ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದಲೂ ಮಳೆಯಾಗುತ್ತಿದ್ದು, ಇದೇ ವಾತಾವರಣ ನಾಳೆ (ಏಪ್ರಿಲ್ 23)ಯವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಮೂರುದಿನಗಳಿಂದಲೂ, ಮಧ್ಯಾಹ್ನದ ವರೆಗೆ ಬಿಸಿಲು, ವಿಪರೀತ ಸೆಖೆಯಿದ್ದು ಸಂಜೆ ಹೊತ್ತಿಗೆ ಮಳೆಯಾಗುತ್ತಿದೆ. ನಿನ್ನೆ (ಏಪ್ರಿಲ್ 21) ಕೂಡ ರಾತ್ರಿ ಮಳೆ ಬಿದ್ದಿದೆ. ಅಲ್ಲದೆ, ಕರಾವಳಿ ಜಿಲ್ಲೆ ಉಡುಪಿಯಲ್ಲೂ ಭರ್ಜರಿ ಮಳೆಯಾಗಿದ್ದು ವರದಿಯಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದಲೂ ಬೆಳಗ್ಗೆಯೆಲ್ಲ ಬಿಸಿಲಿದ್ದು, ಸಂಜೆ ಹೊತ್ತಿಗೆ ಗುಡುಗು-ಮಿಂಚು ಸಹಿತ ಹದವಾದ ಮಳೆ ಬೀಳುತ್ತಿದೆ.
ತಮಿಳುನಾಡು, ಕೇರಳದಲ್ಲೂ ಹೀಗೆ ಗುಡುಗು-ಮಿಂಚು ಸಹಿತ ಮಳೆ ಬಿರುತ್ತಿದ್ದು, ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಏಪ್ರಿಲ್ 23ರವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಾಗುತ್ತಿರುವ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಡೆ ಕೊವಿಡ್-19 ಸೋಂಕು ಈಗಾಗಲೇ ಪಸರಿಸುತ್ತಿದ್ದು, ಹೀಗೆ ಒಣ ಬಿಸಿಲಿನೊಂದಿಗೆ ಸಡನ್ ಆಗಿ ಬರುವ ಮಳೆಯಿಂದ ಅಲರ್ಜಿ ಜತೆಗೆ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಮಧ್ಯಾಹ್ನವೇ ಮಳೆ ಸಾಧ್ಯತೆ
ರಾಜ್ಯಾದ್ಯಂತ ಇಂದು-ನಾಳೆ ಮಳೆಯಾಗಲಿದ್ದು, ಇಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಹಾಗೇ ಶುಕ್ರವಾರ ಸಂಜೆ 4ರಿಂದ ಗುಡುಗು ಸಹಿತ ಮಳೆಯಾಗಬಹುದು ಎನ್ನಲಾಗಿದೆ. ಏಪ್ರಿಲ್ 24ರಿಂದ ಬಿಸಿಲಿನ ವಾತಾವರಣವೇ ಮುಂದುವರಿಯಲ್ಲಿದ್ದು, ಏಪ್ರಿಲ್ 28, 29ರಂದು ಮತ್ತೆ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ವಾಹನ ಓವರ್ಟೇಕ್ ಮಾಡುವಾಗ ಎಚ್ಚರ; ಕೊಂಚ ಹಿಡಿತ ತಪ್ಪಿದರೂ ಅಪಾಯ ಖಂಡಿತ! ಇಲ್ಲಿರುವ ವಿಡಿಯೋ ನೋಡಿದ್ರೆ ಕಂಗಾಲಾಗ್ತೀರಾ
ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಟ್ರೆಂಡ್ ಅಲರ್ಟ್’ ಅಭಿಯಾನ.. ಮಧ್ಯಾಹ್ನ ಸರಣಿ ಟ್ವೀಟ್ ಮೂಲಕ ಪ್ರಶ್ನೆ
Published On - 12:59 pm, Thu, 22 April 21