ಕರ್ನಾಟಕದ ರೈತರಿಗೆ ವಕ್ಫ್ ನೋಟಿಸ್: ಬಿಜೆಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ

| Updated By: ವಿವೇಕ ಬಿರಾದಾರ

Updated on: Nov 15, 2024 | 1:12 PM

ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗಳ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದೆ. ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ನಡೆಯುವ ಈ ಅಭಿಯಾನದಲ್ಲಿ 1954 ರ ವಕ್ಫ್ ಗೆಜೆಟ್ ರದ್ದು, ವಕ್ಫ್ ಸ್ವಾಧೀನದಿಂದ ಜಾಗಗಳನ್ನು ಬಿಡುಗಡೆ ಮತ್ತು ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೆ ಬಿಜೆಪಿ ಆಗ್ರಹಿಸಲಿದೆ.

ಕರ್ನಾಟಕದ ರೈತರಿಗೆ ವಕ್ಫ್ ನೋಟಿಸ್: ಬಿಜೆಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ
ಬಿಜೆಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ
Follow us on

ಬೆಂಗಳೂರು, ನವೆಂಬರ್​ 15: ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ (Waqf Board)​ ನೋಟಿಸ್​ ನೀಡಿದೆ. ಈ ವಿಚಾರವಾಗಿ ನವೆಂಬರ್​​ 25 ರಿಂದ ಡಿಸೆಂಬರ್​ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ (BJP) ನಿರ್ಧರಿಸಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ತಳಿಸಿದರು.

ವಕ್ಪ್ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪನೆ ಮಾಡುತ್ತಿದ್ದೇವೆ. ವಕ್ಫ್​​ನಿಂದ ಸಮಸ್ಯೆಗೆ ಸಿಲುಕಿದವರು 9035675734 ವಾಟ್ಸಪ್ ನಂಬರಿಗೆ ದೂರು ನೀಡಬಹುದು. ನಮ್ಮ ಯಾವುದೇ ನಾಯಕರನ್ನೂ ಭೇಟಿ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ. ನವೆಂಬರ್ 25 ರಿಂದ ಶಾಸಕ ಬಸನಗೌಟ ಪಾಟೀಲ್​ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಹಲವರು ಜಾಥಾ ಪ್ರಾರಂಭವಾಗಲಿದೆ.

ಮೂರು ಬೇಡಿಕೆಗಳೊಂದಿಗೆ ಅಭಿಯಾನ ನಡೆಯಲಿದೆ. 1954 ರಿಂದ ರಚನೆಯಾಗಿರುವ ವಕ್ಪ್ ಸಂಬಂಧಿತ ಗೆಜೆಟ್ ಗಳನ್ನು ರದ್ದು ಮಾಡಬೇಕು. ರೈತರು, ದೇವಸ್ಥಾನ ಸೇರಿದಂತೆ ವಕ್ಫ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರುವ ಜಾಗಗಳನ್ನು ಶಾಶ್ವತವಾಗಿ ಬಿಟ್ಟು ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಬೇಕೆಂದು ಸರ್ಕಾರದ ಮುಂದೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಉಳಿಮೆ ಮಾಡುತ್ತಿದ್ದ ರೈತರಿಗೆ ಲಾಠಿ ಏಟು, ಕೇಸ್​​ ದಾಖಲು

ವಕ್ಪ್ ಸಮಸ್ಯೆಗಳು ಅಗಾಧವಾಗಿ ಎಲ್ಲರ ಗಮನಕ್ಕೆ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ಈ ಹೋರಾಟ ಪ್ರಾರಂಭ ಮಾಡಿದರು. ಧರಣಿ ಸತ್ಯಾಗ್ರಹ ಕುಳಿತ ಪರಿಣಾಮ ವಕ್ಫ್ ಕಾಯ್ದೆ ತಿದ್ದುಪಡಿ ಜೆಪಿಸಿ ಭೇಟಿ ಕೊಟ್ಟು ಮಾಹಿತಿ ಪಡೆಯಿತು. ನಂತರ ವಿಜಯಪುರದ ಹೋರಾಟವನ್ನು ಯತ್ನಾಳ್ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಆನಂತರವೂ ವಕ್ಪ್ ವಿಚಾರವಾಗಿ ದೂರು ಸಲ್ಲಿಸುತ್ತಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಕ್ಫ್​​ ನ್ಯಾಯಾಧಿಕರಣ ರದ್ದಾಗಬೇಕು. 6.70 ಲಕ್ಷ ಎಕರೆ ವಕ್ಫ್​​ ಆಸ್ತಿ ಎಂದು ಸ್ವಾಧೀನಕ್ಕೆ ಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಅಭಿಯಾನ ಮಾಡಿ ಜೆಪಿಸಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ಎಷ್ಟೋ ಮಾಹಿತಿಗಳು ಇನ್ನೂ ಕೇಂದ್ರ ಸರ್ಕಾರ, ಜೆಪಿಸಿಗೆ ಸಿಕ್ಕಿಲ್ಲ. ಜಮೀರ್ ಅಹ್ಮದ್ ಧಮ್ಕಿ ಹಾಕಿದ್ದಕ್ಕೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಮುಸ್ಲಿಂ ರೈತರು ಕೂಡ ನಮ್ಮ ಅಭಿಯಾನದ ಪರವಾಗಿಯೇ ಇದ್ದಾರೆ. ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿದ್ದರೂ ಸಮರ್ಥನೆ ಮಾಡಿಕೊಳ್ಳಲ್ಲ ಎಂದರು.

ನಮ್ಮ ಸಮುದಾಯದ ರಕ್ಷಣೆ ಮಾಡಬೇಕು. ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೇ ವಕ್ಫ್ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ. ಬಿಜೆಪಿ ಪಕ್ಷದ ಅಡಿಯಲ್ಲಿ ಹೋರಾಟ ಮಾಡುತ್ತೇವೆ. ನೇರವಾಗಿ ಕೇಂದ್ರ ಸಚಿವರು ಹೋರಾಟಕ್ಕೆ ಬಂದಿದ್ದರು. ಕೇಂದ್ರ ಸರ್ಕಾರ ಬೆಂಬಲಕ್ಕೆ ಇದೆ. ಕೇಂದ್ರ ಬಿಜೆಪಿ ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದೆ. ರಾಜ್ಯ ಬಿಜೆಪಿ ಅದರ ಒಂದು ಭಾಗ ಎಂದು ಹೇಳಿದರು.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ಯಾರು ಯಾರು ರಾಜಕಾರಣಿಗಳು ಎಷ್ಟು ದಶಕಗಳಿಂದ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಹೊರಗೆ ಬರುತ್ತದೆ. ದಾನಿಗಳು ಕೊಟ್ಟಿರುವ ಉದ್ದೇಶ ಬಿಟ್ಟು ಎಲ್ಲ ಅವ್ಯವಹಾರಗಳೂ ಅಲ್ಲಿ ಆಗುತ್ತಿವೆ. ಈ ರೀತಿ ಎಲ್ಲೆಲ್ಲಿ ಆಗಿದೆ ಅದನ್ನು ವಾಪಸ್ ಪಡೆದುಕೊಳ್ಳಲು ಮಾಣಿಪ್ಪಾಡಿ ಸಮಿತಿ ವರದಿ ನೀಡಿತ್ತು. ನೋಟಿಸ್ ಯಾವಾಗ ಬೇಕಾದರೂ ಬರಬಹುದು. ಆದರೆ ನೋಟೀಸ್ ವಕ್ಪ್ ಬೋರ್ಡ್​ನಿಂದಲೇ ಬರುತ್ತದೆ ಎಂದು ಹೇಳಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Fri, 15 November 24