AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ -ಲಕ್ಷ್ಮೀ ಹೆಬ್ಬಾಳ್ಕರ್

ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ ಎಂದು ನಗರದಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ರಾಜಕಾರಣಿಗಳು ಒಂದು ಉದಾಹರಣೆ ಸೆಟ್ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಹೇಳಿದರು.

ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ -ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
KUSHAL V
|

Updated on:Mar 06, 2021 | 5:34 PM

Share

ಹುಬ್ಬಳ್ಳಿ: ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ ಎಂದು ನಗರದಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ರಾಜಕಾರಣಿಗಳು ಒಂದು ಉದಾಹರಣೆ ಸೆಟ್ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಹೇಳಿದರು.

ಸಿ.ಡಿ ವಿಚಾರದಲ್ಲಿ ನಾನೇನು ಮಾತನಾಡಲ್ಲ. ಬೇರೆ ವಿಚಾರವಾಗಿ ಏನಾದ್ರು ಪ್ರಶ್ನೆ ಇದ್ರೇ ಕೇಳಿ. ಆ ವಿಚಾರದಲ್ಲಿ ನನ್ನ ಹೆಸರಿ ಯಾಕೆ ಎಳೆದು ತರುತ್ತಿದ್ದಾರೆ ಎಂದು ನಂಗೆ ಗೊತ್ತಿಲ್ಲ. ನಾವು ರಾಜಕಾರಣಿಗಳು ಒಂದು ಉದಾಹರಣೆ ಸೆಟ್ ಮಾಡಬೇಕು ಎಂದು ಹೇಳಿದರು.

ಗೋಕಾಕ್ ಪ್ರತಿಭಟನೆ ವೇಳೆ ತಮ್ಮ ಹೆಸರು ವಿರುದ್ಧ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಬೆಂಬಲಿಗುರ ಘೋಷಣೆ ಕೂಗಿದ ವಿಚಾರವಾಗಿ That is irrelevant to me ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿ ಸುಮ್ಮನಾದರು.

‘ಆಕೆ ರಾಜಕೀಯಕ್ಕೆ ಯಾರಿಂದ ಬಂದಳು ಎಂದು ತಿಳದುಕೊಳ್ಳಲಿ’ ಅಂದ ಹಾಗೆ, ಈ ಹಿಂದೆ ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಧರಣಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕೂಡ ಭಾಗಿಯಾದರು. ಈ ವೇಳೆ, ರಮೇಶ್​ ಬೆಂಬಲಿಗರು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಏಕವಚನದಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.

ಏನೇ ನಾಚಿಗೆಟ್ಟ ಹೆಣ್ಣೆ ಎಂದು ತರಾಟೆಗೆ ತೆಗೆದುಕೊಂಡ ಮಹಿಳಾ ಬೆಂಬಲಿಗರು ನಿನ್ನ ಹುಚ್ಚು ಬಿಡಿಸ್ತೀವಿ. ನಿನಗೆ ರಾಜಕೀಯವನ್ನು ಕಲಿಸಿಕೊಡ್ತಿವಿ, ಬಾ ಹೆಣ್ಣೆ ಎಂದು ರಮೇಶ್​ ಜಾರಕಿಹೊಳಿಯ ಮಹಿಳಾ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದಲ್ಲದೆ, ನನ್ ಮೇಲೆ ಕೇಸ್ ಹಾಕಬೇಕಂದ್ರೆ ಹಾಕೋ ಎಂದು ಗ್ರಾ.ಪಂ ಸದಸ್ಯೆ ಶಿವಗಂಗವ್ವ ನವಣಿ ಏಕವಚನದಲ್ಲಿ ಶಾಸಕಿ ಮೇಲೆ ವಾಕ್​ ಪ್ರಹಾರ ಮಾಡಿದರು.

ರಮೇಶ್​ ಜಾರಕಿಹೊಳಿ ಅಧಿಕಾರ ಕಳೆದುಕೊಂಡಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹಬ್ಬದೂಟ ಮಾಡಿದ ಹಾಗೆ ಆಯ್ತು ಅಂತಿದ್ದಾಳೆ. ಆದರೆ ಆಕೆ ರಾಜಕೀಯಕ್ಕೆ ಯಾರಿಂದ ಬಂದಳು ಎಂದು ತಿಳದುಕೊಳ್ಳಲಿ ಎಂದು ಶಿವಗಂಗವ್ವ ಮಹಿಳೆ ಕಿಡಿಕಾರಿದರು. ಆಕೆಯ ಹುಚ್ಚು ಬಿಡಿಸ್ತಿವಿ. ಆಕೆಯನ್ನು ಇಲ್ಲಿಗೆ ಬರೋಕೆ ಹೇಳಿ. ಅವಳಿಗೆ ಬುದ್ಧೀ ಹೇಳ್ತಿವಿ ಎಂದು ಗ್ರಾ. ಪಂ ಸದಸ್ಯೆ ಹೌಹಾರಿದರು.

ಗೋಕಾಕ್ ಮಂದಿಗೆ ಹುಚ್ಚು ಹಿಡಿದಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಾರೆ. ಸಂಗೊಳ್ಳಿ ರಾಯಣ್ಣನಿಗೆ, ಸಿಂಧೂರ ಲಕ್ಷ್ಮಣನಿಗೆ ಮೋಸ ಮಾಡಿದ ಹಾಗೆ ನಮ್ಮ ರಮೇಶ್ ಅಣ್ಣನಿಗೂ ಮೋಸವಾಗಿದೆ ಎಂದು ಕೆಲ ಬೆಂಬಲಿಗರು ತಮ್ಮ ಸಿಟ್ಟು ಹೊರಹಾಕಿದರು.

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಪ್ರತಿಭಟನೆ ನಡೆಯಿತು. ನಕಲಿ ಸಿಡಿ ತಯಾರಿಸಿ ರಮೇಶ್ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಬೆಂಬಲಿಗರು ದೂರುದಾರ ದಿನೇಶ್ ಕಲ್ಲಹಳ್ಳಿಯ ಅಣಕು ಶವಯಾತ್ರೆ ಸಹ ನಡೆಸಿದರು. ಜೊತೆಗೆ, ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡಿದರು. ಗೋಕಾಕ್ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿ: ನನ್ನನ್ನ ಬಾಂಬೆ ಕಳ್ಳ ಎಂದು ಯಾಕೆ ಕರೆಯುತ್ತಾರೋ ಗೊತ್ತಿಲ್ಲ, ಮುಂಬೈಗೆ ಹೋಗಿ ಪರಿಶೀಲಿಸಿ ನನ್ನ ಮೇಲೆ ಒಂದೂ ಕೇಸ್​ ಇಲ್ಲ: ಸಚಿವ ನಾರಾಯಣ ಗೌಡ

Published On - 4:43 pm, Sat, 6 March 21