Karwar Railway Station: ಹಚ್ಚಹಸಿರು ಸೊಬಗಿನ ಸೌಂದರ್ಯದ ನಡುವೆ ಹಾಯಾಗಿ ರೈಲಿನಲ್ಲಿ ಪ್ರಯಾಣ ಮಾಡುವುದೇ ಮನಸ್ಸಿಗೆ ಖುಷಿ ತರುತ್ತದೆ. ಜಿಟಿಜಿಟಿ ಮಳೆಯಲ್ಲಿ ಈಗತಾನೆ ಮಿಂದು ನಿಂತ ಹಸಿರು ಪ್ರಕೃತಿಯ ಮಧ್ಯೆ ರೈಲು ಸಾಗುತ್ತಿರುವಾಗ ಕಿಟಕಿಯಿಂದಾಚೆ ನೋಡುವ ಖುಷಿ ಇನ್ನೆಲ್ಲೂ ಸಿಗದು. ಕಾರವಾರದ ಹಚ್ಚ ಹಸುರಿನ ಪ್ರಕೃತಿಯ ನಡುವೆ ಇರುವ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣ ನಾರ್ವೆ ದೇಶದಲ್ಲಿಯೂ ಹೆಸರು ಪಡೆಯುತ್ತಿದೆ. ಸುಂದರ ಪ್ರಕೃತಿಯ ನಡುವೆ ಪ್ರಯಾಣ ಕೈಗೊಳ್ಳುವುದು ಭಾಗ್ಯ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ನಾರ್ವೆಯ ಅಂತರಾಷ್ಟ್ರಿಯ ಅಭಿವೃದ್ಧಿ ಖಾತೆಯ ಮಾಜಿ ಸಚಿವ ಎರಿಕ್ ಸೋಲ್ಹಿಮ್ ಅವರು ತಮ್ಮ ಟ್ವಿಟರ್ ಅಧಿಕೃತ ಖಾತೆಯಲ್ಲಿ ಕಾರವಾರದ ರೈಲು ನಿಲ್ದಾಣದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅತ್ಯಂತ ಹಸಿರಾದ ನಿಲ್ದಾಣಗಳಲ್ಲಿ ಕಾರವಾರದ ರೈಲ್ವೆ ನಿಲ್ದಾಣವೂ ಸಹ ಒಂದಾಗಿರಬೇಕು. ಅದ್ಭುತವಾದ ಹಸಿರು ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ 5,800ಕ್ಕಿಂತಲೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿಕೊಂಡಿದೆ. 660 ರೀಟ್ವೀಟ್ಗಳೂ ಸಹ ಲಭಿಸಿವೆ. ಸುಂದರ ಪ್ರಕೃತಿಯ ನಡುವೆ ಸಾಗುವ ರೈಲ್ವೆಯಲ್ಲಿ ಪ್ರಯಾಣಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಪರಿಸರದ ಸೊಬಗೆ ಹಾಗೇ..! ನಿಸರ್ಗದ ಸೌಂದರ್ಯ ನೋಡುತ್ತಾ ನಿಂತರೆ ಮೈಮರೆಯುವುದಂತೂ ಸತ್ಯ. ನಿಸರ್ಗದ ಸಹಜತೆ ಜನರಿಗೆ ಖುಷಿಕೊಡುವುದಂತೂ ಸತ್ಯ.
Amazing green!
This must be One of the greenest Railway Stations in India ?? and the world?
Karwar in Karnataka pic.twitter.com/RKldvGcWNl— Erik Solheim (@ErikSolheim) July 6, 2021
ಇದನ್ನೂ ಓದಿ:
ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ
ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ, 2ಬಿ ಹಂತಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ
Published On - 11:30 am, Tue, 13 July 21