ಕೆಇಎ ಪರೀಕ್ಷಾ ಹಗರಣ: ಆರೋಪಿ ರುದ್ರಗೌಡ ಪಾಟೀಲ್ ಕೊನೆಗೂ ಬಂಧನ

| Updated By: Ganapathi Sharma

Updated on: Nov 10, 2023 | 9:38 PM

RD Patil Arrested: ರಾಜ್ಯದಾದ್ಯಂತ ಭಾರೀ ಸದ್ದು ಮಾಡಿರುವ ಕಲಬುರಗಿ ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್​ನನ್ನು ಕೊನೆಗೂ ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಅಫಜಲಪುರ-ಮಹಾರಾಷ್ಟ್ರ ಗಡಿಯಲ್ಲಿ ಆತನನ್ನು ಬಂಧಿಸಿದೆ.

ಕೆಇಎ ಪರೀಕ್ಷಾ ಹಗರಣ: ಆರೋಪಿ ರುದ್ರಗೌಡ ಪಾಟೀಲ್ ಕೊನೆಗೂ ಬಂಧನ
ಆರ್‌ಡಿ ಪಾಟೀಲ್
Follow us on

ಬೆಂಗಳೂರು, ನವೆಂಬರ್ 10: ಕೆಇಎ ಪರೀಕ್ಷಾ ಹಗರಣದ (KEA exam scam) ಆರೋಪಿ ರುದ್ರಗೌಡ ಪಾಟೀಲ್​ನನ್ನು (Rudragowda Patil) ಕೊನೆಗೂ ಬಂಧಿಸಲಾಗಿದೆ. ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಅಫಜಲಪುರ-ಮಹಾರಾಷ್ಟ್ರ (Afazalpur-Maharashtra border) ಗಡಿಯಲ್ಲಿ ಪಾಟೀಲ್​ನನ್ನು ಬಂಧಿಸಿದೆ. ಬಂಧಿಸಲು ಪೊಲೀಸರು ಆಗಮಿಸಿದ್ದ ವೇಳೆ ಕಂಪೌಂಡ್ ಹಾರಿ ಪರಾರಿಯಾಗಿದ್ದ ರುದ್ರಗೌಡ ಪಾಟೀಲ್, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ.

ರುದ್ರಗೌಡ ಪಾಟೀಲ್​ನನ್ನು​ ಪೊಲೀಸರು ಬಂಧಿಸಿ ಕಲಬುರಗಿಗೆ ಕರೆತಂದಿದ್ದಾರೆ. ಈತ ನವೆಂಬರ್ 6ರಂದು ಕಲಬುರಗಿಯ ವರ್ಧಾ ಲೇಔಟ್​ನಲ್ಲಿರುವ ಮಹಾಲಕ್ಷ್ಮೀ ಅಪಾರ್ಟ್​ಮೆಂಟ್ ಕಾಂಪೌಂಡ್ ಹಾರಿ ಪರಾರಿಯಾಗಿದ್ದ.

ನವಂಬರ್ 6 ರಂದು ಕಂಪೌಂಡ್ ಹಾರಿ ಪರಾರಿಯಾಗಿದ್ದ ಆರ್​ಡಿ ಪಾಟೀಲ್, ಜೈಲಿನಿಂದ ಹೊರಗಡೆ ಇದ್ದುಕೊಂಡೇ ಜಾಮೀನು ಪಡೆಯಲು ಯತ್ನಿಸಿದ್ದ. ಜಾಮೀನು ಅರ್ಜಿಯನ್ನು ಜಾಮೀನು ಅರ್ಜಿಯನ್ನು ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 7ರಂದು ತಿರಸ್ಕರಿಸಿತ್ತು. ಮತ್ತೊಂದಡೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ‌ವಿಚಾರಣೆ ನವಂಬರ್ 16 ಕ್ಕೆ ಮುಂದುಡಿಕೆಯಾಗಿದೆ.

ಆರ್‌ಡಿ ಪಾಟೀಲ್‌ ವಿರುದ್ಧ ಅಫಜಲಪುರ, ವಿವಿ ಠಾಣೆ, ಅಶೋಕ ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: ಕಲಬುರಗಿ ಕೆಇಎ ಪರೀಕ್ಷೆ ಅಕ್ರಮ: ಆರೋಪಿ ಆರ್​ಡಿ ಪಾಟೀಲ್ ಜಾಮೀನು ಅರ್ಜಿ ತಿರಸ್ಕೃತ

ಬಂಧನಕ್ಕೆ ಸಹಕಾರಿಯಾಯ್ತು ಸಿಐಡಿ ಅಧಿಕಾರಿಗಳ ಮಾಹಿತಿ

ಕೆಇಎ ಪರೀಕ್ಷೆ ಕಿಂಗಪಿನ್ ರುದ್ರಗೌಡ ಪಾಟೀಲ್ ಬಂಧನಕ್ಕೆ ಪೊಲೀಸರಿಗೆ ಸಿಐಡಿ ಅಧಿಕಾರಿಗಳ ಮಾಹಿತಿ ಸಹಕಾರಿಯಾಗಿದೆ. ಈ ಹಿಂದೆ ಪಿಎಸ್ಐ ‌ಅಕ್ರಮದಲ್ಲಿ ರುದ್ರಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೀಗಾಗಿ ಅವರಲ್ಲಿ ಆತನ ಬಗ್ಗೆ ಹೆಚ್ಚು ಮಾಹಿತಿ ಇದ್ದವು. ಕಲಬುರಗಿಯಲ್ಲಿರೋ ಕೆಲ ಸಿಐಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದ ಕಲಬುರಗಿ ಪೊಲೀಸರು ಆತನ ಅಡಗುತಾಣ, ಆತನ ಸಹಚರರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಿದ್ದರು.

ರಾಜಕೀಯವಾಗಿ ಬಹಳ ಸದ್ದು ಮಾಡಿದ್ದ ಪ್ರಕರಣ

ಕೆಇಎ ಪರೀಕ್ಷೆ ಅಕ್ರಮ ಹಾಗೂ ಆರ್​ಡಿ ಪಾಟೀಲ್​ ವಿಚಾರ ರಾಜ್ಯ ರಾಜಕೀಯದಲ್ಲಿಯೂ ಬಹಳಷ್ಟು ಸದ್ದು ಮಾಡಿದೆ. ಆರ್​ಡಿ ಪಾಟೀಲ್ ಬಂಧನವಾದರೆ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೊರಬರುವ ಆತಂಕ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಅದಕ್ಕಾಗಿಯೇ ಆತ ಪರಾರಿಯಾಗಲು ಬಿಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:44 pm, Fri, 10 November 23