ಮೂಲಸೌಕರ್ಯ ಬಲಪಡಿಸಿ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಹೂಡಿಕೆ ಹೆಚ್ಚಿಸಿ; ಐಐಎಂಬಿ, ಸಿಐಐ ತಜ್ಞರಿಂದ ‘ಕರ್ನಾಟಕ ವಿಷನ್‌-2047’ ವರದಿ ಬಿಡುಗಡೆ

'ಕರ್ನಾಟಕ@100' ವಿಷನ್ ಡಾಕ್ಯುಮೆಂಟ್ ರಾಜ್ಯವು ಸಮಾನ ಅಭಿವೃದ್ಧಿ, ಸುಸ್ಥಿರತೆ ಮತ್ತು ನಾವೀನ್ಯತೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸುಲು ಮಾರ್ಗಸೂಚಿಯನ್ನು ಒದಗಿಸುತ್ತದೆ.

ಮೂಲಸೌಕರ್ಯ ಬಲಪಡಿಸಿ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಹೂಡಿಕೆ ಹೆಚ್ಚಿಸಿ; ಐಐಎಂಬಿ, ಸಿಐಐ ತಜ್ಞರಿಂದ 'ಕರ್ನಾಟಕ ವಿಷನ್‌-2047' ವರದಿ ಬಿಡುಗಡೆ
ವಿಧಾನ ಸೌಧ
Follow us
ನಯನಾ ಎಸ್​ಪಿ
|

Updated on: Jun 13, 2023 | 1:22 PM

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ಜಂಟಿಯಾಗಿ ಸಿದ್ಧಪಡಿಸಿದ ರಾಜ್ಯದ ಅಭಿವೃದ್ಧಿಯ ದೃಷ್ಟಿಕೋನವನ್ನು ಒಳಗೊಂಡಿರುವ ‘ಕರ್ನಾಟಕ 100-ಎ ವಿಷನ್ ಡಾಕ್ಯುಮೆಂಟ್ ಫಾರ್ 2047’ (Karnataka@100: A Vision Document for 2047) ವರದಿಯನ್ನು ಸೋಮವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ಮಹತ್ವದ ವರದಿಯು ರಾಜ್ಯದ ಭವಿಷ್ಯದ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ಒಳಗೊಂಡಿದೆ.

‘ಕರ್ನಾಟಕ@100: ಎ ವಿಷನ್ ಡಾಕ್ಯುಮೆಂಟ್ ಫಾರ್ 2047’ ಎಂಬ ಶೀರ್ಷಿಕೆಯ ಇತ್ತೀಚಿನ ವರದಿಯು ರಾಜ್ಯದ ಭವಿಷ್ಯದ ಅಭಿವೃದ್ಧಿಗೆ ಪ್ರಮುಖ ಶಿಫಾರಸುಗಳನ್ನು ವಿವರಿಸಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (IIMB) 4 ಪ್ರಾಧ್ಯಾಪಕರು ಸೇರಿ ಬರೆದ ವರದಿಯು, ಸ್ಥಳೀಯ ಆಡಳಿತವನ್ನು ಬಲಪಡಿಸುವುದು, ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ನವೀಕರಿಸುವುದು, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ದಿ ಹಿಂದೂ ವರದಿ ಮಾಡಿದೆ.

ಭಾರತದ ಸ್ವಾತಂತ್ರ್ಯದ ನಂತರ ಕರ್ನಾಟಕವು ಗಮನಾರ್ಹವಾದ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಕಾಫಿ ಮತ್ತು ಐಟಿಯಂತಹ ಕ್ಷೇತ್ರಗಳಲ್ಲಿನ ತನ್ನ ಸಾಧನೆಗಳಿಗಾಗಿ ಜಾಗತಿಕವಾಗಿ ಮನ್ನಣೆಯನ್ನು ಗಳಿಸಿದೆ. ಆದಾಗ್ಯೂ, ಈ ಪ್ರಗತಿಯು ರಾಜ್ಯಕ್ಕೆ ವಿಶಿಷ್ಟ ಸವಾಲುಗಳನ್ನು ತಂದಿದೆ. ಸಮಾನ ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ನಾವೀನ್ಯತೆ, ಉದ್ಯಮಶೀಲತೆ, ಜೈವಿಕ ವೈವಿಧ್ಯತೆ ಮತ್ತು ಪರಂಪರೆಯಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಬಳಸಿಕೊಳ್ಳಲು ವಿಷನ್ ಡಾಕ್ಯುಮೆಂಟ್ ಪ್ರಸ್ತಾಪಿಸುತ್ತದೆ.

ವರದಿಯು ಉದ್ಯಮಶೀಲ ಪರಿಸರ ವ್ಯವಸ್ಥೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ ಮತ್ತು ಪರಿಸರ ಸೇರಿದಂತೆ 14 ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಕರ್ನಾಟಕದ ಸಮೃದ್ಧ ಮತ್ತು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವ ಸಂಭಾಷಣೆಗಳು ಮತ್ತು ಕ್ರಿಯೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.

ವರದಿಯ ಲೇಖಕರು ಸಾರ್ವಜನಿಕ ಆಡಳಿತದಲ್ಲಿ ವಿಕೇಂದ್ರೀಕರಣದ ಪ್ರಾಮುಖ್ಯತೆ, ಸಾರ್ವಜನಿಕ ಮೂಲಸೌಕರ್ಯದಲ್ಲಿ ಸುಧಾರಣೆ ಮತ್ತು ನಗರಗಳಿಗೆ ನೇರವಾಗಿ ಚುನಾಯಿತ ಮೇಯರ್‌ಗಳ ಪರಿಚಯವನ್ನು ಎತ್ತಿ ತೋರಿಸಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಎದುರಿಸುತ್ತಿರುವ ಮೂಲಸೌಕರ್ಯ ಸವಾಲುಗಳನ್ನು ಎದುರಿಸಲು ಉತ್ತಮ ನಗರ ಯೋಜನೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಟೋಲ್‌ ದರ ಏರಿಕೆ, ಜೂನ್​.19 ರಂದು ಕನ್ನಡ ಪರ ಸಂಘಟನೆಯಿಂದ ಪ್ರತಿಭಟನೆ

ಒಟ್ಟಾರೆಯಾಗಿ, ‘ಕರ್ನಾಟಕ@100’ ವಿಷನ್ ಡಾಕ್ಯುಮೆಂಟ್ ರಾಜ್ಯವು ಸಮಾನ ಅಭಿವೃದ್ಧಿ, ಸುಸ್ಥಿರತೆ ಮತ್ತು ನಾವೀನ್ಯತೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸುಲು ಮಾರ್ಗಸೂಚಿಯನ್ನು ಒದಗಿಸುತ್ತದೆ. ಅದರ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ, ಕರ್ನಾಟಕದ ಭವಿಷ್ಯದ ಪಥವನ್ನು ರೂಪಿಸಬಹುದು ಮತ್ತು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಇತರ ಪ್ರದೇಶಗಳಿಗೆ ಮಾದರಿಯಾಗಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ