AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Crime ಅಜ್ಜಿಯನ್ನೇ ಕೊಂದ ಮೊಮ್ಮಗ ಅರೆಸ್ಟ್, ಮತ್ತೊಂದೆಡೆ ಹಳೇ ವೈಷಮ್ಯಕ್ಕೆ ಯುವಕನ ಕೊಲೆ

ಹಣಕಾಸು ವಿಚಾರವಾಗಿ ವೃದ್ಧೆ ಗೌರಮ್ಮ ಜತೆ ಮೊಮ್ಮಗ ಮಂಜುನಾಥ್ನಿಗೆ ಭಿನ್ನಾಭಿಪ್ರಾಯವಾಗಿತ್ತು. ಮಂಜುನಾಥ್ ಕತ್ತು ಹಿಸುಕಿ ಗೌರಮ್ಮ(77) ಕೊಲೆ ಮಾಡಿದ್ದಾನೆ.

Karnataka Crime ಅಜ್ಜಿಯನ್ನೇ ಕೊಂದ ಮೊಮ್ಮಗ ಅರೆಸ್ಟ್, ಮತ್ತೊಂದೆಡೆ ಹಳೇ ವೈಷಮ್ಯಕ್ಕೆ ಯುವಕನ ಕೊಲೆ
ಅಜ್ಜಿಯನ್ನೇ ಕೊಂದ ಮೊಮ್ಮಗ ಅರೆಸ್ಟ್
TV9 Web
| Edited By: ಆಯೇಷಾ ಬಾನು|

Updated on: Jul 12, 2021 | 9:46 AM

Share

ಮಡಿಕೇರಿ: ಮಣಜೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆ ಶವ ಪತ್ತೆಯಾದ ಕೇಸ್ಗೆ ಸಂಬಂಧಿಸಿ ವೃದ್ಧೆ ನಿಗೂಢ ಸಾವಿನ ಕಾರಣ ಬಯಲಾಗಿದೆ. ಮೊಮ್ಮಗನೇ ಅಜ್ಜಿಯನ್ನು ಕೊಂದಿದ್ದು ವೃದ್ಧೆ ಹತ್ಯೆಗೈದಿದ್ದ ಮೊಮ್ಮಗ ಮಂಜುನಾಥ್(40) ಅರೆಸ್ಟ್ ಆಗಿದ್ದಾರೆ. ಕೊಡಗಿನ ಕುಶಾಲನಗರ ತಾಲ್ಲೂಕಿನ ಮಣಜೂರಿನಲ್ಲಿ ಈ ಘಟನೆ ನಡೆದಿದೆ.

ಹಣಕಾಸು ವಿಚಾರವಾಗಿ ವೃದ್ಧೆ ಗೌರಮ್ಮ ಜತೆ ಮೊಮ್ಮಗ ಮಂಜುನಾಥ್ನಿಗೆ ಭಿನ್ನಾಭಿಪ್ರಾಯವಾಗಿತ್ತು. ಮಂಜುನಾಥ್ ಕತ್ತು ಹಿಸುಕಿ ಗೌರಮ್ಮ(77) ಕೊಲೆ ಮಾಡಿದ್ದಾನೆ. ಮಣಜೂರಿನಲ್ಲಿ ಜು.3ರಂದು ಗೌರಮ್ಮ ಶವ ಪತ್ತೆಯಾಗಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸ್ ತನಿಖೆಯಲ್ಲಿ ಕೊಲೆ ಬಹಿರಂಗವಾಗಿದೆ. ಸದ್ಯ ಆರೋಪಿ ಮಂಜುನಾಥ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹಳೇ ವೈಷಮ್ಯಕ್ಕೆ ಕೊಲೆ ಇನ್ನು ಹುಬ್ಬಳ್ಳಿಯಲ್ಲಿ ಚಾಕು ಇರಿದು ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಗೋಪನಕೊಪ್ಪ ಅಮರ ಕಾಲೋನಿ ಕ್ರಾಸ್‌ ಬಳಿ ತಡ ರಾತ್ರಿ ಹಳೇ ವೈಷಮ್ಯ ಹಿನ್ನೆಲೆ ಅಭಿಷೇಕ್ ಗೌಡ ಪಾಟೀಲ್(22) ಹತ್ಯೆ ಮಾಡಲಾಗಿದೆ. ಅಭಿಷೇಕ್, ಬಿಜೆಪಿ ಮುಖಂಡ ಈಶ್ವರ ಗೌಡ ಅಣ್ಣನ ಮಗ. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

karnataka crime

ಹಳೇ ವೈಷಮ್ಯಕ್ಕೆ ಕೊಲೆಯಾದ ಅಭಿಷೇಕ್ ಗೌಡ ಪಾಟೀಲ್

ರೈಲಿಗೆ ಸಿಲುಕಿ ಸಾವು ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಬಳಿ ದುರ್ಘಟನೆಯೊಂದು ಸಂಭವಿಸಿದೆ. ರೈಲಿಗೆ ಸಿಲುಕಿ ಸುಮಾರು 25 ವರ್ಷದ ಯುವಕ ಮೃತಪಟ್ಟಿದ್ದಾನೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

(Karnataka Crime man killed her granny and miscreants murdered youth )

ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪತಿ; ಎರಡು ಮುಗ್ಧ ಕಂದಮ್ಮಗಳು ಅನಾಥ

Follow Us
TV9 Web
TV9 Web

TV9 Kannada

Read More
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ