ಮತ್ತೆ ಪ್ರಯಾಣಿಕರಿಂದ ಜೀವಕಳೆ ಪಡೆದುಕೊಂಡ ಕೆಂಪೇಗೌಡ ವಿಮಾನ ನಿಲ್ದಾಣ; ಟ್ಯಾಕ್ಸಿ ಚಾಲಕರ ಮೊಗದಲ್ಲಿ ಮಂದಹಾಸ

ಲಾಕ್​ಡೌನ್ ವೇಳೆ ದಿನದ 24 ಗಂಟೆ ಕಾದರು ಪ್ರಯಾಣಿಕರು ಬರುತ್ತಿರಲಿಲ್ಲ. ಹೀಗಾಗಿ ನಾವು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ದಿನಕ್ಕೆರಡು ಬಾಡಿಗೆಗಳು ಸಿಗುತ್ತಿದ್ದು, ಏರ್ಪೋಟ್ ಟ್ಯಾಕ್ಸಿ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ ಎಂದು ಟ್ಯಾಕ್ಸಿ ಚಾಲಕ ಶಿವರಾಜ್ ತಿಳಿಸಿದ್ದಾರೆ.

ಮತ್ತೆ ಪ್ರಯಾಣಿಕರಿಂದ ಜೀವಕಳೆ ಪಡೆದುಕೊಂಡ ಕೆಂಪೇಗೌಡ ವಿಮಾನ ನಿಲ್ದಾಣ; ಟ್ಯಾಕ್ಸಿ ಚಾಲಕರ ಮೊಗದಲ್ಲಿ ಮಂದಹಾಸ
ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ
TV9kannada Web Team

| Edited By: sadhu srinath

Jun 30, 2021 | 1:11 PM

ಬೆಂಗಳೂರು: ಸಿಲಿಕಾನ್ ಸಿಟಿಯ ಏರ್ಪೋಟ್ ಎಂದರೆ ಜನ ಮತ್ತು ಗ್ರೀನರಿಗೆ ಹೆಸರುವಾಸಿ. ಹೀಗಾಗಿ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ (ಕೆಐಎಎಲ್) ಹಚ್ಚ ಹಸಿರಿನ ಪರಿಸರ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣೀಕರ ಪ್ರಯಾಣದಿಂದ ದೇಶದಲ್ಲೇ ಉತ್ತಮ ಏರ್ಪೋಟ್ ಆಗಿ ಹೊರಹೊಮಿತ್ತು. ಆದರೆ ಈ ನಡುವೆ ಕೊರೊನಾ ಒಂದು ಮತ್ತು ಎರಡನೇ ಅಲೆ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಚಿತ್ರಣವನ್ನೇ ಬದಲಾಯಿಸಿದ್ದು, ಜನರಿಲ್ಲದೆ ಬಿಕೋ ಎನ್ನುವಂತಾಗಿತ್ತು. ವಿಮಾನದ ಹಾರಾಟವಿಲ್ಲದೆ, ಸುತ್ತಲಿನ ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಆಗಿದ್ದವು. ಆದರೆ ಕೆಐಎಎಲ್​ಗೆ ಇದೀಗ ಪ್ರಯಾಣಿಕರ ಆಗಮನದಿಂದ ಜೀವಕಳೆ ಬಂದಿದ್ದು, ಪ್ರಯಾಣಿಕರು ಮತ್ತು ಅಂಗಡಿ ಮುಂಗಟ್ಟುಗಳಿಂದ ಟರ್ಮಿನಲ್ ಕಂಗೋಳಿಸುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಸ್ವಲ್ಪ ಚೇತರಿಕೆ ಕಾಣಲು ಮುಂದಾಗಿದೆ. ಈ ವರ್ಷ ಸತತ ಎರಡು ತಿಂಗಳಿಂದ ಒಂದು ಸಾವಿರ ಜನ ಪ್ರಯಾಣಿಕರು ಆಗಮಿಸದ, ಕೆಐಎಎಲ್​ನಲ್ಲಿ ಇದೀಗ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ 5 ರಿಂದ 8 ಸಾವಿರ ಜನ ಪ್ರಯಾಣಿಕರು ಕೆಐಎಎಲ್ ನಿಂದ ಬೇರೆಡೆ ಸಂಚಾರ ಮಾಡುತ್ತಿದ್ದು, ಇಷ್ಟು ದಿನ ಬಿಕೋ ಎನ್ನುತ್ತಿದ್ದ ಟರ್ಮಿನಲ್​ನಲ್ಲಿ ಪ್ರಯಾಣಿಕರ ಕಲರವ ಶುರುವಾಗಿದೆ. ಜತೆಗೆ ಪ್ರಯಾಣಿಕರ ನಿರ್ಗಮನ ಮತ್ತು ಆಗಮನದಿಂದಾಗಿ ಟರ್ಮಿನಲ್​ನ ಅಂಗಡಿ ಮುಂಗಟ್ಟುಗಳು, ಬಿಎಂಟಿಸಿ ಬಸ್ ಮತ್ತು ಟ್ಯಾಕ್ಸಿ ಚಾಲಕರಿಗೂ ಒಂದಷ್ಟು ಖುಷಿ ತಂದಿದೆ.

ಕಳೆದ ಒಂದು ವರ್ಷದಲ್ಲಿ ಏರ್ಪೋಟ್ ಮೇಲೆ ಕೊರೊನಾ ಬೀರಿದ ಪರಿಣಾಮ

* 2019 – 20 ನೇ ಸಾಲಿನಲ್ಲಿ ಕೆಐಎಎಲ್​ನಿಂದ 32.3 ಲಕ್ಷ ಪ್ರಯಾಣೀಕರು ದೇಶದ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಿದ್ದಾರೆ.

* 2020 – 21 ನೇ ಸಾಲಿನಲ್ಲಿ ಕೊರೊನಾ ಪರಿಣಾಮ ಕೇವಲ 10.31 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದು, ಶೇಖಡ 63% ರಷ್ಟು ಪ್ರಯಾಣೀಕರ ಸಂಖ್ಯೆ ಇಳಿಕೆ ಕಂಡಿದೆ.

* 2019 – 20 ನೇ ಆರ್ಥಿಕ ವರ್ಷದಲ್ಲಿ ಕೆಐಎಎಲ್ ನಿಂದ 40 ಲಕ್ಷ ಪ್ರಯಾಣಿಕರು ವಿದೇಶಗಳಿಗೆ ಪ್ರಯಾಣ ಮಾಡಿದ್ದರು.

* 2020 – 21 ನೇ ಸಾಲಿನಲ್ಲಿ ಕೇವಲ 4 ಲಕ್ಷ ಜನರು ಮತ್ತು ವಿದೇಶಗಳಿಗೆ ಪ್ರಯಾಣ ಮಾಡಿದ್ದು, ಶೇ 90% ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.

ಲಾಕ್​ಡೌನ್ ವೇಳೆ ದಿನದ 24 ಗಂಟೆ ಕಾದರು ಪ್ರಯಾಣಿಕರು ಬರುತ್ತಿರಲಿಲ್ಲ. ಹೀಗಾಗಿ ನಾವು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ದಿನಕ್ಕೆರಡು ಬಾಡಿಗೆಗಳು ಸಿಗುತ್ತಿದ್ದು, ಏರ್ಪೋಟ್ ಟ್ಯಾಕ್ಸಿ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ ಎಂದು ಟ್ಯಾಕ್ಸಿ ಚಾಲಕ ಶಿವರಾಜ್ ತಿಳಿಸಿದ್ದಾರೆ.

ಒಟ್ಟಾರೆ ಕೊರೊನಾ ಒಂದು ಮತ್ತು ಎರಡನೇ ಅಲೆಯಿಂದಾಗಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಮತ್ತೆ ಹಿಂದಿನಂತೆ ಪ್ರಯಾಣಿಕರಿಂದ ತುಂಬಲು ಶುರುವಾಗಿರುವುದು ಸಂತಸ ಸೃಷ್ಟಿಸಿದೆ. ಆದರೆ ಕೊರೊನಾ ದೂರವಾಗಿದೆ ಎಂದು ಸಾಮಾಜಿಕ ಅಂತರ ಮತ್ತು ಮಾಸ್ಕ್ ಮರೆಯುವ ಬದಲು ಎಚ್ಚರಿಕೆ ವಹಿಸುವುದು ಸೂಕ್ತ.

ಇದನ್ನೂ ಓದಿ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡಿ ಬೇಕೆಂದು ವ್ಯಕ್ತಿ ರಂಪಾಟ; ವಿಡಿಯೋ ನೋಡಿ

ಏರ್ ಇಂಡಿಯಾ ವಿಮಾನದಲ್ಲಿ ಏಕಾಂಗಿ ಪ್ರಯಾಣ; ಮಹಾರಾಜನಂತೆ ಅನಿಸಿತು ಎಂದು ಅನುಭವ ಹಂಚಿಕೊಂಡ ವ್ಯಕ್ತಿ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada