟ್ ಅನ್‌ಲಾಕ್ ಆಗಿದೆ. 2ನೇ ಅಲೆಗೆ ಬಿದ್ದಿದ್ದ ಬೀಗ್ ಸಂಪೂರ್ಣವಾಗಿ ಓಪನ್ ಆಗಿದೆ. ಹೀಗೆ ಕುರುನಾಡಿನ ಲಾಕ್ ಕಂಪ್ಲೀಟ್ ಓಪನ್ ಆದ್ರೂ ಆ ಎರಡು ಜಿಲ್ಲೆಯ ಜನರು ಖುಷಿಪಡೋ ಹಾಗಿಲ್ಲ. ಅಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ. ಹಾಗಿದ್ರೆ ಆ 2 ಜಿಲ್ಲೆಗಳು ಯಾವುವು? ಅಲ್ಲಿ ಲಾಕ್‌ಡೌನ್ ಹೇಗಿರುತ್ತೆ?
ಬೆಂಗಳೂರು: ಕರುನಾಡು ಇಂದಿನಿಂದ ಕಂಪ್ಲೀಟ್ ಅನ್‌ಲಾಕ್ ಆಗಿದೆ. ಆದ್ರೆ ಈ ಖುಷಿ ಹಾಸನ ಮತ್ತು ಕೂಡಗು ಜಿಲ್ಲೆಗಳಿಗೆ ಮಾತ್ರ ಇಲ್ಲ. ಈ ಎರಡು ಜಿಲ್ಲೆಗಳಲ್ಲಿ ಲಾಕ್‌ಡೌನ್ ಕಂಟಿನ್ಯೂ ಆಗಲಿದೆ. 29 ಜಿಲ್ಲೆಗಳಿಗೆ ಒಂದು ಕಾನೂನಾದ್ರೆ, ಕೊರೊನಾ ಹೆಚ್ಚಿರುವ 2ಜಿಲ್ಲೆಗಳಿಗೆ ಬೇರೆ ಕಟ್ಟುಪಾಡು ಇರಲಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಿ ಜನಜೀವನ ನಾರ್ಮಲ್ ಆಗ್ತಿದೆ. ಹೀಗಾಗಿ ಇಂದಿನಿಂದ ಕರುನಾಡನ್ನ ಕಂಪ್ಲೀಟ್ ಅನ್‌ಲಾಕ್ ಮಾಡಲಾಗುತ್ತಿದೆ. ಆದರೆ ಕೊಡಗು ಮತ್ತು ಹಾಸನ ಜಿಲ್ಲಾಡಳಿತ ಮಾತ್ರ ಅನ್ಲಾಕ್ಗೆ ಒಪ್ಪಿಲ್ಲ. ಪಾಸಿಟಿವಿಟಿ ರೇಟ್ ಶೇ 5ಕ್ಕಿಂತ ಹೆಚ್ಚಿರುವುದರಿಂದ ಕಂಪ್ಲೀಟ್ ಅನ್‌ಲಾಕ್ ಮಾಡದೆ ಲಾಕ್‌ಡೌನ್‌ನಲ್ಲಿ ಕೆಲ ರಿಯಾಯಿಗಳನ್ನ ಮಾತ್ರ ಘೋಷಿಸಿದೆ.
ಕೊಡಗು ಜಿಲ್ಲೆಯಲ್ಲಿ ಟಫ್ ರೂಲ್ಸ್ ಜಾರಿ ಕೊಡಗಿನಲ್ಲಿ ಪಾಸಿಟಿವಿಟಿ ರೇಟ್ ಕಮ್ಮಿಯಾಗುತ್ತಿಲ್ಲ. ಹೀಗಾಗಿ ಕಂಪ್ಲೀಟ್ ಅನ್ ಲಾಕ್ ಮಾಡಿದ್ರೆ ಜನರ ಓಡಾಟ ಹೆಚ್ಚಾಗುತ್ತೆ. ಪ್ರವಾಸಿಗರು ಜಿಲ್ಲೆಗೆ ದಾಂಗುಡಿ ಇಡುತ್ತಾರೆ. ಹೀಗಾಗಿ ಕೂಡಗಿನಲ್ಲಿ ಟಫ್ ರೂಲ್ಸ್ ಜಾರಿಗೆ ತರಲಾಗಿದೆ.
ಕೊಡಗಿಗೆ ಇಲ್ಲ ರಿಲೀಫ್ ಕೊಡಗಿನಲ್ಲಿ 5 ದಿನ ಅಂದ್ರೆ ಸೋಮವಾರದಿಂದ ಶುಕ್ರವಾರದವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಹೋಟೆಲ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳಲ್ಲಿ ಮಧ್ಯಾಹ್ನ 2 ಗಂಟೆ ತನಕ ಪಾರ್ಸೆಲ್‌ಗೆ ಅವಕಾಶ ನೀಡಿದ್ರೆ, ಹೋಟೆಲ್‌ಗಳಲ್ಲಿ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಶನಿವಾರ, ಭಾನುವಾರ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇರಲಿದ್ದು, ಅನಗತ್ಯ ಓಡಾಡೋ ಜನರಿಗೆ ದಂಡ ಬೀಳಲಿದೆ.
ಹಾಸನ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್‌ಡೌನ್ ಕೂಡಗಿನಂತೆ ಹಾಸನದಲ್ಲೂ ಮತ್ತೊಂದು ವಾರ ಅಂದ್ರೆ ಜುಲೈ 12 ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಿ ಡಿಸಿ ಆರ್, ಗಿರೀಶ್ ಆದೇಶ ಹೊರಡಿಸಿದ್ದಾರೆ.
ಹಾಸನದಲ್ಲಿ ಲಾಕ್‌ಡೌನ್ ವಿಸ್ತರಣೆ ಹಾಸನದಲ್ಲಿ ವಾರದಲ್ಲಿ 3 ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಉಳಿದಂತೆ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಧಾರ್ಮಿಕ ಕೇಂದ್ರ ತೆರೆಯದಿರಲು ಜಿಲ್ಲಾಡಳಿತ ನಿರ್ಧಾರ ಮಾಡಲಾಗಿದೆ. ಮದುವೆಗಳಲ್ಲಿ 40 ಜನ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಒಟ್ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳೂ ಕಂಪ್ಲೀಟ್ ಅನ್‌ಲಾಕ್ ಆದ್ರೂ ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ರಿಲೀಫ್ ಸಿಕ್ಕಿಲ್ಲ. ಆದಷ್ಟು ಬೇಗ ಈ ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ಬೀಗನೂ ಓಪನ್ ಆಗಲಿದೆ.
ಇದನ್ನೂ ಓದಿ: Karnataka Unlock 3.0: ಅನ್ಲಾಕ್ 3.O ಜಾರಿ, ಇಂದಿನಿಂದ ಕರುನಾಡು ಕಂಪ್ಲೀಟ್ ಓಪನ್