AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ

ಮೈಸೂರು ರಾಜ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಹೆಸರುಗಳು ಮೈಸೂರು ಒಂದೇ ಅಲ್ಲದೆ ಕರ್ನಾಟಕದ ಜನರಿಗೇ ಚಿರಪರಿಚಿತವಾಗಿದೆ. ಅಲ್ಲದೆ ಸಂವಹನದ ದೃಷ್ಟಿಯಿಂದಲೂ ಈ ಮರುನಾಮಕರಣ ಅವಶ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿಯಲ್ಲಿ ತಿಳಿಸಿದ್ದಾರೆ.

ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)
TV9 Web
| Edited By: |

Updated on: Jul 03, 2021 | 5:40 PM

Share

ಮೈಸೂರು: ಅರಮನೆ ನಗರಿಯ ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಕೇಂದ್ರ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಈ ಕುರಿತು ಮನವಿ ಮಾಡಿದ್ದಾರೆ. ಜತೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆಯೂ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. 

ಮೈಸೂರು ರಾಜ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಹೆಸರುಗಳು ಮೈಸೂರು ಒಂದೇ ಅಲ್ಲದೆ ಕರ್ನಾಟಕದ ಜನರಿಗೇ ಚಿರಪರಿಚಿತವಾಗಿದೆ. ಅಲ್ಲದೆ ಸಂವಹನದ ದೃಷ್ಟಿಯಿಂದಲೂ ಈ ಮರುನಾಮಕರಣ ಅವಶ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿಯಲ್ಲಿ ತಿಳಿಸಿದ್ದಾರೆ.

ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು: ಮೈಸೂರು ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸಂಸದನ ಸ್ಥಾನವೇ ಸಾಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ಸಂಸದ ಪ್ರತಾಪ್ ಸಿಂಹ ಹೆಸರು ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಕೊಡಗು ಜನ ನನಗೆ ಸಂಸದನ ಸ್ಥಾನ ನೀಡಿದ್ದಾರೆ, ನನಗಿಷ್ಟೇ ಸಾಕು ಎಂದು ಹೇಳಿದ್ದರು.

ಸಂಸದನಾದ ಮೇಲೆ ಮಿನಿಸ್ಟರ್ ಆಗಬೇಕು. ಮಿನಿಸ್ಟರ್ ನಂತರ ಸಿಎಂ ಆಗಬೇಕು ಅನ್ನೋ ಆಸೆಗಿಂತ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಜನರ ಕೆಲಸ ಮಾಡಲಿ ಅಂತ ನಮ್ಮನ್ನು ನೇಮಕ ಮಾಡುವುದು. ಒಂದರ ನಂತರ ಒಂದು ಸ್ಥಾನಕ್ಕೆ ಆಸೆ ಪಡುವ ಬದಲು ಇರುವ ಹುದ್ದೆಯಲ್ಲೇ ಕೆಲಸ ಮಾಡಬೇಕು. ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: 

Delta Variant: ಡೆಲ್ಟಾ ಮಾದರಿ ಕೊರೊನಾ ಸೋಂಕಿನ ಲಕ್ಷಣಗಳು ಈ ಮೊದಲ ಕೊವಿಡ್ ರೋಗಲಕ್ಷಣಕ್ಕಿಂತ ಭಿನ್ನವಾಗಿರಬಹುದು: ಅಧ್ಯಯನ

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

(MP Pratap Simha requests naming of Nalwadi Krishnaraja Wodeyar for Mysuru railway station)

Follow Us
TV9 Web
TV9 Web

TV9 Kannada

Read More
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953