ರಾಯಚೂರು ಜಿಲ್ಲೆಯಲ್ಲಿ ಅತ್ಯಧಿಕ 44.3 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲು

ರಾಯಚೂರು ಜಿಲ್ಲೆಯಲ್ಲಿ 18 ಸ್ಥಳಗಳು, ಕಲಬುರಗಿ ಜಿಲ್ಲೆಯಲ್ಲಿ 16 ಸ್ಥಳಗಳು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ 5 ಸ್ಥಳಗಳು, ವಿಜಯಪುರ ಜಿಲ್ಲೆಯಲ್ಲಿ 3 ಸ್ಥಳಗಳು, ಬೀದರ್ ಜಿಲ್ಲೆಯಲ್ಲಿ 2 ಸ್ಥಳಗಳು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ತಲಾ 1 ಸ್ಥಳಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್​ ಗಿಂತ ಹೆಚ್ಚು ದಾಖಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಅತ್ಯಧಿಕ 44.3 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲು
ತಾಪಮಾನ
Follow us
|

Updated on: Mar 31, 2024 | 6:51 AM

ರಾಯಚೂರು ಜಿಲ್ಲೆಯ ಹಡಗನಹಾಳ್ ಹೋಬಳಿಯಲ್ಲಿ ಶನಿವಾರ (ಮಾರ್ಚ್​ 30) ರಂದು ಅತ್ಯಧಿಕ 44.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ, ವಿಜಯಪುರ, ಬೀದರ್, ಬಾಗಲಕೋಟೆ, ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ 42 ಡಿಗ್ರಿ ಸೆಲ್ಸಿಯಸ್​​ನಿಂದ 44.3 ಡಿಗ್ರಿ ಸೆಲ್ಸಿಯಸ್​ ನಡುವೆ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಯಚೂರು ಜಿಲ್ಲೆಯಲ್ಲಿ 18 ಸ್ಥಳಗಳು, ಕಲಬುರಗಿ ಜಿಲ್ಲೆಯಲ್ಲಿ 16 ಸ್ಥಳಗಳು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ 5 ಸ್ಥಳಗಳು, ವಿಜಯಪುರ ಜಿಲ್ಲೆಯಲ್ಲಿ 3 ಸ್ಥಳಗಳು, ಬೀದರ್ ಜಿಲ್ಲೆಯಲ್ಲಿ 2 ಸ್ಥಳಗಳು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ತಲಾ 1 ಸ್ಥಳಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್​ ಗಿಂತ ಹೆಚ್ಚು ದಾಖಲಾಗಿದೆ.

ಮುಂದಿನ 5 ದಿನಗಳ ತಾಪಮಾನದ ಮುನ್ಸೂಚನೆ:

ಶಾಖದ ಅಲೆಯ ಎಚ್ಚರಿಕೆ: ಮುಂದಿನ ಮೂರು ದಿನಗಳಲ್ಲಿ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶಾಖದ ಅಲೆ ಹೆಚ್ಚಾಗಿ ಬೀಸುವ ಸಾಧ್ಯತೆಯಿದೆ.

ಉತ್ತರ ಒಳನಾಡು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಮಾರ್ಚ್ 30ರಿಂದ ಏಪ್ರಿಲ್​ 1ರ ನಡುವೆ ಮಧ್ಯಪ್ರದೇಶ, ವಿದರ್ಭ ಮತ್ತು ಉತ್ತರ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆಯ ಹೆಚ್ಚಾಗಲಿದೆ.

ಹೀಟ್ ಸ್ಟ್ರೋಕ್​ಗೆ ಒಳಗಾದರೆ ಏನು ಮಾಡಬೇಕು?

ಹೀಟ್ ಸ್ಟ್ರೋಕ್​ಗೆ ಒಳಗಾದ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಅಥವಾ ಒಳಾಂಗಣಕ್ಕೆ ಕರೆದುಕೊಂಡು ಹೋಗಿ. ನಂತರ ತುರ್ತು ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಿ. ವೈದ್ಯಕೀಯ ಸಹಾಯ ಬರುವವರೆಗೂ ಈ ಕ್ರಮಗಳನ್ನು ಪಾಲಿಸಿ..

  • ವ್ಯಕ್ತಿಯನ್ನು ಮೇಲ್ಮುಖವಾಗಿ ಮಲಗಿಸಿ.
  • ಪ್ರಜ್ಞೆ ಇದ್ದಲ್ಲಿ ಅವರಿಗೆ ತಂಪಾದ ನೀರನ್ನು ಕುಡಿಸಿರಿ
  • ಹೆಚ್ಚುವರಿ ಬಟ್ಟೆಗಳನ್ನು ತೆಗೆದುಹಾಕುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.
  • ತಂಪಾದ ನೀರನ್ನು ಸಿಂಪಡಿಸಿ
  • ಬಗಲು, ಮಣಿಕಟ್ಟುಗಳು, ಕೈ-ಕಾಲುಗಳು ಮತ್ತು ತೊಡೆಸಂದುಗಳಿಗೆ ಒದ್ದೆಯಾದ ಬಟ್ಟೆ / ಟವೆಲ್ / ಸ್ಪಂಜುಗಳು / ಐಸ್ ಪ್ಯಾಕ್ ಗಳಿಂದ ತಂಪಾಗಿಸಿ.
  • ಫ್ಯಾನ್ ಗಾಳಿಯ ಕೆಳಗೆ ಮಲಗಿಸಿ.
  • ನೆನಪಿಡಿ, ಸಮಯೋಚಿತ ಚಿಕಿತ್ಸೆಯು ಮುಖ್ಯವಾಗಿದೆ! ಈ ಬೇಸಿಗೆಯ ಶಾಖದಿಂದ ತಪ್ಪಿಸಿಕೊಳ್ಳಲು ತಂಪಾಗಿರಿ ಮತ್ತು ಹೆಚ್ಚು ನೀರು ಸೇವಿಸಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ