AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಫ್ ರಾಷ್ಟ್ರಗಳಿಗೂ ಲಗ್ಗೆ ಇಡಲು ಸಜ್ಜಾದ ‘ಕರಾವಳಿ; ಆರು ದಿನಗಳ ಗಳಿಕೆ ಎಷ್ಟು?

ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ವಿಶ್ವಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಲೋಕಕ್ಕೆ ಮನಸೋತ ಸಿನಿಪ್ರಿಯರು ಚಿತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ ಗಲ್ಫ್ ರಾಷ್ಟ್ರಗಳಿಗೆ ಲಗ್ಗೆ ಇಡುತ್ತಿದೆ.

ಗಲ್ಫ್ ರಾಷ್ಟ್ರಗಳಿಗೂ ಲಗ್ಗೆ ಇಡಲು ಸಜ್ಜಾದ ‘ಕರಾವಳಿ; ಆರು ದಿನಗಳ ಗಳಿಕೆ ಎಷ್ಟು?
ಕರವಾಳಿ
ರಾಜೇಶ್ ದುಗ್ಗುಮನೆ
|

Updated on: Jul 30, 2026 | 9:01 AM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ಕರಾವಳಿ ಅಬ್ಬರ
  • 6 ದಿನಗಳಲ್ಲಿ 5 ಲಕ್ಷಕ್ಕೂ ಅಧಿಕ ಜನರಿಂದ ಸಿನಿಮಾ ವೀಕ್ಷಣೆ
  • ಗಲ್ಫ್ ರಾಷ್ಟ್ರಗಳಿಗೆ ಎಂಟ್ರಿ ಕೊಟ್ಟ ಕಂಬಳದ ಕಥೆ

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬಂದಿರುವ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾ (Karavali Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡುತ್ತಿದೆ. ಕರಾವಳಿಯ ಹೆಮ್ಮೆಯ ಕಂಬಳದ ಅದ್ಭುತ ಪ್ರಪಂಚವನ್ನು ಬೆಳ್ಳಿಪರದೆಯ ಮೇಲೆ ಅದ್ಧೂರಿಯಾಗಿ ಅನಾವರಣಗೊಳಿಸಿರುವ ಈ ಚಿತ್ರಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ಈಗ ಗಲ್ಫ್ ರಾಷ್ಟ್ರಗಳಿಗೂ ಲಗ್ಗೆ ಇಡಲು ಸಜ್ಜಾಗಿದೆ. ಈ ಮುಂಬರುವ ಶುಕ್ರವಾರದಿಂದ ದುಬೈ ಹಾಗೂ ಅಬುಧಾಬಿಯಲ್ಲೂ ‘ಕರಾವಳಿ’ ಅಬ್ಬರ ಶುರುವಾಗಲಿದ್ದು, ಅನಿವಾಸಿ ಭಾರತೀಯರನ್ನು ರಂಜಿಸಲಿದೆ.

ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳಾದ ‘ಸರ್ವಂಮಯ’, ‘ಜನನಾಯಗನ್’, ‘ಬಾಲನ್’, ‘ಕರಪ್ಪು’, ‘ಪೆದ್ದಿ’ ಸೇರಿದಂತೆ ಹಲವು ಸಿನಿಮಾಗಳನ್ನು ಯಶಸ್ವಿಯಾಗಿ ವಿತರಣೆ ಮಾಡಿದ್ದ ಪ್ರಖ್ಯಾತ ‘ಫಾರಾಸ್ ಸಿನಿಮಾಸ್’ ಸಂಸ್ಥೆ ಈಗ ‘ಕರಾವಳಿ’ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಖರೀದಿಸಿ ಜಾಗತಿಕ ಮಟ್ಟದಲ್ಲಿ ರಿಲೀಸ್ ಮಾಡುತ್ತಿರುವುದು ವಿಶೇಷ.

ಜುಲೈ 24 ರಂದು ರಾಜ್ಯಾದ್ಯಂತ ಸುಮಾರು 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ‘ಕರಾವಳಿ’ ಚಿತ್ರಕ್ಕೆ, ಈಗ ಸಾರ್ವಜನಿಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಚಿತ್ರಮಂದಿರಗಳ ಸಂಖ್ಯೆ ಹಾಗೂ ಶೋಗಳ ಲಿಸ್ಟ್ ಅನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ವರದಿ ಆಗಿದೆ.

ಕಲೆಕ್ಷನ್ ವಿಚಾರದಲ್ಲೂ ‘ಕರಾವಳಿ’ ಹೊಸ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಗಾಂಧಿನಗರದಲ್ಲಿ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಸ್ತುತ ಚಿತ್ರದ ಒಟ್ಟು ಗಳಿಕೆ ಭರ್ಜರಿ 6 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ವರದಿ ಆಗಿದೆ. ಸ್ಯಾಂಡಲ್‌ವುಡ್‌ನ ಇಂದಿನ ಮಾರುಕಟ್ಟೆ ಪರಿಸ್ಥಿತಿಗೆ ಇದು ಅತ್ಯಂತ ದೊಡ್ಡ ಬಿಸಿನೆಸ್.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ‘ಕರಾವಳಿ’ ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಬಿ ಶೆಟ್ಟಿ ಖುಷ್

ಈ ವರ್ಷ ಅತ್ಯುತ್ತಮ ಓಪನಿಂಗ್ ಪಡೆದುಕೊಂಡ ಕನ್ನಡದ ಟಾಪ್ ಸಿನಿಮಾಗಳ ಸಾಲಿಗೆ ‘ಕರಾವಳಿ’ ಸೇರ್ಪಡೆಯಾಗಿದೆ. ಕೇವಲ ಆರೇ ದಿನಗಳಲ್ಲಿ 5 ಲಕ್ಷಕ್ಕೂ ಅಧಿಕ ಸಿನಿಪ್ರಿಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿರುವುದು ಚಿತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಈ ಕ್ರೇಜ್ ನೋಡಿ ಪರಭಾಷೆಗಳಲ್ಲೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಮುಂದಿನ ವಾರದಲ್ಲೇ ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಿಗೂ ಚಿತ್ರ ಡಬ್ ಆಗಿ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!