ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಆತಂಕ; ಬೀದಿ ನಾಯಿಗಳ ಕಾಟಕ್ಕೆ ತತ್ತರಿಸಿದ ಪ್ರಯಾಣಿಕರು

| Updated By: preethi shettigar

Updated on: Jul 12, 2021 | 10:17 AM

ನಿಲ್ದಾಣಕ್ಕೆ ಬರುವ ಪ್ರಯಾಣಿಕರ ನಡುವೆಯೇ ರಾಜಾ ರೋಷವಾಗಿ ನಾಯಿಗಳು ಓಡಾಡುತ್ತಿದ್ದು, ಯಾವಾಗ ಯಾವ ಪ್ರಯಾಣೀಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತವೋ ಎನ್ನುವ ಆತಂಕ ಶುರುವಾಗಿದೆ ಎಂದು ಪ್ರಯಾಣಿಕ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಆತಂಕ; ಬೀದಿ ನಾಯಿಗಳ ಕಾಟಕ್ಕೆ ತತ್ತರಿಸಿದ ಪ್ರಯಾಣಿಕರು
ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ
Follow us on

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಇಷ್ಟು ದಿನ ಈ ನಿಲ್ದಾಣದಲ್ಲಿ ಕೊರೊನಾ ಆತಂಕವಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು, ಕೊರೊನಾ ಎರಡನೇ ಅಲೆಯ ಆತಂಕ ದೂರವಾಗಿದೆ. ಹೀಗಾಗಿ ಜನರು ಕೂಡ ಪ್ರಯಾಣದತ್ತ ಮುಖ ಮಾಡಿದ್ದಾರೆ. ಆದರೆ ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಮತ್ತೊಂದು ಆತಂಕ ಎದುರಾಗಿದ್ದು, ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಭಯದಲ್ಲೇ ಓಡಾಡುವಂತಾಗಿದೆ.

ಕೊರೊನಾ ಎರಡನೇ ಅಲೆಯ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣೀಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ನಡುವೆ ಪ್ರಯಾಣಿಕರ ಜತೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ ಸಹ ಹೆಚ್ಚಾಗಿದ್ದು, ನಿಲ್ದಾಣದ ಟರ್ಮಿನಲ್ ಸೇರಿದಂತೆ ಪಾರ್ಕಿಂಗ್ ಏರಿಯಾಗಳಲೆಲ್ಲ ಹಿಂಡು ಹಿಂಡಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಜತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ನಡುವೆಯೇ ರಾಜಾ ರೋಷವಾಗಿ ನಾಯಿಗಳು ಓಡಾಡುತ್ತಿದ್ದು, ಯಾವಾಗ ಯಾವ ಪ್ರಯಾಣೀಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತವೋ ಎನ್ನುವ ಆತಂಕ ಶುರುವಾಗಿದೆ ಎಂದು ಪ್ರಯಾಣಿಕ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಟರ್ಮಿನಲ್​ನಲ್ಲಿರುವ ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮುಂದೆ ಆಹಾರ ಸೇವಿಸುವ ಪ್ರಯಾಣಿಕರ ಮುಂದೆಯೇ ನಿಲ್ಲುವ ನಾಯಿಗಳು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಜತೆಗೆ ಅತಿ ಹೆಚ್ಚಾಗಿ ಪಾರ್ಕಿಂಗ್ ಲಾಟ್​ಗಳ ಬಳಿ ಬಿಡು ಬಿಟ್ಟಿರುವ ಈ ಬೀದಿ ನಾಯಿಗಳು ಪ್ರಯಾಣಿಕರು ಟ್ಯಾಕ್ಸಿಗಳನ್ನಿಡಿಯಲು ಬರುತ್ತಿದ್ದರೆ, ಅವರ ಮೇಲೆ ಬೋಗಳಿ ಭಯ ಹುಟ್ಟಿಸುತ್ತಿವೆ. ಸರಿ ಸುಮಾರು 80 ರಿಂದ 100 ಬೀದಿ ನಾಯಿಗಳ ಹಿಂಡು ಇಡೀ ಏರ್ಪೋಟ್ ಟರ್ಮಿನಲ್ ಆವರಣದಲ್ಲಿ ಬಿಡು ಬಿಟ್ಟಿದ್ದು, ಯಾವಾಗ ಕಚ್ಚುತ್ತವೆಯೋ ಎನ್ನುವ ಆತಂಕ ಪ್ರಯಾಣಿಕರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ಎದುರಾಗಿದೆ. ಇನ್ನೂ ಈ ಬಗ್ಗೆ ಎಷ್ಟೇ ಹೇಳಿದರು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏರ್ಪೋಟ್ ಆಡಳಿತ ಮಂಡಳಿ ಟರ್ಮಿನಲ್ ಆವರಣದಲ್ಲಿ ಬೀದಿ ನಾಯಿಗಳ ಹಾವಾಳಿಗೆ ಮುಕ್ತಿ ನೀಡಿ ಪ್ರಯಾಣಿಕರ ಆತಂಕ ದೂರ ಮಾಡಿ ಎಂದು ಇಲ್ಲಿನ ಟ್ಯಾಕ್ಸಿ ಚಾಲಕ ವೆಂಕಟೇಶ್ ಒತ್ತಾಯಿಸಿದ್ದಾರೆ.

ಒಟ್ಟಾರೆ ಕೊರೊನಾ ಕಡಿಮೆಯಾಗುತ್ತಿದ್ದಂತೆ, ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಕಾಟದಿಂದ ಪ್ರಯಾಣಿಕರು ದಿನನಿತ್ಯ ಹೈರಣಾಗುತ್ತಿದ್ದಾರೆ ಇನ್ನಾದರೂ ಏರ್ಪೋಟ್ ಆಡಳಿತ ಮಂಡಳಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.

ಇದನ್ನೂ ಓದಿ:

ಬೀದಿ ನಾಯಿಗಳ ಕಾಟಕ್ಕೆ ನಲುಗಿದ ಹಾವೇರಿ ಜನತೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಮತ್ತೆ ಪ್ರಯಾಣಿಕರಿಂದ ಜೀವಕಳೆ ಪಡೆದುಕೊಂಡ ಕೆಂಪೇಗೌಡ ವಿಮಾನ ನಿಲ್ದಾಣ; ಟ್ಯಾಕ್ಸಿ ಚಾಲಕರ ಮೊಗದಲ್ಲಿ ಮಂದಹಾಸ

 

Published On - 9:31 am, Mon, 12 July 21