ನನ್ನನ್ನ ಬಾಂಬೆ ಕಳ್ಳ ಎಂದು ಯಾಕೆ ಕರೆಯುತ್ತಾರೋ ಗೊತ್ತಿಲ್ಲ, ಮುಂಬೈಗೆ ಹೋಗಿ ಪರಿಶೀಲಿಸಿ ನನ್ನ ಮೇಲೆ ಒಂದೂ ಕೇಸ್​ ಇಲ್ಲ: ಸಚಿವ ನಾರಾಯಣ ಗೌಡ

|

Updated on: Mar 06, 2021 | 3:55 PM

ವಿಡಿಯೋ ಗ್ರಾಫಿಕ್ಸ್​ ಇದ್ರೂ ಇರಬಹುದು. ರಾಜಕಾರಣದಲ್ಲಿ ವೈಯಕ್ತಿಕವಾಗಿ ಟಾರ್ಗೆಟ್​ ಮಾಡಿರಬಹುದು. ನಾನು ನರ್ವಸ್ ಆಗಿದ್ದರೆ ಅಥವಾ ಹೆದರಿದ್ದರೆ ಮಂಡ್ಯಕ್ಕೆ ಬರುತ್ತಿರಲಿಲ್ಲ.​ ನನ್ನನ್ನ ಬಾಂಬೆ ಕಳ್ಳ ಎಂದು ಏಕೆ ಕರೆಯುತ್ತಾರೆ ಗೊತ್ತಿಲ್ಲ ಎಂದು ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ನನ್ನನ್ನ ಬಾಂಬೆ ಕಳ್ಳ ಎಂದು ಯಾಕೆ ಕರೆಯುತ್ತಾರೋ ಗೊತ್ತಿಲ್ಲ, ಮುಂಬೈಗೆ ಹೋಗಿ ಪರಿಶೀಲಿಸಿ ನನ್ನ ಮೇಲೆ ಒಂದೂ ಕೇಸ್​ ಇಲ್ಲ: ಸಚಿವ ನಾರಾಯಣ ಗೌಡ
ಸಚಿವ ಕೆ.ಸಿ. ನಾರಾಯಣ ಗೌಡ
Follow us on

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದ 6 ಸಚಿವರು ಕೋರ್ಟ್​ಗೆ​ ಮೊರೆ ಹೋದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಮಸೆದಿರುವ ಕತ್ತಿಯಿಂದ ರಕ್ಷಣೆ ಮಾಡಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸತ್ಯಾಂಶ ಗೊತ್ತಾಗುತ್ತಲ್ವಾ ಈಗ. ಸತ್ಯಾಂಶ ಯಾರದ್ದಿದೆ ಅದನ್ನ ಹೊರಗಡೆ ಬಿಡಿ ಎಂದು ಹೇಳಿಕೆ ನೀಡಿದ್ದಾರೆ.

ರಕ್ಷಣೆಗಾಗಿ ಕೋರ್ಟ್​ಗೆ ಹೋಗಿದ್ದೇವೆ, ಅದರಲ್ಲಿ ತಪ್ಪೇನಿದೆ? ನೀವು ಸತ್ಯಾಂಶ ಮುಚ್ಚಿಡಿ ಎಂದು ನಾವು ಹೇಳುತ್ತಿಲ್ಲ. ​ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ವಿಚಾರ ವೈಯಕ್ತಿಕ. ರಮೇಶ್ ಜಾರಕಿಹೊಳಿ ಅವರೇ ಅದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ಸಿನಿಮಾದಲ್ಲಿ ಬೆಟ್ಟದ ಮೇಲಿಂದ ಕಲಾವಿದ ನೆಗೆಯುತ್ತಾನೆ. ಸಿನಿಮಾದಲ್ಲಿ ಆತ ಕೈ ಕಾಲುಗಳನ್ನು ಮುರಿದುಕೊಳ್ಳುತ್ತಾನೆ. ಆದರೆ ಅವನು ನಿಜವಾಗಿಯೂ ಬೆಟ್ಟದಿಂದ ಬೀಳುತ್ತಾನಾ? ಅದೇ ರೀತಿ ಇಲ್ಲೂ ಏನೋ ನಡೆದಿರಬಹುದು ಅಷ್ಟೇ ಎಂದು ಕೆ.ಸಿ.ನಾರಾಯಣ ಗೌಡ ತಿಳಿಸಿದ್ದಾರೆ.​

ವಿಡಿಯೋ ಗ್ರಾಫಿಕ್ಸ್​ ಇದ್ರೂ ಇರಬಹುದು. ರಾಜಕಾರಣದಲ್ಲಿ ವೈಯಕ್ತಿಕವಾಗಿ ಟಾರ್ಗೆಟ್​ ಮಾಡಿರಬಹುದು. ನಾನು ನರ್ವಸ್ ಆಗಿದ್ದರೆ ಅಥವಾ ಹೆದರಿದ್ದರೆ ಮಂಡ್ಯಕ್ಕೆ ಬರುತ್ತಿರಲಿಲ್ಲ.​ ನನ್ನನ್ನ ಬಾಂಬೆ ಕಳ್ಳ ಎಂದು ಏಕೆ ಕರೆಯುತ್ತಾರೆ ಗೊತ್ತಿಲ್ಲ ಎಂದು ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ನಾನು 32 ವರ್ಷಗಳ ಕಾಲ ಮುಂಬೈನಲ್ಲಿ ಇದ್ದೆ.​ ನೀವು ಮುಂಬೈಗೆ ಹೋಗಿ ನನ್ನ ಬಗ್ಗೆ ಪರಿಶೀಲಿಸಬಹುದು ಕಳ್ಳತನ, ಲೂಟಿ, ಚೆಕ್​ ಬೌನ್ಸ್​ ಸೇರಿ ಯಾವುದೇ ಪ್ರಕರಣಗಳು ಇಲ್ಲ. ಒಂದೇ ಒಂದು ದೂರು ದಾಖಲಾಗಿದ್ದರೂ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬಾಂಬೆ ಕಳ್ಳ ಅಂದ್ರೆ ಅರ್ಥ ಏನು ಬಾಂಬೆ ಕಳ್ಳ ಎಂದು ಏಕೆ ಕರೀತಿದ್ದೀರಿ ಎಂದು ಯಾರಾದರೂ ಕೇಳಿದ್ದೀರಾ. ಬಾಂಬೆ ಕಳ್ಳ ಎನ್ನುವವರ ಮೇಲೆ ಮಾನಹಾನಿ ಕೇಸ್ ಹಾಕಬಹುದಲ್ಲಾ ಸರ್ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸರ್ ಎಷ್ಟು ಕೇಸ್ ಹಾಕುವುದು ಈಗ ಒಂದು ಕೇಸ್ ಹಾಕಿರೋದನ್ನ ತಾವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.

ಇದನ್ನೂ ಓದಿ:ಕೋರ್ಟ್ ಮೊರೆ ಹೋದ ಮುಂಬೈ ಮಿತ್ರ ಮಂಡಳಿ ಸದಸ್ಯರು ನೀಡಿದ ಸ್ಪಷ್ಟನೆ ಏನು ಗೊತ್ತಾ? ಇಲ್ಲಿದೆ ವಿವರ

Published On - 3:55 pm, Sat, 6 March 21