Karnataka Weather: ಬೆಂಗಳೂರಿನಲ್ಲಿ ಮುಂದಿನ ಎರಡು ದಿನ‌ ಭಾರಿ ಮಳೆ, ರಾಜ್ಯದ ಅನೇಕ ಕಡೆ ಯಲ್ಲೋ ಅಲರ್ಟ್

ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ ಭಾಗದಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

Karnataka Weather: ಬೆಂಗಳೂರಿನಲ್ಲಿ ಮುಂದಿನ ಎರಡು ದಿನ‌ ಭಾರಿ ಮಳೆ, ರಾಜ್ಯದ ಅನೇಕ ಕಡೆ ಯಲ್ಲೋ ಅಲರ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 06, 2021 | 7:49 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ‌ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ರಾಜ್ಯಾದ್ಯಂತ ಮಳೆಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ ಭಾಗದಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ರಾಜಧಾನಿ ಜನ ತತ್ತರಿಸಿ ಹೋಗಿದ್ದಾರೆ. ಆದ್ರೆ ಚಿಕ್ಕ ಮಳೆಗೆ ಅಲ್ಲೋಲ ಕಲ್ಲೋಲ ಆಗುವ ಸಿಲಿಕಾನ್‌ ಸಿಟಿಯಲ್ಲಿ ಈ ವರ್ಷದ ಮಳೆಗಾಲಕ್ಕೆ ಯಾವುದೇ ತಯಾರಿ ಮಾಡಿಲ್ಲ. ನಿನ್ನೆ ವಿಜಯನಗರ, ರಾಜಾಜಿನಗರ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಜಯನಗರ, ಜೆಪಿನಗರ, ಗಿರಿನಗರ, ಮೈಸೂರು ರಸ್ತೆ, ಯಶವಂತಪುರ, ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿ ನಗರದ ಬಹುತೇಕ ಭಾಗದಲ್ಲಿ ಮಳೆ ಸುರಿದಿದೆ.

ಈ ಭಾರಿ ರಾಜಧಾನಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗೋ ಸಾಧ್ಯತೆಯಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಮಾತ್ರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಅನ್ಸುತ್ತೆ. ಇದಕ್ಕೆ ಫಯಾಝಾಬಾದ್‌ನಲ್ಲಿ ಆಗಿರುವ ಅನಾಹುತವೇ ಸಾಕ್ಷಿ. ಅಂದಹಾಗೇ ಬೆಂಗಳೂರಿನ ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಆಗಿಲ್ಲ. ಕಾಲುವೆಗಳಲ್ಲಿ ಸಂಪೂರ್ಣ ಹೂಳೆತ್ತುವ ಕೆಲಸ ಆಗಿಲ್ಲ. ಪ್ರತಿ ವರ್ಷ ಬಿಬಿಎಂಪಿ ಹೂಳು ತೆಗೆಯಲು ನೂರಾರು ಕೋಟಿ ವೆಚ್ಚ ಮಾಡ್ತಿದ್ರೂ. ಕಾಲುವೆಗಳು ಮಾತ್ರ ಕ್ಲೀನ್ ಆಗ್ತಿಲ್ಲ. ನೀರು ಸರಿಯಾಗಿ ಹರಿಯದೆ ಅಕ್ಕಪಕ್ಕದಲ್ಲಿರುವ ಏರಿಯಾಗಳಿಗೆ ನುಗ್ಗುತ್ತದೆ. ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಇದರಿಂದ ಮಳೆ ನೀರು ಸರಿಯಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಹಾಗೇ ಗಾಳಿ, ಮಳೆಗೆ ಉರುಳಿ ಬೀಳುವ ಮರಗಳನ್ನ ತೆರವು ಮಾಡಿಲ್ಲ. ತಗ್ಗು ಪ್ರದೇಶದಲ್ಲಿರುವ ಸ್ಲಂಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ. ಈ ಬಾರಿ ಮಳೆಗೆ ತಗ್ಗು ಪ್ರದೇಶಗಳು ಮುಳುಗಡೆಯಾಗೋ ಸಾಧ್ಯತೆಯಿದೆ, 209 ಸೂಕ್ಷ್ಮ ಪ್ರದೇಶಗಳು ಮಳೆ ಆರ್ಭಟಕ್ಕೆ ನಲುಗಲಿವೆ ಅಂತಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಸೂಚನೆ ಕೊಟ್ರು ಪಾಲಿಕೆ ‌ಮಾತ್ರ ನೆಗ್ಲೆಟ್ ಮಾಡಿದೆ.

ನಗರಗಳ ಇಂದಿನ ಹವಾಮಾನ ವರದಿ (ಗರಿಷ್ಠ ಉಷ್ಣಾಂಶ ಹಾಗೂ ಕನಿಷ್ಠ ಉಷ್ಣಾಂಶ) ಬೆಂಗಳೂರು: 29-21 ಮಂಗಳೂರು: 29-24 ಶವಮೊಗ್ಗ: 29-22 ಬೆಳಗಾವಿ: 28-21 ಮೈಸೂರು: 29-21 ಮಂಡ್ಯ: 29-21 ರಾಮನಗರ: 36-24 ಮಡಿಕೇರಿ: 24-18 ಹಾಸನ: 27-19 ಚಾಮರಾಜನಗರ: 30-21 ಚಿಕ್ಕಬಳ್ಳಾಪುರ: 27-19 ಕೋಲಾರ: 29-21 ತುಮಕೂರು: 28-21 ಉಡುಪಿ: 30-25 ಕಾರವಾರ: 30-26 ಚಿಕ್ಕಮಗಳೂರು: 26-19 ದಾವಣಗೆರೆ: 30-22 ಚಿತ್ರದುರ್ಗ: 28-21 ಹಾವೇರಿ: 30-22 ಗದಗ: 30-22 ಕೊಪ್ಪಳ: 31-23 ರಾಯಚೂರು: 33-25 ಯಾದಗಿರಿ: 33-24 ವಿಜಯಪುರ: 20-21 ಬೀದರ್: 32-23 ಕಲಬುರಗಿ: 33-24 ಬಾಗಲಕೋಟೆ: 33-22

ಇದನ್ನೂ ಓದಿ: Karnataka Weather: ಹವಾಮಾನ ವರದಿ – ಇಂದು, ನಾಳೆ ಭಾರೀ ಮಳೆ ಸುರಿಯುವ ನಿರೀಕ್ಷೆ; ಕರಾವಳಿ ಭಾಗದಲ್ಲಿ ರೆಡ್​ ಅಲರ್ಟ್​