ವಕ್ಫ್​ ಬೋರ್ಡ್​ ವಿವಾದ: ಕರ್ನಾಟಕದಾದ್ಯಂತ ಬಿಜೆಪಿ ಪ್ರತಿಭಟನೆ, ರಾಜ್ಯ ಸರ್ಕಾರ ಆದೇಶ ಹಿಂಪಡೆದರೂ ಪಟ್ಟು ಬಿಡದ ಕೇಸರಿ ಪಡೆ

| Updated By: Ganapathi Sharma

Updated on: Nov 04, 2024 | 2:47 PM

ರೈತರಿಗೆ ವಕ್ಫ್ ನೋಟಿಸ್ ಮತ್ತು ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಪ್ರತಿಭಟನೆ ಜೋರಾಗಿದೆ. ಪ್ರತಿಪಕ್ಷ ನಾಯಕರ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖ ನಾಯಕರು, ಕಾರ್ಯಕರ್ತರು ರಾಜಧಾನಿ ಬೆಂಗಳೂರಿನಿಂದ ತೊಡಗಿ ಸ್ಥಳೀಯ ಮಟ್ಟದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ವಕ್ಫ್​ ಬೋರ್ಡ್​ ವಿವಾದ: ಕರ್ನಾಟಕದಾದ್ಯಂತ ಬಿಜೆಪಿ ಪ್ರತಿಭಟನೆ, ರಾಜ್ಯ ಸರ್ಕಾರ ಆದೇಶ ಹಿಂಪಡೆದರೂ ಪಟ್ಟು ಬಿಡದ ಕೇಸರಿ ಪಡೆ
ವಕ್ಫ್​ ಬೋರ್ಡ್​ ವಿವಾದ: ಕರ್ನಾಟಕದಾದ್ಯಂತ ಬಿಜೆಪಿ ಪ್ರತಿಭಟನೆ
Follow us on

ಬೆಂಗಳೂರು, ನವೆಂಬರ್ 4: ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯ ಕಾವು ಜೋರಾಗಿದೆ. ಸೋಮವಾರ ಬೀದಿಗಿಳಿದ ಬಿಜೆಪಿ ನಾಯಕರು ತಂಡ ತಂಡವಾಗಿ ಪ್ರತಿಭಟನೆ ನಡೆಸುವ ಮೂಲಕ ಸಮರ ಸಾರಿದ್ದಾರೆ. ಉಪಚುನಾವಣೆ​ ಹೊತ್ತಲ್ಲೇ ದೊಡ್ಡ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಚುನಾವಣಾ ಅಖಾಡದಿಂದಲೇ ರೈತರ ಪರ ರಣಕಹಳೆ ಮೊಳಗಿಸಿದೆ.

ಬೆಂಗಳೂರಿನ ಕೆ.ಆರ್​.ಪುರಂನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್​ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನಿರತರು ‘ಲ್ಯಾಂಡ್​ ಜಿಹಾದ್ ಮಾಡುತ್ತಿರುವ ಸರ್ಕಾರ’ ಎಂದು ಘೋಷಣೆ ಕೂಗಿದರು.

ರಾಜ್ಯದಲ್ಲಿರುವ ತುಘಲಕ್ ಸರ್ಕಾರ, ಲ್ಯಾಂಡ್​ ಜಿಹಾದ್​ ಹೆಸರಲ್ಲಿ ರೈತರನ್ನ ಕನ್ವರ್ಟ್​ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ವಕ್ಫ್​ ನೋಟಿಸ್​ ಖಂಡಿಸಿ, ಮೈಸೂರು, ಮಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಯಿತು. ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ‘ಭ್ರಷ್ಟ ಸಿದ್ರಾಮುಲ್ಲಖಾನ್’​ ಎಂದು ಘೊಷಣೆ ಕೂಗಿದರು.

ಸಂಸದ ಬೊಮ್ಮಾಯಿ ಯುಟರ್ನ್​ ಮಾತಿಗೆ ಸಿಎಂ ಕೌಂಟರ್

ಏತನ್ಮಧ್ಯೆ, ಸರ್ಕಾರದಿಂದ ಯೂಟರ್ನ್​ ಎಂಬ ಬೊಮ್ಮಾಯಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟು, ರಾಜಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದರು.

ಸಿದ್ದರಾಮಯ್ಯ ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂದು ಭಾನುವಾರ ಬಿಜೆಪಿ ನಾಯಕ ಪ್ರತಾಪ್​ ಸಿಂಹ ಹರಿಹಾಯ್ದಿದ್ದರು. ಇದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಮಹಾನ್​ ಕೋಮುವಾದಿ ಎಂದರು.

ಕಾಂಗ್ರೆಸ್ ತಿರುಗೇಟು

ಈ ಮಧ್ಯೆ, ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಬೆಂಕಿಯುಗುಳಿದರು.

ಇದನ್ನೂ ಓದಿ: ಪ್ರತಾಪ್ ಸಿಂಹರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಅವರೊಬ್ಬ ಮಹಾ ಕೋಮುವಾದಿ: ಸಿದ್ದರಾಮಯ್ಯ

ಒಟ್ಟಾರೆಯಾಗಿ ವಕ್ಫ್​ ಬೋರ್ಡ್​ ವಿಚಾರವನ್ನೇ ಅಸ್ತ್ರ ಮಾಡಿಕೊಂಡ ಕೇಸರಿ ಪಡೆ, ಇವತ್ತು ಜಿಲ್ಲೆ ಜಿಲ್ಲೆಯಲ್ಲೂ ಸಮರ ಸಾರಿದೆ. ಇದಕ್ಕೆ ಕೌಂಟರ್ ಕೊಟ್ಟ ಕಾಂಗ್ರೆಸ್​, ಪ್ರತಿಭಟನೆ ಮೂಲಕ ರಾಜಕೀಯ ಎಂದು ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:08 pm, Mon, 4 November 24