ವಾಹನ ಓವರ್​ಟೇಕ್​ ಮಾಡುವಾಗ ಎಚ್ಚರ; ಕೊಂಚ ಹಿಡಿತ ತಪ್ಪಿದರೂ ಅಪಾಯ ಖಂಡಿತ! ಇಲ್ಲಿರುವ ವಿಡಿಯೋ ನೋಡಿದ್ರೆ ಕಂಗಾಲಾಗ್ತೀರಾ

ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಎಚ್ಚರದಿಂದರಬೇಕು. ಇಲ್ಲಿ ಮುಂದಿದ್ದ ಕಾರಿನವನನ್ನು ಹಿಂದಿಕ್ಕಿ ತಾನು ಮುಂದೆ ಹೋಗಬೇಕು ಎಂಬ ಅವಸರಕ್ಕೆ ಬಿದ್ದ ಪಿಕಪ್​ ಡ್ರೈವರ್​ಗೆ ಸಿಕ್ಕ ಪ್ರತಿಫಲ ಏನು ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದಿದೆ.

ವಾಹನ ಓವರ್​ಟೇಕ್​ ಮಾಡುವಾಗ ಎಚ್ಚರ; ಕೊಂಚ ಹಿಡಿತ ತಪ್ಪಿದರೂ ಅಪಾಯ ಖಂಡಿತ! ಇಲ್ಲಿರುವ ವಿಡಿಯೋ ನೋಡಿದ್ರೆ ಕಂಗಾಲಾಗ್ತೀರಾ
ಹಿಡಿತ ತಪ್ಪಿದ ಪಿಕ್​ಅಪ್​ ವಾಹನ
shruti hegde

|

Apr 22, 2021 | 12:46 PM


ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿದೆ. ಅದು ನಿಜವೂ ಹೌದು. ಕೆಲವರಿಗೆ ಅತಿವೇಗವಾಗಿ ವಾಹನ ಚಲಾಯಿಸುವ ಆಸೆ. ಲಾಂಗ್​ ಡ್ರೈವಿಂಗ್​, ಸ್ಪೀಡ್​ ಡ್ರೈವಿಂಗ್​ನಲ್ಲಿ ಹುಚ್ಚಾಟಗಳು ಹೆಚ್ಚಾದಾಗ ಇಂತಹ ಘಟನೆ ನಡೆಯುತ್ತದೆ. ಆದ್ದರಿಂದ ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಎಚ್ಚರದಿಂದರಬೇಕು. ಇಲ್ಲಿ ಮುಂದಿದ್ದ ಕಾರಿನವನನ್ನು ಹಿಂದಿಕ್ಕಿ ತಾನು ಮುಂದೆ ಹೋಗಬೇಕು ಎಂಬ ಅವಸರಕ್ಕೆ ಬಿದ್ದ ಪಿಕಪ್​ ಡ್ರೈವರ್​ಗೆ ಸಿಕ್ಕ ಪ್ರತಿಫಲ ಏನು ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದಿದೆ. ಸದ್ಯ ಈ ವಿಡಿಯೋ ನೋಡಿದವರೆಲ್ಲಾ ಹುಬ್ಬೇರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಅಮೆರಿಕಾದ ಫ್ಲೋರಿಡಾದ ಹೆದ್ದಾರಿಯಲ್ಲಿ ನಡೆದಿದೆ. ಎರಡೂ ಕಡೆಗಳಿಂದ ವಾಹನಗಳು ಬರುತ್ತಿದ್ದವು. ಎದುರುಗಡೆಯಿಂದ ಸ್ಕೂಲ್​ ಬಸ್, ಇನ್ನಿತರ ವಾಹನಗಳು ಬರುತ್ತಿದ್ದವು. ಇದೇ ಸಂದರ್ಭದಲ್ಲಿ  ಹಿಂಬದಿಯಿಂದ ಓವರ್​ ಟೇಕ್​ ಮಾಡಿಕೊಂಡು ಬಂದ ಪಿಕ್​ಅಪ್​ ವಾಹನ ಹಿಡಿತ ತಪ್ಪಿ ರಸ್ತೆಯ ಅಂಚಿಗೆ ಹೋಗಿ ಧೂಳೆಬ್ಬಿಸಿ ಪಲ್ಟಿ ಹೊಡೆದಿದೆ. ಇದು ಇನ್ನೊಂದು ವಾಹನದಲ್ಲಿದ್ದ ಚಾಲಕನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಮಯ ಕೆಟ್ಟಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್​ ಪಿಕಪ್​ ಬಸ್​ಗೆ ಗುದ್ದದೇ ರಸ್ತೆಯ ಅಂಚಿನಲ್ಲಿ ಪಲ್ಟಿ ಹೊಡೆದು ನಿಂತಿದೆ.

ಈ ಘಟನೆಯನ್ನು ಚಿತ್ರೀಕರಿಸಿದ ವ್ಯಕ್ತಿ ನಾನು ಘಟನೆಯನ್ನು ಕಣ್ಣಾರೆ ನೋಡಿದ್ದು, ಪಿಕ್​ಅಪ್​ ವಾಹನ ವೇಗವಾಗಿ ಚಲಿಸುತ್ತಿತ್ತು. ಎರಡೂ ಕಡೆಗಳಿಂದ ವಾಹನ ಚಲಿಸುತ್ತಿತ್ತು. ಶಾಲೆಗೆ ಹೋಗುವ ಎರಡು ಬಸ್​ಗಳು ಕೂಡಾ ಎದುರುಗಡೆಯಿಂದ ಚಲಿಸುತ್ತಿದ್ದವು. ಆಗ ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಚಾಲಕ ಅಜಾಗೂರತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಟೀಕಿಸಿದ್ದಾರೆ. ಇನ್ನೊಬ್ಬರು, ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada